ಬೆಂಗಳೂರು: ಕೋವಿಡ್ ಸೋಂಕು ಪ್ರಮಾಣ ಕುಸಿದಿದ್ದರೂ ಮೈಕ್ರೋ ಕಂಟೈನ್ ಮೆಂಟ್ ಜೋನ್ ಗಳ ಸಂಖ್ಯೆಯಲ್ಲಿ ಹೆಚ್ಚಳ!

ಬೆಂಗಳೂರಿನಲ್ಲಿ ಲಾಕ್ ಡೌನ್ ಬಹುತೇಕ ತೆರವುಗೊಂಡು ಜನಜೀವನ ಸಹಜಸ್ಥಿತಿಗೆ ಮರಳಿದೆ. ಇದರ ಕೋವಿಡ್ ಸೋಂಕಿನ ಪ್ರಕರಣಗಳು ಕಡಿಮೆಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಲಾಕ್ ಡೌನ್ ಬಹುತೇಕ ತೆರವುಗೊಂಡು ಜನಜೀವನ ಸಹಜಸ್ಥಿತಿಗೆ ಮರಳಿದೆ. ಇದರ ಕೋವಿಡ್ ಸೋಂಕಿನ ಪ್ರಕರಣಗಳು ಕಡಿಮೆಯಾಗಿವೆ, ಆದರೆ ಮೈಕ್ರೋ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಜುಲೈ 1 ರ ವೇಳೆಗೆ 44 ಇದ್ದ ಮೈಕ್ರೋ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ಜುಲೈ 18ರ ವೇಳೆಗೆ 60ಕ್ಕೆ ಏರಿಕೆಯಾಗಿದೆ. ಮಹಾದೇವ ಪುರದ ನಂತರ ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಮೈಕ್ರೋ ಕಂಟೈನ್ ಮೆಂಟ್ ವಲಯವಾಗಿದೆ. ಕೋವಿಡ್ ಎರಡನೇ ಅಲೆ ಪ್ರಾರಂಭವಾದಾಗಿನಿಂದ, 613 ಮೈಕ್ರೋ ಕಂಟೈನ್ ಮೆಂಟ್ ವಲಯಗಳೆಂದು ಘೋಷಿಸಲಾಗಿತು ಮತ್ತು ಅವುಗಳಲ್ಲಿ 555 ನಿಷ್ಕ್ರಿಯಗೊಳಿಸಲಾಗಿದೆ.

ನಾವು ಸಕ್ರಿಯವಾಗಿ ಕಂಟೈನ್ ಮೆಂಟ್ ತಂತ್ರ ಅನುಸರಿಸುತ್ತಿದ್ದೇವೆ, ಇದರಿಂದ ಸೋಂಕು ಹರಡುವುದಿಲ್ಲ. ಪ್ರಕರಣಗಳು ಇನ್ನೂ ಹೆಚ್ಚುವುದಿಲ್ಲ, ಆದ್ದರಿಂದ ಸದ್ಯಕ್ಕೆ ಯಾವುದೇ ಚಿಂತೆಯಿಲ್ಲ.  ಇತರ ರಾಜ್ಯಗಳಿಂದ ಹಿಂದಿರುಗಿದ ನಂತರ ಹಲವರು ಸೋಂಕು ತಗುಲಿದೆ ಎಂದು ಬೊಮ್ಮನಹಳ್ಳಿ ವಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೊಮ್ಮನಹಳ್ಳಿ (712), ನಂತರದ ಸ್ಥಾನದಲ್ಲಿ ಮಹಾದೇವಪುರ (664), ಪೂರ್ವ ವಲಯ (547), ದಕ್ಷಿಣ ವಲಯ (430), ಆರ್.ಆರ್.ನಗರ (417), ಯಲಹಂಕ (397) ಮತ್ತು ಪಶ್ಚಿಮ ವಲಯ ( 347) ಗಳಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ನಾವು ಹೆಚ್ಚಿನ ಪರೀಕ್ಷೆಗಳನ್ನು ಮಾಡುತ್ತಿರುವ ಕಾರಣ ಹೆಚ್ಚು ಪಾಸಿಟಿವ್  ಪ್ರಕರಣಗಳು ಪತ್ತೆಯಾಗುತ್ತಿವೆ, ವಲಸಿಗರು ಮತ್ತು ನಿರ್ಮಾಣ ಕಾರ್ಮಿಕರು ಹೊರಾಂಗಣದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಕೋವಿಡ್ ಪಾಸಿಟಿವ್ ಕಂಡು ಬರುತ್ತಿದೆ ಎಂದು ಬೊಮ್ಮನಹಳ್ಳಿ ವಲಯ ಅಧಿಕಾರಿ ಹೇಳಿದ್ದಾರೆ.

ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಅಂದರೆ  1,20,853 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ, ಮಹಾದೇವಪುರ -99,492, ಪಶ್ಚಿಮ ವಲಯ- 90,059, ಪೂರ್ವ ವಲಯ- 85,969, ದಕ್ಷಿಣ ವಲಯ- 77,303, ಯಲಹಂಕ- 59,195 ಮತ್ತು ದಾಸರಹಳ್ಳಿಯಲ್ಲಿ 21,046 ಪರೀಕ್ಷೆಗಳನ್ನು ನಡೆಸಲಾಗಿದೆ.

ವಲಯವಾರು ಮೈಕ್ರೋ ಕಂಟೈನ್ ಮೆಂಟ್ ಜೋನ್ಸ್ ವಿವರ ಇಂತಿದೆ

ಬೊಮ್ಮನಹಳ್ಳಿ- 15
ಮಹಾದೇವಪುರ-12
ಪೂರ್ವ ವಲಯ-9
ದಾಸರಹಳ್ಳಿ-8
ಯಲಹಂಕ-5
ಆರ್ ಆರ್ ನಗರ-4
ಪಶ್ಚಿಮ ವಲಯ-4 
ದಕ್ಷಿಣ ವಲಯ-3

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com