ಬಾಬಾ ರಾಮದೇವ್ ಹೇಳಿಕೆ ಖಂಡಿಸಿ ಕಪ್ಪು ದಿನಾಚರಣೆಗ: ಕರ್ನಾಟಕ ವೈದ್ಯರ ಸಂಘದ ಬೆಂಬಲ

ಅಲೋಪತಿ ವಿರುದ್ಧ ಬಾಬಾ ರಾಮದೇವ್ ಹೇಳಿಕೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ನೀಡಿರುವ ಬಂದ್ ಗೆ ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕೆಎಆರ್ಡಿ) ಬೆಂಬಲ ಸೂಚಿಸಿದೆ.
ಬಾಬಾ ರಾಮದೇವ್
ಬಾಬಾ ರಾಮದೇವ್

ಬೆಂಗಳೂರು: ಅಲೋಪತಿ ವಿರುದ್ಧ ಬಾಬಾ ರಾಮದೇವ್ ಹೇಳಿಕೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ನೀಡಿರುವ ಬಂದ್ ಗೆ ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕೆಎಆರ್ಡಿ) ಬೆಂಬಲ ಸೂಚಿಸಿದೆ.

ಯೋಗ ಗುರು ಬಾಬಾ ರಾಮದೇವ್‌ ಅಲೋಪತಿ ಮತ್ತು ಆಧುನಿಕ ಔಷಧಿಗಳ ವಿರುದ್ದದ ಹೇಳಿಕೆಯನ್ನು ಖಂಡಿಸಿ ವೈದ್ಯರ ಸಂಘ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.

ಇಂದು ಅಂದರೆ ಜೂನ್ 1 ರಂದು ವೈದ್ಯರು ಕೋವಿಡ್ ಮತ್ತು ಕೋವಿಡೇತರ ವಾರ್ಡ್ ಗಳಲ್ಲಿ ಕಪ್ಪು ಪಟ್ಟಿ ಧರಿಸಿ ಹಾಗೂ ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಕಪ್ಪು ಚಿತ್ರ ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಲಿದ್ದಾರೆ.

ಬಾಬಾ ರಾಮ್​ ದೇವ್​ ಅವರು ಬೇಷರತ್ತು ಕ್ಷಮೆ ಕೇಳಬೇಕು ಎಂದೂ ರೆಸಿಡೆಂಟ್ ವೈದ್ಯರ ಸಂಘಗಳ ಒಕ್ಕೂಟ ​ಒತ್ತಾಯಿಸಿದೆ. ಈ ವಿವಾದ ಶುರುವಾಗಿದ್ದು ಬಾಬಾ ರಾಮ್​ದೇವ್ ಅವರ ವಿಡಿಯೋವೊಂದು ವೈರಲ್​ ಆದ ಬಳಿಕ. ಅಲೋಪಥಿಕ್ ವೈದ್ಯಕೀಯ ಪದ್ಧತಿ ಒಂದು ಮೂರ್ಖ ಪದ್ಧತಿ. ಈ ಔಷಧಿ ತೆಗೆದುಕೊಂಡು ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ ಎಂದು ಬಾಬಾ ರಾಮ್​ ದೇವ್​ ಹೇಳಿದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಭಾರತೀಯ ವೈದ್ಯಕೀಯ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಮಾಧ್ಯಮ ವ್ಯಕ್ತಿಗಳು ಸೇರಿದಂತೆ ಎಲ್ಲಾ ಕೊರೋನಾ ವಾರಿಯರ್ಸ್  ತಮ್ಮ ಮಿತಿಗಳನ್ನು ಮೀರಿ ಹಗಲು ರಾತ್ರಿ ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ.

ಕೊರೋನಾ ಚಿಕಿತ್ಸೆಗೆ ಅಲೋಪತಿ ಔಷಧವನ್ನು ಪ್ರಶ್ನಿಸಿದ್ದ ರಾಮ್ ದೇವ್, ಕೋವಿಡ್-19 ಗೆ ಅಲೋಪತಿ ಔಷಧವನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದು ಅಲೋಪತಿ ವೈದ್ಯರ ಕೆಂಗಣ್ಣಿಗೆ ಗುರಿಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com