ದಲಿತರನ್ನು ಎತ್ತಿ ಕಟ್ಟಲು ಯತ್ನಿಸಿದ ಇಂದ್ರಜಿತ್ ವಿರುದ್ಧ ಕ್ರಮ ಕೈಗೊಳ್ಳಿ; ಗೃಹ ಸಚಿವರಿಗೆ ಟಿಜೆ ಅಬ್ರಾಹಂ ದೂರು
ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಮಂಗಳವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.
Published: 21st July 2021 08:22 AM | Last Updated: 21st July 2021 08:22 AM | A+A A-

ಇಂದ್ರಜಿತ್ ಲಂಕೇಶ್
ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಮಂಗಳವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.
ವಿಧಾನಸೌಧದಲ್ಲಿ ಗೃಹಸಚಿವರನ್ನು ಭೇಟಿ ಮಾಡಿ ಇಂದ್ರಜಿತ್ ಲಂಕೇಶ್ ವಿರುದ್ಧ ದೂರು ನೀಡಿದ ಬಳಿಕ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ದಲಿತ ಅನ್ನೋ ಪದವನ್ನು ಪದೇ ಪದೇ ಬಳಸಿದ್ದಾರೆ. ಜಾತಿಗಳ ಬಗ್ಗೆ ಉಲ್ಲೇಖಿಸಿ ಶತ್ರುತ್ವ ಬೆಳೆಯುವಂತಹ ಹೇಳಿಕೆ ನೀಡಿರುವ ಇಂದ್ರಜಿತ್ ಲಂಕೇಶ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ದೂರಿನಲ್ಲಿ ಕೋರಿದ್ದಾರೆ.
ದಲಿತರಿಗೆ ಬೇರೆ ಸಮುದಾಯದ ಬಗ್ಗೆ ಕೋಪ ಬರುವಂತೆ ಇಂದ್ರಜಿತ್ ಲಂಕೇಶ್ ಮಾತನಾಡಿದ್ದಾರೆ. ದಲಿತರನ್ನು ಎತ್ತಿ ಕಟ್ಟಲು ಇಂದ್ರಜಿತ್ ಪ್ರಯತ್ನಪಟ್ಟಿದ್ದಾರೆ. ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ಮೈಸೂರು ಪೋಲಿಸರ ಮಾನ - ಮರ್ಯಾದೆ ಹೋಗಿದೆ ಎಂದು ಆರೋಪಿಸಿದ್ದಾರೆ.
ಇಂದ್ರಜಿತ್ ವಿರುದ್ಧ ಮೈಸೂರು ಪೊಲೀಸರು ಮಾನನಷ್ಟ ಮೊಕದ್ದಮೆ ದಾಖಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಹೇಳಿದ್ದಾರೆ. ದಲಿತ ಸಪ್ಲೈಯರ್ ಮೇಲೆ ಹಲ್ಲೆ ಆಗಿದೆ ಎಂದು ಒತ್ತಿ ಹೇಳ್ತಾರೆ. ಪೊಲೀಸರು ಕಾಂಪ್ರಮೈಜ್ ಆಗಿದ್ದಾರೆ. ಮೈಸೂರಿನ ಪೊಲೀಸ್ ಸ್ಟೇಷನ್‌ಗಳು ಸೆಟಲ್‌ಮೆಂಟ್ ಸ್ಟೇಷನ್ ಎಂದು ಹೇಳಿದ್ದಾರೆ. ಇದರ ವಿರುದ್ಧ ತನಿಖೆ ನಡೆಸಿ ಎಂದು ದೂರು ನೀಡಿದ್ದೇನೆ ಎಂದು ಟಿಜೆ ಅಬ್ರಹಾಂ ಹೇಳಿದರು.