ಸಹಕಾರ ಬ್ಯಾಂಕ್ ಮೂಲಕ 30 ಲಕ್ಷ ರೈತರಿಗೆ ರೂ.20,000 ಕೋಟಿ ಸಾಲ: ಸಚಿವ ಎಸ್.ಟಿ.ಸೋಮಶೇಖರ್

ಡಿಸಿಸಿ ಬ್ಯಾಂಕ್ ಮತ್ತು ಎಪೆಕ್ಸ್ ಬ್ಯಾಂಕ್ ಮೂಲಕ ರೈತರಿಗೆ ರೂ.20,800 ಕೋಟಿ ಸಾಲ ನೀಡಲು ನಿರ್ಧರಿಸಲಾಗಿದ್ದು, ಇದರಿಂದ ಸುಮಾರು 30 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಭಾನುವಾರ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಡಿಸಿಸಿ ಬ್ಯಾಂಕ್ ಮತ್ತು ಎಪೆಕ್ಸ್ ಬ್ಯಾಂಕ್ ಮೂಲಕ ರೈತರಿಗೆ ರೂ.20,800 ಕೋಟಿ ಸಾಲ ನೀಡಲು ನಿರ್ಧರಿಸಲಾಗಿದ್ದು, ಇದರಿಂದ ಸುಮಾರು 30 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಭಾನುವಾರ ಹೇಳಿದ್ದಾರೆ. 

ನಗರದ ಗೋವಿಂದ ರಾವ್ ಮೆಮೋರಿಯಲ್ ಹಾಲ್ ನಲ್ಲಿ ಭಾನುವಾರ ನಡೆದ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯದ ಪ್ರತಿ ಎಪಿಎಂಸಿಗೆ ರೂ.2-5 ಕೋಟಿ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಗೆ ಸೂಚಿಸಿದ್ದಾರೆ. ಎಪಿಎಂಸಿಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತದೆ. ಅಲ್ಲದೆ, ಸಹಕಾರಿ ಬ್ಯಾಂಕ್ ಮೂಲಕ ರೈತರಿಗೆ ರೂ.20,800 ಕೋಲಿ ಸಾಲ ನೀಡಲು ನಿರ್ಧರಿಸಲಾಗಿದ್ದು, ಇದರಿಂದ 30 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. 

ಸಾಲ ಕೇಳಿ ಬಂದ ಯಾವುದೇ ರೈತರಿಗೆ ಸಾಲ ಇಲ್ಲ ಎಂದು ಹೇಳಬಾರದು. ಇದನ್ನು 21 ಕಾರ್ಯಕ್ರಮಗಳ ಮೂಲಕ ಆಯಾ ಜಿಲ್ಲೆಯಲ್ಲಿಯೇ ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com