ಕೋವಿಡ್ ಲಸಿಕೆ: ಜಾಗತಿಕ ಟೆಂಡರ್ ರದ್ದುಗೊಳಿಸಿ, ತಯಾರಿಕಾ ಕಂಪನಿಗಳಿಂದಲೇ ನೇರ ಖರೀದಿಗೆ ರಾಜ್ಯ ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕುಗೊಳಿಸಲು ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿಸುವ ನಿರ್ಧಾರವನ್ನು ಕೈ ಬಿಟ್ಟಿರುವ ರಾಜ್ಯ ಸರ್ಕಾರ, ಲಸಿಕೆ ತಯಾರಿಕಾ ಕಂಪನಿಗಳಿಂದಲೇ ನೇರವಾಗಿ ಖರೀದಿ ಮಾಡಲು ನಿರ್ಧರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕುಗೊಳಿಸಲು ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿಸುವ ನಿರ್ಧಾರವನ್ನು ಕೈ ಬಿಟ್ಟಿರುವ ರಾಜ್ಯ ಸರ್ಕಾರ, ಲಸಿಕೆ ತಯಾರಿಕಾ ಕಂಪನಿಗಳಿಂದಲೇ ನೇರವಾಗಿ ಖರೀದಿ ಮಾಡಲು ನಿರ್ಧರಿಸಿದೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ಲಸಿಕೆ ಪೂರೈಕೆ ಸಂಬಂಧ ಇ-ಟೆಂಡರ್ ಸಲ್ಲಿಸಿದ್ದ 2 ಕಂಪನಿಗಳು ಸಕಾಲಕ್ಕೆ ಅಗತ್ಯ ದಾಖಲೆಗಳನ್ನು ನೀಡದ ಕಾರಣಕ್ಕೆ ನೇರವಾಗಿ ಲಸಿಕೆ ತಯಾರಿಕಾ ಕಂಪನಿಯಿಂದಲೇ ಖರೀದಿ ಮಾಡಲು ನಿರ್ಧರಿಸಿದ್ದೇವೆಂದು ಹೇಳಿದ್ದಾರೆ. 

ಮೇ.15ರಿಂದ 24ರವರೆಗೆ ರಾಜ್ಯ ಜಾಗತಿಕ ಟೆಂಡರ್ ಕರೆದು ನಾಲ್ಕು ಕಂತಿನಲ್ಲಿ ಒಟ್ಟು 2 ಕೋಟಿ ಲಸಿಕೆ ಪಡೆಯಲು ಮುಂದಾಗಿತ್ತು. ಈ ಪ್ರಕ್ರಿಯೆಯಲ್ಲಿ ಮುಂಬೈ ಮೂಲಕ ಬುಲಕ್ ಎಂಆರ್'ಒ ಇಂಡಸ್ಟ್ರಿಯಲ್ ಸಪ್ಲೈ ಹಾಗೂ ಬೆಂಗಳೂರಿನ ತುಳಸಿ ಸಿಸ್ಟಮ್ಸ್ ಕಂಪನಿಗಳು ತಯಾರಕ ಕಂಪನಿಯಿಂದ ಲಸಿಕೆ ಪಡೆದು ರಾಜ್ಯಕ್ಕೆ ಪೂರೈಸಲು ಮುಂದೆ ಬಂದಿದ್ದವು. ಆದರೆ, ಎರಡೂ ಕಂಪನಿಗಳು ಸಕಾಲಕ್ಕೆ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲಿಲ್ಲ. ಹಣಕಾಸು ದಾಖಲೆಗಳೂ ಸೇರಿ ಪೂರೈಕೆ ಖಾತರಿಯ ದಾಖಲೆ ಹಾಗೂ ಲಸಿಕೆಯ ತಾಂತ್ರಿಕ ದಾಖಲೆಗಳನ್ನು ನಿಗದಿತ ಕಾಲಮಿತಿಯಲ್ಲಿ ಸರ್ಕಾರಕ್ಕೆ ಒದಿಸಲು ವಿಫಲವಾಗಿದ್ದವು ಎಂದು ತಿಳಿಸಿದ್ದಾರೆ. 

ಇದೀಗ ಎರಡು ಕಂಪನಿಗಳೊಂದಿಗಿನ ಟೆಂಡರ್ ರದ್ದುಪಡಿಸಲಾಗಿದ್ದು, ಲಸಿಕಾ ತಯಾರಿಕಾ ಕಂಪನಿಗಳೊಂದಿಗೆ ಮಾತುಕತೆ ಪ್ರಕ್ರಿಯೆ ಆರಂಭವಾಗಿದೆ. ಕೊರೋನಾ ಮೂರನೇ ಅಲೆ ಆರಂಭವಾಗಲಿದ್ದು, ಕಾದು ಕುಳಿತುಕೊಳ್ಳುವ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com