ಬಿಡಿಎ ವಿರುದ್ಧ ದಾಸರಹಳ್ಳಿ ಶಾಸಕ ಆರ್ ಮಂಜುನಾಥ್ ಪ್ರತಿಭಟನೆ
ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಇಂದು ಬಿಡಿಎ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಡಾ.ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬಿಡಿಎ ರೈತರಿಗೆ ಮತ್ತು ನಿವೇಶನ ಹಂಚಿಕೆದಾರರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Published: 31st July 2021 11:57 AM | Last Updated: 31st July 2021 11:57 AM | A+A A-

ಬಿಡಿಎ
ಬೆಂಗಳೂರು: ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಇಂದು ಬಿಡಿಎ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಡಾ.ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬಿಡಿಎ ರೈತರಿಗೆ ಮತ್ತು ನಿವೇಶನ ಹಂಚಿಕೆದಾರರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಯಲಹಂಕ ಮತ್ತು ದಾಸರಹಳ್ಳಿಯ 17 ಗ್ರಾಮಗಳಲ್ಲಿ ಕರಪತ್ರಗಳನ್ನು ವಿತರಿಸಲಾಗಿದ್ದು, ಅಲ್ಲಿ ಈ ಲೇಔಟ್ ಬರಲಿದ್ದು, ಜನರು ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಆದರೆ ಈ ಸಭೆ ಅನಧಿಕೃತವಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ, ಲೇಔಟ್ ಗೆ ಸಂಬಂದಿಸಿದಂತೆ ಸುಪ್ರಿಂಕೋರ್ಟ್ ಮೂವರು ಸದಸ್ಯರ ಸಮಿತಿ ರಚಿಸಿದ್ದು. ವರದಿ ನೀಡುವಂತೆ ಸೂಚಿಸಿದೆ. ಈ ಪರಿಸ್ಥಿತಿಯಲ್ಲಿ ಭೂಸ್ವಾಧೀನದ ವಿರುದ್ಧ ಯಾವುದೇ ಪ್ರತಿಭಟನೆ ಮಾಡುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ತಿಳಿಸಿದೆ.
ಇದೇ ರೀತಿಯ ಕಸರತ್ತಿಗೆ ಪ್ರಯತ್ನಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನ್ಯಾಯಾಲಯದ ಅವಹೇಳನಕ್ಕಾಗಿ ಕೋರ್ಟ್ ತಪರಾಕಿ ಹಾಕಿತ್ತು. ಇದು ಕೂಡ ನ್ಯಾಯಾಂಗ ನಿಂದನೆಯಂತಿದೆ ಎಂದು ತಿಳಿಸಿದೆ.