ಕೋವಿಡ್ ಸೋಂಕು ಉಲ್ಬಣ: ಸಿವಿ ರಾಮನ್ ನಗರ ನಿವಾಸಿಗಳಲ್ಲಿ ಹೆಚ್ಚಿದ ಆತಂಕ

ಸೋಂಕು ಉಲ್ಬಣಗೊಂಡು ಕ್ಷೇತ್ರವು ಕೋವಿಡ್ ಕ್ಲಸ್ಟರ್ ಆಗಿ ಬದಲಾಗುತ್ತಿರುವುದಕ್ಕೆ ಸಿವಿ ರಾಮನ್ ನಗರದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸೋಂಕು ಉಲ್ಬಣಗೊಂಡು ಕ್ಷೇತ್ರವು ಕೋವಿಡ್ ಕ್ಲಸ್ಟರ್ ಆಗಿ ಬದಲಾಗುತ್ತಿರುವುದಕ್ಕೆ ಸಿವಿ ರಾಮನ್ ನಗರದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. 

ವಾರ್ಡ್ ನಲ್ಲಿ ಅತೀ ಹೆಚ್ಚು ಕೋವಿಡ್ ಸೋಂಕು ಪ್ರಕರಣ ಹಾಗೂ ಡೆಲ್ಟಾ ರೂಪಾಂತರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಮುಖವಾಗಿ ತಿಪ್ಪಸಂದ್ರ ಹಾಗೂ ಕಗ್ಗದಾಸಪುರದಲ ಮಾರುಕಟ್ಟೆ ಪ್ರದೇಶಗಲಲ್ಲು ಕೋವಿಡ್ ಹಾಟ್ ಸ್ಪಾಟ್ ಗಳಾಗಿ ಬದಲಾಗಿವೆ ಎಂದು ತಿಳಿದುಬಂದಿದೆ. 

ಆದರೆ, ಬಿಬಿಎಂಪಿ ವಾರ್ ರೂಮ್ ನೀಡಿರುವ ದೈನಂದಿನ ಕೋವಿಡ್ ವರದಿಯಲ್ಲಿ ಟಾಪ್ 10 ಪಟ್ಟಿ ಸಿವಿ ರಾಮನ್ ನಗರ ಇಲ್ಲದಿರುವುದು ಕಂಡು ಬಂದಿದೆ. 

ಸೋಂಕು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆರೋಗ್ಯ ವಿಭಾಗ ವಿಶೇಷ ಆಯುಕ್ತ ಡಿ.ರಂದೀಪ್ ಅವರು, ವಾರ್ಡ್ ನಲ್ಲಿ ಪತ್ತೆಯಾಗಿರುವ ಸಾಕಷ್ಟು ಕೋವಿಡ್ ಸೋಂಕಿತರು ತಿಪ್ಪಸಂದ್ರ ಮಾರುಕಟ್ಟೆಗೆ ಭೇಟಿ ನೀಡಿದವರೇ ಆಗಿದ್ದಾರೆ. ಹೀಗಾಗಿ ಸೋಂಕಿನ ಮೂಲವನ್ನು ತಿಪ್ಪಸಂದ್ರ ಮಾರುಕಟ್ಟೆ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com