ಮಂಗಳೂರು: ಹೆಚ್ ಪಿಸಿಎಲ್ ಪೈಪ್‌ಲೈನ್‌ನಿಂದ ಪೆಟ್ರೋಲ್ ಕದಿಯುತ್ತಿದ್ದ ವ್ಯಕ್ತಿ ವಿರುದ್ಧ ಕೇಸು ದಾಖಲು

ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌(ಹೆಚ್ ಪಿಸಿಎಲ್) ಪೈಪ್‌ಲೈನ್‌ನಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಕೇಸು ದಾಖಲಿಸಿದ್ದಾರೆ.
ಪೆಟ್ರೋಲ್ ಕದಿಯಲು ಬಳಸುತ್ತಿದ್ದ ಪೈಪ್
ಪೆಟ್ರೋಲ್ ಕದಿಯಲು ಬಳಸುತ್ತಿದ್ದ ಪೈಪ್

ಮಂಗಳೂರು: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌(ಹೆಚ್ ಪಿಸಿಎಲ್) ಪೈಪ್‌ಲೈನ್‌ನಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಕೇಸು ದಾಖಲಿಸಿದ್ದಾರೆ.

ಮಂಗಳೂರು-ಹಾಸನ ಕೊಳವೆ ಮಾರ್ಗದ ಮೂಲಕ ಪೆಟ್ರೋಲ್ ಹರಿಯುವಿಕೆಯಲ್ಲಿ ವ್ಯತ್ಸಾಸವನ್ನು ಕಳೆದ ಜುಲೈ 11ರಂದು ಗಮನಿಸಿದ ಹೆಚ್ ಪಿಸಿಎಲ್ ಅಧಿಕಾರಿಗಳು ಸಮೀಕ್ಷೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಶಿಕೇಶ್ ಸೊನವಾನೆ ತಿಳಿಸಿದ್ದಾರೆ.

ಪೈಪ್ ಲೈನ್ ಕೋಟಿಂಗ್ ನಲ್ಲಿ ತೊಂದರೆಯಾಗಿ ಸೋರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ಆರಂಭದಲ್ಲಿ ಭಾವಿಸಿದ್ದರು. ಅರಲ ಗ್ರಾಮದ ಇವನ್ ಎಂಬುವವರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಸೋರಿಕೆ ಕಂಡುಬಂದಿತ್ತು. ಆ ಜಾಗದಲ್ಲಿ ನೆಲವನ್ನು ಅಗೆದಾಗ ಅಲ್ಲಿ ಅವರಿಗೆ ಒಂದೂವರೆ ಇಂಚಿನ ಸುತ್ತಳತೆಯ ಪೈಪ್ ಲೈನ್ ಕಣ್ಣಿಗೆ ಬಿತ್ತು. ಪೈಪ್ ಲೈನ್ ನಿಂದ ಪೆಟ್ರೋಲ್ ಕದಿಯಲು ಕವಾಟವನ್ನು ಬಳಸಿಕೊಳ್ಳಲಾಗುತ್ತಿತ್ತು.

ಪೆಟ್ರೋಲ್ ಹರಿದುಹೋಗುವ ಕೊಳವೆ ಮಾರ್ಗಕ್ಕೆ ಉಂಟಾದ ಹಾನಿಗೆ 90 ಸಾವಿರ ರೂಪಾಯಿ ವೆಚ್ಚವಾಗಲಿದ್ದು ಪೆಟ್ರೋಲ್ ಕಳ್ಳತನದ ಮೌಲ್ಯವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಇವಾನ್ ಅವರ ವಿರುದ್ಧ ಪೆಟ್ರೋಲಿಯಂ ಮತ್ತು ಖನಿಜಗಳ ಪೈಪ್‌ಲೈನ್ ಕಾಯ್ದೆ 1962 ಮತ್ತು ಇತರ ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com