ಲಸಿಕೆ ಪಡೆಯಲು ಯಾವುದೇ ಅರ್ಜಿ, ಪ್ರಮಾಣ ಪತ್ರದ ಅಗತ್ಯವಿಲ್ಲ: ಬಿಬಿಎಂಪಿ ಸ್ಪಷ್ಟನೆ

ಫಲಾನುಭವಿಗಳು ಲಸಿಕೆ ಪಡೆಯಲು ಯಾವುದೇ ರೀತಿಯ ಅರ್ಜಿ, ಪ್ರಮಾಣ ಪತ್ರಗಳ ಅಗತ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಫಲಾನುಭವಿಗಳು ಲಸಿಕೆ ಪಡೆಯಲು ಯಾವುದೇ ರೀತಿಯ ಅರ್ಜಿ, ಪ್ರಮಾಣ ಪತ್ರಗಳ ಅಗತ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. 

ಜೆರಾಕ್ಸ್‌ ಅಂಗಡಿಗಳು ತೆರೆಯದ ಕಾರಣ ನಮೂನೆಗಳ ಪ್ರತಿ ಮಾಡಿಸಲು ಕಾರ್ಮಿಕರು ಸಮಸ್ಯೆ ಎದುರಿಸುತ್ತಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘18ರಿಂದ 44 ವರ್ಷಗಳ ಒಳಗಿನ ಆದ್ಯತಾ ಗುಂಪಿನ ಕಾರ್ಮಿಕರು ಲಸಿಕೆ ಪಡೆಯಲು ಅಗತ್ಯವಿರುವ ನಮೂನೆಗಳನ್ನು ಸಂಬಂಧಪಟ್ಟ ನೋಡಲ್‌ ಅಧಿಕಾರಿಗಳೇ ಪೂರೈಸಬೇಕು. ಲಸಿಕೆ ಪಡೆಯಲು ಬರುವವರು ಯಾವುದೇ ಅರ್ಜಿ, ಪ್ರಮಾಣ ಪತ್ರ ತರಬೇಕಾದ ಅಗತ್ಯವಿಲ್ಲ ಎಂದು ಹೇಳಇದ್ದಾರೆ. 
 
ಕೆಲಸಗಾರರು ಸರ್ಕಾರ ಗುರುತಿಸಿದ ಗುಂಪಿನಡಿ ಬರುತ್ತಾರೆಯೇ ಎಂಬುದನ್ನು ಅವರ ಸಂಘದ ಪದಾಧಿಕಾರಿಗಳು ಖಾತರಿಪಡಿಸಬೇಕು. ಅರ್ಜಿಗಳ ಒದಗಿಸಿ ಭರ್ತಿ ಮಾಡಲು ನೋಡೆಲ್ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು ನೆರವಾಗಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com