ಸೌದಿಯಲ್ಲಿ ಚಿತ್ರಹಿಂಸೆಗೊಳಗಾಗಿದ್ದ ಬೆಂಗಳೂರು ಮಹಿಳೆ ಕೊನೆಗೂ ತವರಿಗೆ!

ಸೌದಿ ಅರೇಬಿಯಾದ ಉತ್ತರ ಭಾಗದಲ್ಲಿರುವ ಜೋರ್ಡಾನ್‌ನ ಗಡಿಯಲ್ಲಿರುವ ಅಲ್-ಕುರಾಥಾತ್‌ನಲ್ಲಿರುವ ಸಅದ್ ಅಲ್-ಅನೈಜಿ ಅವರ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಬೆಂಗಳೂರಿನ ಮಹಿಳೆ ಸಬಿಹಾ ಅವರು ಕೊನೆಗೂ ಸುರಕ್ಷಿತವಾಗಿ ತಮ್ಮ ಮನೆ ಸೇರಿದ್ದಾರೆ.
ಸಬಿಹಾ
ಸಬಿಹಾ

ಬೆಂಗಳೂರು: ಸೌದಿ ಅರೇಬಿಯಾದ ಉತ್ತರ ಭಾಗದಲ್ಲಿರುವ ಜೋರ್ಡಾನ್‌ನ ಗಡಿಯಲ್ಲಿರುವ ಅಲ್-ಕುರಾಥಾತ್‌ನಲ್ಲಿರುವ ಸಅದ್ ಅಲ್-ಅನೈಜಿ ಅವರ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಬೆಂಗಳೂರಿನ ಮಹಿಳೆ ಸಬಿಹಾ ಅವರು ಕೊನೆಗೂ ಸುರಕ್ಷಿತವಾಗಿ ತಮ್ಮ ಮನೆ ಸೇರಿದ್ದಾರೆ.

24 ವರ್ಷಗಳ ಹಿಂದೆ ಸೌದಿಗೆ ವಲಸೆ ಬಂದ ಉಡುಪಿ ಮೂಲದವರ ಸತತ ಪ್ರಯತ್ನದಿಂದಾಗಿ ಸಬಿಹಾ ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ರಿಯಾದ್‌ನಲ್ಲಿ ರಕ್ಷಣಾ ಕಂಪನಿಯಲ್ಲಿ ಕೆಲಸ ಮತ್ತು ಸಾಮಾಜಿಕ ಸೇವೆ ಮಾಡುವ ಪಿ ಎ ಹಮೀದ್ ಪಡುಬಿದ್ರಿ ಅವರು ಮಹಿಳೆಯನ್ನು ಚಿತ್ರಹಿಂಸೆಯಿಂದ ಪಾರು ಮಾಡಿದ್ದಾರೆ.

ತುಮಕೂರಿನಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿರುವ ಸಬಿಹಾ ಅವರ ಹಿರಿಯ ಮಗ ವಸೀಮ್ ಅವರು ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ್ದು, “ನಮ್ಮ ತಾಯಿ ಬೆಂಗಳೂರಿಗೆ ಬರಲು ನೇರ ವಿಮಾನ ಪಡೆಯಲು ನಮಗೆ ಸಾಧ್ಯವಾಗಲಿಲ್ಲ. ಆದ್ದರಿಂದ, ನನ್ನ ತಾಯಿಗೆ ಸಹಾಯ ಮಾಡಿದ ಒಂದು ಗುಂಪು, ಕೊಚ್ಚಿಯವರೆಗೆ ಟಿಕೆಟ್ ಕಾಯ್ದಿರಿಸಿದೆ ಮತ್ತು ನಾನು ಅವರನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನೆ. ಇದು ಮನೆಯಲ್ಲಿ ನಮಗೆಲ್ಲರಿಗೂ ದೊಡ್ಡ ರಿಲೀಫ್ ಸಿಕ್ಕಂತಾಗಿದೆ ಎಂದಿದ್ದಾರೆ.

ತನ್ನ ತಾಯಿ ಸೌದಿಗೆ ಹೋಗಲು ಅವಕಾಶ ನೀಡಿದ ಯಲಹಂಕದಲ್ಲಿರುವ ತನ್ನ ಸಹೋದರ ಸಲೀಂ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಸೀಮ್, “ನಾನು ತಾಯಿಯನ್ನು ಮತ್ತೆ ತುಮಕೂರಿಗೆ ಕರೆದೊಯ್ಯುತ್ತೇನೆ, ಅಲ್ಲಿ ನನ್ನ ಅನಾರೋಗ್ಯಪೀಡಿತ ತಂದೆ ನನ್ನೊಂದಿಗೆ ಇದ್ದಾರೆ. ತಾಯಿಯನ್ನು ಸೌದಿಗೆ ಕಳುಹಿಸಿದ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿರಲಿಲ್ಲ”ಎಂದು ಹೇಳಿದ್ದಾರೆ.

“ಸಾದ್ ಅಲ್-ಅನೈಜಿ ದೊಡ್ಡ ದಂಧೆ ನಡೆಸುತ್ತಿದ್ದಾನೆ, ಭಾರತದ ವಿವಿಧ ಭಾಗಗಳಿಂದ ಮಹಿಳೆಯರನ್ನು ಭೇಟಿ ವೀಸಾ ಮೇಲೆ ಕರೆತರುತ್ತಾನೆ, ಅದು ಕೇವಲ 90 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಆ ಮಹಿಳೆಯರನ್ನು ಸೌದಿ ಅರೇಬಿಯಾದ ಕುಟುಂಬಗಳಿಗೆ ಮನೆಕೆಲಸದವರನ್ನಾಗಿ ಕಳುಹಿಸಲಾಗುತ್ತದೆ. ಅವನು ಪ್ರತಿ ಕುಟುಂಬದಿಂದ 2,500 ರಿಂದ 3,000 ರಿಯಾಲ್‌ಗಳನ್ನು ಪಡೆಯುತ್ತಾನೆ. ಆದರೆ ಆ ಕೆಲಸದ ಮಹಿಳೆಯರಿಗೆ ತಿಂಗಳಿಗೆ 1,000 ಅಥವಾ 1,200 ರಿಯಾಲ್‌ಗಳನ್ನು ಪಾವತಿಸುತ್ತಾನೆ. ಅದನ್ನೂ ನಿಯಮಿತವಾಗಿ ಪಾವತಿಸಲಾಗುವುದಿಲ್ಲ. ಸಬಿಹಾ ಅವರದ್ದು ಅತ್ಯಂತ ಕೆಟ್ಟ ಪ್ರಕರಣವಾಗಿದ್ದು, ಆಕೆಗೆ ಕಳೆದ ಒಂಬತ್ತು ತಿಂಗಳಿಂದ ಸಂಬಳ ನೀಡಿಲ್ಲ ಮತ್ತು ಅವನ ಕುಟುಂಬದ ಆರು ಸದಸ್ಯರನ್ನು ನೋಡಿಕೊಂಡು ಮನೆಯಲ್ಲಿ ಕೆಲಸ ಮಾಡುತ್ತಿದ್ದಳು” ಎಂದು ಕಳೆದ ತಿಂಗಳು ಫೈರೋಜಾ ಎಂಬ ಇನ್ನೊಬ್ಬ ಮಹಿಳೆಯನ್ನು ರಕ್ಷಿಸಲು ಸಹಾಯ ಮಾಡಿದ ಹಮೀದ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com