ಬೀದರ್: ಭಾರಿ ಮಳೆಗೆ ಮನೆ ಕುಸಿತ, ಮಹಿಳೆ ಸಾವು

ಬೀದರ್ ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೀದರ್ ನಲ್ಲಿ ಮನೆಯ ಛಾವಣಿ ಕುಸಿತವಾಗಿದ್ದು, ದುರ್ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

Published: 21st July 2021 01:53 PM  |   Last Updated: 21st July 2021 02:36 PM   |  A+A-


house collapse

ಛಾವಣಿ ಕುಸಿತ

Posted By : Srinivasamurthy VN
Source : The New Indian Express

ಬೀದರ್: ಬೀದರ್ ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೀದರ್ ನಲ್ಲಿ ಮನೆಯ ಛಾವಣಿ ಕುಸಿತವಾಗಿದ್ದು,. ದುರ್ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಮಂಗಳವಾರ ತಡರಾತ್ರಿ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಛಾವಣಿಯ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಅಂತೆಯೇ ಘಟನೆಯಲ್ಲಿ 3 ಮಂದಿ ಗಾಯಗೊಂಡಿದ್ದು, ಮೃತರನ್ನು ವೈಜಿನಾಥ್ ವಡ್ಡಾರ್ ಅವರ ಪತ್ನಿ ಪಾರ್ವತಿ (35 ವರ್ಷ) ಎಂದು  ಗುರುತಿಸಲಾಗಿದೆ.

ಕಳೆದ 3 ದಿನಗಳಿಂದ ಗ್ರಾಮದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದಿದೆ. ಛಾವಣಿ ಕುಸಿತದ ವೇಳೆ ಮನೆಯಲ್ಲಿ ಪತಿ ವೈಜಿನಾಥ್ ವಡ್ಡಾರ್, ಮೃತ ಪಾರ್ವತಿ, ಮಕ್ಕಳಾದ ಅಕ್ಷರಾ (7) ಮತ್ತು ಅರ್ಚನಾ (4) ಇದ್ದರು. ಈ ಪೈಕಿ ಪಾರ್ವತಿ ಅವರು ಸಾವನ್ನಪ್ಪಿದ್ದು, ಮೂವರು  ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಇಲ್ಲಿನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಸ್ಥಳಕ್ಕೆ ಹುಮ್ನಾಬಾದ್ ತಹಶೀಲ್ದಾರ್ ನಾಗಯ್ಯ ಹಿರೆಮಠ್, ಹನುಮಾಬಾದ್ ತಾಲ್ಲೂಕು ಪಂಚಾಯತ್ ಗೋವಿಂದ್ ಮತ್ತು ಪಿಎಸ್ಐ ರವಿಕುಮಾರ್ ಭೇಟಿ ನೀಡಿದರು. ಅಂತೆಯೇ ಮಾನದಂಡಗಳ ಪ್ರಕಾರ ಪರಿಹಾರವನ್ನು ನೀಡಲಾಗುತ್ತದೆ ಎಂದು ತಹಶೀಲ್ದಾರ್ ಹೇಳಿದ್ದಾರೆ.


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp