ಐಎಂಎ ಪದಾಧಿಕಾರಿಗಳ ವಿರುದ್ಧ ಡಾ.ಕಕ್ಕಿಲಾಯ ದೂರು ದಾಖಲು

ಜುಲೈ 29 ರಂದು ಭಾರತೀಯ ವೈದ್ಯಕೀಯ ಸಂಘದಲ್ಲಿ  (ಐಎಂಎ) ನಡೆದ ವೈದ್ಯರ ದಿನಾಚರಣೆ ವೇಳೆಯಲ್ಲಿ ಕೋವಿಡ್ ಶಿಷ್ಟಾಚಾರ ಉಲ್ಲಂಘನೆಗಾಗಿ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಪದಾಧಿಕಾರಿಗಳ ವಿರುದ್ಧ ನಗರ ಮೂಲದ ಫಿಜಿಶಿಯನ್ ಮತ್ತು ಲೇಖಕ ಡಾ.ಶ್ರೀನಿವಾಸ ಕಕ್ಕಿಲಾಯ ದೂರು ದಾಖಲಿಸಿದ್ದಾರೆ.
ಡಾ.ಶ್ರೀನಿವಾಸ ಕಕ್ಕಿಲಾಯ
ಡಾ.ಶ್ರೀನಿವಾಸ ಕಕ್ಕಿಲಾಯ

ಮಂಗಳೂರು: ಜುಲೈ 29 ರಂದು ಭಾರತೀಯ ವೈದ್ಯಕೀಯ ಸಂಘದಲ್ಲಿ  (ಐಎಂಎ) ನಡೆದ ವೈದ್ಯರ ದಿನಾಚರಣೆ ವೇಳೆಯಲ್ಲಿ ಕೋವಿಡ್ ಶಿಷ್ಟಾಚಾರ ಉಲ್ಲಂಘನೆಗಾಗಿ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಪದಾಧಿಕಾರಿಗಳ ವಿರುದ್ಧ ನಗರ ಮೂಲದ ಫಿಜಿಶಿಯನ್ ಮತ್ತು ಲೇಖಕ ಡಾ.ಶ್ರೀನಿವಾಸ ಕಕ್ಕಿಲಾಯ ದೂರು ದಾಖಲಿಸಿದ್ದಾರೆ.

ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿರುವ ಕಕ್ಕಿಲಾಯ, ವೈದ್ಯರ ದಿನಾಚರಣೆ ವೇಳೆಯಲ್ಲಿ ಮಂಗಳೂರು ಐಎಂಎ ಪದಾಧಿಕಾರಿಗಳು ಮಾಸ್ಕ್ ಧರಿಸಿರಲಿಲ್ಲ ಅಥವಾ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ ಎಂದು ಕಕ್ಕಿಲಾಯ ಹೇಳಿದ್ದಾರೆ. 

ತಮ್ಮ ಆರೋಪಗಳಿಗೆ ಸಂಬಂಧಿಸಿದ ಫೋಟೋಗ್ರಾಫರ್ ಮತ್ತು ನ್ಯೂಸ್ ಪೇಪರ್ ಕ್ಲಿಪಿಂಗ್ ಗಳನ್ನು ಸಲ್ಲಿಸಿದ್ದಾರೆ. ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 269ರ ಅಡಿಯಲ್ಲಿ ನಿಯಮ ಉಲ್ಲಂಘಿಸಿದ್ದವರ ವಿರುದ್ದ ಪೊಲೀಸರು ದೂರು ದಾಖಲಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಮಾಸ್ಕ್ ಧರಿಸದಿದ್ದಕ್ಕೆ ಸೂಪರ್ ಮಾರ್ಕೆಟ್ ಮಾಲೀಕರು ಕಕ್ಕಿಲಾಯ ವಿರುದ್ಧ ದೂರು ದಾಖಲಿಸಿದ್ದರು.ಮಾಸ್ಕ್ ಧರಿಸುವ ಅಗತ್ಯವಿಲ್ಲ, ಈಗಾಗಲೇ ಎಲ್ಲರೂ ಕೊರೋನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದೇವೆ. ಅಲ್ಲದೇ, ಕಾಯಿಲೆ ಬೇರೊಬ್ಬರಿಗೆ ಹರಡುವ ಸಾಧ್ಯತೆ ಇಲ್ಲ ಎಂದು ಹೇಳಿದ್ದರು. ತದನಂತರ ಅವರ ಹೇಳಿಕೆಯನ್ನು ಐಎಂಎ ಖಂಡಿಸಿತ್ತು.

ಐಎಂಎ ಮಂಗಳೂರು ಕಾರ್ಯದರ್ಶಿ ಡಾ.ಅನಿಮೇಶ್ ಜೈನ್, ಅಧ್ಯಕ್ಷ ಡಾ.ಮಾರ್ ಕುದ್ವಾ, ಖಂಜಾಜಿ ಡಾ. ಕುಮಾರಸ್ವಾಮಿ ಯು ಮತ್ತು ಪದಾಧಿಕಾರಿಗಳಾದ ಡಾ. ಜಿಕೆ ಭಟ್, ಸಂಕಬಿತ್ಲು, ಡಾ. ರಾಮಚಂದ್ರ ಕಾಮತ್ ಅವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com