ನಾಳೆಯಿಂದ ರಾಜ್ಯದ ದೇವಸ್ಥಾನ, ಚರ್ಚ್, ಮಸೀದಿ ಸೇರಿ ಧಾರ್ಮಿಕ ಕೇಂದ್ರಗಳು ಭಕ್ತರ ಪ್ರವೇಶಕ್ಕೆ ಮುಕ್ತ: ಮನರಂಜನಾ ತಾಣಗಳಿಗೂ ಪ್ರವೇಶ
ನಾಳೆ ಜುಲೈ 25ರಿಂದ ರಾಜ್ಯದ ಎಲ್ಲಾ ಧಾರ್ಮಿಕ ಕೇಂದ್ರಗಳು ಭಕ್ತಾದಿಗಳ ದರ್ಶನಕ್ಕೆ ತೆರೆದಿರುತ್ತವೆ. ಇಷ್ಟು ಸಮಯಗಳ ಕಾಲ ಕೋವಿಡ್-2ನೇ ಅಲೆ ತೀವ್ರವಾದ ಬಳಿಕ ಧಾರ್ಮಿಕ ಕೇಂದ್ರಗಳು ಮುಚ್ಚಲ್ಪಟ್ಟಿದ್ದವು.
Published: 24th July 2021 11:40 AM | Last Updated: 24th July 2021 11:40 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಾಳೆ ಜುಲೈ 25ರಿಂದ ರಾಜ್ಯದ ಎಲ್ಲಾ ಧಾರ್ಮಿಕ ಕೇಂದ್ರಗಳು ಭಕ್ತಾದಿಗಳ ದರ್ಶನಕ್ಕೆ ತೆರೆದಿರುತ್ತವೆ. ಇಷ್ಟು ಸಮಯಗಳ ಕಾಲ ಕೋವಿಡ್-2ನೇ ಅಲೆ ತೀವ್ರವಾದ ಬಳಿಕ ಧಾರ್ಮಿಕ ಕೇಂದ್ರಗಳು ಮುಚ್ಚಲ್ಪಟ್ಟಿದ್ದವು.
ನಾಳೆಯಿಂದ ರಾಜ್ಯದಲ್ಲಿರುವ ಎಲ್ಲಾ ದೇವಸ್ಥಾನಗಳು, ಚರ್ಚ್, ಮಸೀದಿಗಳು, ಗುರುದ್ವಾರಗಳು ತೆರೆಯುವುದಲ್ಲದೆ ಮಕ್ಕಳಿಗೆ ಸಹ ಆಟವಾಡುವ ಮನರಂಜನಾ ಕೇಂದ್ರಗಳು ಮತ್ತು ಇತರ ಚಟುವಟಿಕೆ, ಆಟದ ಕೇಂದ್ರಗಳು ತೆರೆದಿರುತ್ತವೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುವಾಗ ಕೋವಿಡ್-19 ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ರಾಜ್ಯ ಸರ್ಕಾರ ಎಚ್ಚರಿಕೆಯನ್ನೂ ನೀಡಿದೆ.
ಧಾರ್ಮಿಕ ಕೇಂದ್ರಗಳ ತೆರೆಯುವಿಕೆಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದು ಜಾತ್ರೆಗಳು, ದೇವಸ್ಥಾನ ಉತ್ಸವಗಳು, ಮೆರವಣಿಗೆಗಳು ಹಾಗೂ ಇನ್ನಿತರ ಬೃಹತ್ ಸಂಖ್ಯೆಯಲ್ಲಿ ಜನರು ಸೇರುವ ಕಾರ್ಯಕ್ರಮಗಳಿಗೆ ಅನುಮತಿ, ಅವಕಾಶವನ್ನು ನೀಡಿಲ್ಲ.
ಇನ್ನು ಮನರಂಜನಾ ಕೇಂದ್ರಗಳ ತೆರೆಯುವಿಕೆಗೆ ಸರ್ಕಾರ ಅನುಮತಿ ನೀಡಿದೆಯಾದರೂ ಜಲ ಕ್ರೀಡೆಗಳು ಮತ್ತು ಜಲ ಸಂಬಂಧಿ ಸಾಹಸ ಕ್ರೀಡೆಗಳು, ಚಟುವಟಿಕೆಗಳಿಗೆ ಇನ್ನೂ ಅನುಮತಿಯನ್ನು ಸಾರ್ವಜನಿಕರಿಗೆ ನೀಡಿಲ್ಲ.
Beginning Sunday, (July 25), temples, mosques, churches, gurdwaras & other relig places can open in #Karnataka: govt Amusement parks & similar activities too. #covid protocols must be followed
— S. Lalitha (@Lolita_TNIE) July 24, 2021
@XpressBengaluru @NewIndianXpress @citizensforblr @KannadaPrabha #lockdownrelaxation pic.twitter.com/XJWQMcPBnR