ಯುಪಿ ಪೊಲೀಸರು ನೀಡಿದ್ದ ನೋಟಿಸ್ ರದ್ದುಗೊಳಿಸಿದ ಹೈಕೋರ್ಟ್: ಟ್ವಿಟರ್ ಇಂಡಿಯಾ ಎಂಡಿಗೆ ನಿರಾಳ

ಟ್ವಿಟರ್ ನಲ್ಲಿ  ಕೋಮು ಸೌಹಾರ್ದತೆಗೆ ಭಂಗ ತರುವಂತಹ ಸೂಕ್ಷ್ಮ ವಿಡಿಯೋವೊಂದರ ಅಳವಡಿಕೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ರಾಜ್ಯದ ಗಾಜಿಯಾಬಾದ್ ನ ಲೊನಿ ಬಾರ್ಡರ್ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 41 -ಎ ಅಡಿಯಲ್ಲಿ ನೀಡಿದ್ದ ನೋಟಿಸ್ ನ್ನು ರಾಜ್ಯ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ಟ್ವಿಟರ್ ಇಂಡಿಯಾ ಎಂಡಿ ಮನಿಶ್ ಮಹೇಶ್ವರಿ
ಟ್ವಿಟರ್ ಇಂಡಿಯಾ ಎಂಡಿ ಮನಿಶ್ ಮಹೇಶ್ವರಿ

ಬೆಂಗಳೂರು: ಟ್ವಿಟರ್ ನಲ್ಲಿ  ಕೋಮು ಸೌಹಾರ್ದತೆಗೆ ಭಂಗ ತರುವಂತಹ ಸೂಕ್ಷ್ಮ ವಿಡಿಯೋವೊಂದರ ಅಳವಡಿಕೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ರಾಜ್ಯದ ಗಾಜಿಯಾಬಾದ್ನ ಲೊನಿ ಬಾರ್ಡರ್ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 41 -ಎ ಅಡಿಯಲ್ಲಿ ನೀಡಿದ್ದ ನೋಟಿಸ್ನ್ನು ರಾಜ್ಯ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ  ಮನೀಶ್ ಮಹೇಶ್ವರಿ ನಿರಾಳರಾಗಿದ್ದಾರೆ.

ಅರ್ಜಿದಾರ ಮನೀಶ್ ಮಹೇಶ್ವರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ. ನರೇಂದ್ರ, ಅರ್ಜಿದಾರನು ತಾನು ಆರೋಪಿಯಲ್ಲ ಮತ್ತು ತಮ್ಮಗೆ ನೀಡಿರುವ ನೋಟಿಸ್  ದುರುದ್ದೇಶದಿಂದ ಕೂಡಿದೆ ಎಂದು ಹೇಳಿದ್ದಾರೆ. ಮಹೇಶ್ವರಿ ಸಲ್ಲಿಸಿದ ರಿಟ್ ಅರ್ಜಿಯನ್ನು ಸಮರ್ಥನೀಯ ಎಂದು ನ್ಯಾಯಾಲಯ ಗಮನಿಸಿದೆ. ಸಿಆರ್ ಪಿಸಿಯ ಸೆಕ್ಷನ್ 160 ರ ಅಡಿಯಲ್ಲಿ ಪ್ರಶ್ನಾರ್ಹ ನೋಟಿಸ್ ಅನ್ನು ನೋಟಿಸ್ ಎಂದು ಪರಿಗಣಿಸಿ, ತನಿಖಾಧಿಕಾರಿಗಳು ಬಯಸಿದರೆ ಅರ್ಜಿದಾರರ ಹೇಳಿಕೆಯನ್ನು ವಾಸ್ತವಿಕವಾಗಿ ದಾಖಲಿಸಬಹುದು ಎಂದು ಹೇಳಿದರು.

ಎಫ್ ಐಆರ್ ನಲ್ಲಿ ತಮ್ಮ ಹೆಸರಿಲ್ಲ ಮತ್ತು ಟ್ವಿಟರ್ ಇಂಕ್ ಒಡೆತನದ ಟ್ವಿಟರ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಷಯಗಳ ಮೇಲೆ ಟ್ವಿಟರ್ ಇಂಡಿಯಾ ನಿಯಂತ್ರಣವಿಲ್ಲ ಎಂಬ ಆಧಾರದ ಮೇಲೆ ಮನೀಶ್ ಮಹೇಶ್ವರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಯುಪಿ ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು ಮತ್ತು ಯುಪಿ ಪೊಲೀಸರು ನೋಟಿಸ್ ನೀಡಿರುವುದರಿಂದ ಅರ್ಜಿದಾರರು ಅಲಹಾಬಾದ್‌ನ ಹೈಕೋರ್ಟ್‌ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ನ ಪ್ರಾದೇಶಿಕ ನ್ಯಾಯವ್ಯಾಪ್ತಿಯನ್ನು ಗಮನಸೆಳೆದರು.             

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com