ರಾಜ್ಯಾದ್ಯಂತ ಇಂದು ಎಸ್ ಎಸ್ ಎಲ್ ಸಿ ಭಾಷಾ ಪರೀಕ್ಷೆ: ಕೋವಿಡ್-19 ನಿಯಮ ಪಾಲನೆ

ರಾಜ್ಯಾದ್ಯಂತ ಜೂನ್ 22, ಗುರುವಾರ ಎಸ್ ಎಸ್ ಎಲ್ ಸಿಯ ಭಾಷಾ ಪರೀಕ್ಷೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ ಜೂನ್ 22, ಗುರುವಾರ ಎಸ್ ಎಸ್ ಎಲ್ ಸಿಯ ಭಾಷಾ ಪರೀಕ್ಷೆ ನಡೆಯುತ್ತಿದೆ.

ಸುಮಾರು 8.76 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯುತ್ತಿದ್ದಾರೆ. ಇಂದು ಭಾಷಾ ಪರೀಕ್ಷೆ ನಡೆಯುತ್ತಿದ್ದು, ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪರೀಕ್ಷಾ ಕೇಂದ್ರಗಳಲ್ಲಿ ಪಾಲಿಸಲಾಗುತ್ತಿದೆ. ತಿ ಕೋಣೆಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಹಲವಾರು ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ವ್ಯವಸ್ಥೆ ಮಾಡಲಾಗಿದೆ.

ಕಳೆದ ಬಾರಿ 3 ಸಾವಿರದ 310 ಇದ್ದ ಪರೀಕ್ಷಾ ಕೇಂದ್ರಗಳನ್ನು 4 ಸಾವಿರದ 885 ಹಾಗೂ 48 ಸಾವಿರ ಪರೀಕ್ಷಾ ಕೊಠಡಿಗಳನ್ನು 73 ಸಾವಿರದ 064 ಕ್ಕೆ ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆದಷ್ಟು ಅವರಿಗೆ ಹತ್ತಿರವಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ.

ಕಳೆದ ವರ್ಷ 6 ದಿನಗಳು 10 ನೇ ತರಗತಿ ಪರೀಕ್ಷೆ ಮಾಡಿದ್ದರೆ ಈ ಬಾರಿ ಕೋವಿಡ್ ಕಾರಣದಿಂದ 2 ದಿನಗಳ ಕಾಲ ಮಾತ್ರ ಒಎಂಆರ್ ಶೀಟ್ ನಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿಗೆ ಟಿಕ್ ಮಾರ್ಕ್ ಹಾಕುವ ಮೂಲಕ ಪ್ರತಿ ಪರೀಕ್ಷೆಗೆ 40 ಅಂಕಗಳಂತೆ ಪರೀಕ್ಷೆ ಏರ್ಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com