ರೈತರ ಪ್ರತಿಭಟನೆ: ಯಲಹಂಕ ಟು ಪೆನುಗೊಂಡ ಟ್ರಾಕ್ ಡಬ್ಲಿಂಗ್ ಯೋಜನೆ ವಿಳಂಬ

ನೈಋತ್ಯ ರೈಲ್ವೆ ವಲಯದ ಯಲಹಂಕ ಮತ್ತು ಪೆನುಗೊಂಡ ನಡುವಿನ ನಿರ್ಣಾಯಕ ಟ್ರಾಕ್ ಡಬಲ್ ಯೋಜನೆ ಅಕ್ಟೋಬರ್ 2021 ರ ವೇಳೆಗೆ ಪೂರ್ಣಗೊಳ್ಳಲ್ಲಿದೆ.
ಹಳಿಗಳ ಮೇಲೆ ಗ್ರಾಮಸ್ಥರ ಪ್ರತಿಭಟನೆ
ಹಳಿಗಳ ಮೇಲೆ ಗ್ರಾಮಸ್ಥರ ಪ್ರತಿಭಟನೆ

ಬೆಂಗಳೂರು: ನೈಋತ್ಯ ರೈಲ್ವೆ ವಲಯದ ಯಲಹಂಕ ಮತ್ತು ಪೆನುಗೊಂಡ ನಡುವಿನ ನಿರ್ಣಾಯಕ ಟ್ರಾಕ್ ಡಬಲ್ ಯೋಜನೆ ಅಕ್ಟೋಬರ್ 2021 ರ ವೇಳೆಗೆ ಪೂರ್ಣಗೊಳ್ಳಲ್ಲಿದ್ದು, ಭೂಸ್ವಾಧೀನ ವಿಳಂಬ ಮತ್ತು ಕೋವಿಡ್-19 ಸಂಬಂಧಿತ ಲಾಕ್ಡೌನ್ ಮತ್ತು ಕಾರ್ಮಿಕ ಸಮಸ್ಯೆಗಳು ಯೋಜನೆಯ ಈ ಹಿಂದಿನ ಅಂತಿಮ  ಗಡುವನ್ನು ಹಿಂದಕ್ಕೆ ತೆಗೆದುಕೊಳ್ಳಲು ಕಾರಣವೆಂದು ಹೇಳಲಾಗುತ್ತಿದೆ.

ಯಲಹಂಕ ದಿಂದ ಪೆನುಗೊಂಡ ವರೆಗಿನ ಸುಮಾರು 120.55 ಕಿ.ಮೀ ಮಾರ್ಗದಲ್ಲಿ ಒಟ್ಟು 48 ಕಿ.ಮೀ ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆಗೆ 2015-16ರಲ್ಲಿಯೇ ಅನುಮತಿ ನೀಡಲಾಗಿತ್ತು. ಆದರೆ ಆಂಧ್ರಪ್ರದೇಶದ ಅನಂತ್‌ಪುರ ಜಿಲ್ಲೆಯ ರಂಗಪಲ್ಲಿಯಲ್ಲಿ ಅಗತ್ಯವಿರುವ ಭೂಮಿಯ ಒಂದು ಭಾಗವನ್ನು ವಶಕ್ಕೆ ಪಡೆಯುವ ವಿಚಾರವಾಗಿ ಅಲ್ಲಿನ ರೈತರು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಯೋಜನೆಯ ಅಂತಿಮ ಗುಡುವು ಮುಂದಕ್ಕೆ ಹೋಗಿದೆ ಎನ್ನಲಾಗಿದೆ. 

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ದೊರೆತಿರುವ ವಿಶ್ವಾಸಾರ್ಹ ಮೂಲಗಳ ಪ್ರಕಾರ, ನಿನ್ನೆ ಅಂದರೆ ಮಂಗಳವಾರ (ಜುಲೈ 20) ರಂದೂ ಕೂಡ ರಂಗಪಲ್ಲಿ ಬಳಿಯ ರೈಲ್ವೆ ಹಳಿಗಳ ಮೇಲೆ ಇದೇ ವಿಚಾರವಾಗಿ ರೈತರು ಪ್ರತಿಭಟನೆ ನಡೆಸಿದರು. ಒಟ್ಟು 48.2 ಕಿ.ಮೀ ಮಾರ್ಗವು ಆಂಧ್ರ ಪ್ರದೇಶದಲ್ಲಿದ್ದು, ಉಳಿದವು ಕರ್ನಾಟಕದಲ್ಲಿ ಬರುತ್ತದೆ. ಯೋಜನೆಗೆ ಅಗತ್ಯವಿರುವ 23.2 ಎಕರೆಗಳನ್ನು ಎಸ್‌ಡಬ್ಲ್ಯುಆರ್ ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ. ಅಸಮಾಧಾನಗೊಂಡ ಭೂ ಮಾಲೀಕರಲ್ಲಿ ಎರಡು ವರ್ಗಗಳಿವೆ. "ಒಂದು ವಿಭಾಗವು ರೈಲ್ವೆಗೆ ಭೂಮಿಯನ್ನು ನೀಡಿದ್ದು, ಯೋಜನೆ ಪೂರ್ಣಗೊಂಡರೆ ಅವರ ಪರಿಹಾರವನ್ನು  ಸಂಪೂರ್ಣವಾಗಿ ಪಾವತಿಸಲಾಗುವುದಿಲ್ಲ ಎಂಬ ಆತಂಕದಲ್ಲಿದ್ದಾರೆ. ಎರಡನೇ ವರ್ಗದ ಭೂಮಾಲೀಕರು ತಮ್ಮ ಜಮೀನಿನ ಭಾಗವನ್ನು ನೀಡಲು ಬಯಸುವುದಿಲ್ಲ ಮತ್ತು ಅದರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲಾಖೆ ಹದಿನೈದು ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಆಶಾವಾದ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು, ನಾವು ಈ ವರ್ಷದ ಸೆಪ್ಟೆಂಬರ್ ಅಲ್ಲಿ ಯೋಜನೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಿದ್ದೇವೆ ಆದರೆ ಈಗ ನಾವು ಅಕ್ಟೋಬರ್  ಅಂತ್ಯದವರೆಗೂ ಯೋಜನೆ ಮುಂದುವರೆಯಬಹುದು ಎಂದು ಭಾವಿಸಲಾಗಿದೆ. ಲಾಕ್ಡೌನ್‌ಗಳ ಸರಣಿ ಮತ್ತು ಕಾರ್ಮಿಕ ಕೊರತೆಯು ಯೋಜನೆಯನ್ನು ವಿಳಂಬಗೊಳಿಸಿತು. ಆದಾಗ್ಯೂ, ಈ ಯೋಜನೆಯು ಹಂತಗಳಲ್ಲಿ ಪೂರ್ಣಗೊಂಡಿದೆ. ವಿಸ್ತರಣೆಗಳು ಕಾರ್ಯರೂಪಕ್ಕೆ ಬಂದಿವೆ. ಮಾಕಳಿದುರ್ಗ ಮತ್ತು ದೇವರಪಲ್ಲಿ  ನಡುವಿನ 36 ಕಿ.ಮೀ ಉದ್ದವನ್ನು 2019 ರ ಏಪ್ರಿಲ್ 5 ರಂದು ಕಾರ್ಯಾರಂಭ ಮಾಡಲಾಗಿದ್ದು, ಯಲಹಂಕ ಮತ್ತು ಮಾಕಳಿದುರ್ಗ ನಡುವಿನ ವಿಸ್ತರಣೆಯನ್ನು ಫೆಬ್ರವರಿ 25, 2021 ರಂದು ಕಾರ್ಯಾರಂಭ ಮಾಡಲಾಯಿತು ಎಂದು ಹೇಳಿದರು.

ಎಸ್‌ಡಬ್ಲ್ಯುಆರ್ ಲಭ್ಯವಿರುವ ಮಾಹಿತಿಯ ಪ್ರಕಾರ, ಯೋಜನೆಯ ಒಟ್ಟು ವೆಚ್ಚವು ಪೂರ್ಣಗೊಳ್ಳುವ ಸಮಯದಲ್ಲಿ 988.37 ಕೋಟಿ ರೂ. ಆಗಿತ್ತು. ಮತ್ತೊಂದು ಮೂಲಗಳ ಪ್ರಕಾರ ಈ ಮಾರ್ಗವನ್ನು ಸಂಪೂರ್ಣವಾಗಿ ದ್ವಿಗುಣಗೊಳಿಸಿದಾಗ ಹೆಚ್ಚಿನ ರೈಲುಗಳನ್ನು ಓಡಿಸಬಹುದು. ಕೆಎಸ್ಆರ್ ಬೆಂಗಳೂರು ಅಥವಾ ಯಶವಂತಪುರದಿಂದ ಆಂಧ್ರ ಪ್ರದೇಶ, ದೆಹಲಿ ಮತ್ತು ಹುಬ್ಬಳ್ಳಿ ಮಾರ್ಗದಲ್ಲಿ ರೈಲುಗಳನ್ನು ಓಡಿಸಬಹುದು ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com