ಕೊರೋನಾದಿಂದ ಮೃತಪಟ್ಟ 500ಕ್ಕೂ ಹೆಚ್ಚು ಅನಾಥ ಅಸ್ಥಿಗಳಿಗೆ ಮುಕ್ತಿ ನೀಡಿ ಮಾನವೀಯತೆ ಮೆರೆದ ಸಚಿವ ಅಶೋಕ್

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೋನಾಗೆ ಬಲಿಯಾದ 500ಕ್ಕೂ ಹೆಚ್ಚು ಮಂದಿಯ ಅನಾಥ ಅಸ್ತಿಯನ್ನು ಕಂದಾಯ ಸಚಿವ ಆರ್.ಅಶೋಕ್ ಅವರು ಬುಧವಾರ ಕಾವೇರಿ ನದಿಯಲ್ಲಿ ಹಿಂದು ಸಂಪ್ರದಾಯದ ಪ್ರಕಾರ ವಿಸರ್ಜನೆ ಮಾಡಿದರು. ಈ ಮೂಲಕ ಅನಾಥ ಅಸ್ಥಿಗಳಿಗೆ ಮುಕ್ತಿ ನೀಡಿ ಮಾನವೀಯತೆ ಮೆರೆದರು.
ಕೋವಿಡ್ ಅನಾಥ ಶವಗಳ ಅಸ್ತಿ ವಿಸರ್ಜನೆ ಮಾಡುತ್ತಿರುವ ಸಚಿವ ಆರ್.ಅಶೋಕ್
ಕೋವಿಡ್ ಅನಾಥ ಶವಗಳ ಅಸ್ತಿ ವಿಸರ್ಜನೆ ಮಾಡುತ್ತಿರುವ ಸಚಿವ ಆರ್.ಅಶೋಕ್

ಮೈಸೂರು: ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೋನಾಗೆ ಬಲಿಯಾದ 500ಕ್ಕೂ ಹೆಚ್ಚು ಮಂದಿಯ ಅನಾಥ ಅಸ್ತಿಯನ್ನು ಕಂದಾಯ ಸಚಿವ ಆರ್.ಅಶೋಕ್ ಅವರು ಬುಧವಾರ ಕಾವೇರಿ ನದಿಯಲ್ಲಿ ಹಿಂದು ಸಂಪ್ರದಾಯದ ಪ್ರಕಾರ ವಿಸರ್ಜನೆ ಮಾಡಿದರು. ಈ ಮೂಲಕ ಅನಾಥ ಅಸ್ಥಿಗಳಿಗೆ ಮುಕ್ತಿ ನೀಡಿ ಮಾನವೀಯತೆ ಮೆರೆದರು. 

ಕಳೆದ ತಿಂಗಳು ಕೊರೋನಾ ಸೋಂಕಿತರ ಮರಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅಧಿಕವಾಗಿತ್ತು. ಸೋಂಕಿತರ ಸಂಖ್ಯೆಯೂ ಹೆಚ್ಚಾಗಿತ್ತು. ಆ ವೇಳೆ, ಅಂತ್ಯಕ್ರಿಯೆ ಬಳಿಕ ಅಸ್ಥಿ ಪಡೆಯಲು ಸಂಬಂಧಿಕರು ಬಾರದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಮುಕ್ತಿ ಕಾರ್ಯ ನಡೆಸಿಕೊಡಲಾಗಿದೆ.

ಶ್ರೀರಂಗಪಟ್ಟಣದ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಹತ್ತು ಮಂದಿಯ ತಂಡ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ತಾಲೂಕಿನ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಬೆಳಕವಾಡಿ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದ ಬಳಿಯ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿತು.

ಕೋವಿಡ್ ಪೀಡಿತರ ನೂರಾರು ಶವಗಳನ್ನು ಉತ್ತರಪ್ರದೇಶದಲ್ಲಿ ಗಂಗಾ ನದಿಗೆ ಬಿಸಾಡಲಾಗಿತ್ತು. ಆದರೆ, ಕಂದಾಯ ಸಚಿವ ಆರ್.ಅಶೋಕ್ ಅವರು ಅನಾಥ ಅಸ್ಥಿಗಳನ್ನು ಸಂಪ್ರದಾಯಬದ್ಧವಾಗಿ ವಿಸರ್ಜಿಸುವ ಮೂಲಕ ಮೃತರಿಗೆ ವಿಶಿಷ್ಠ ರೀತಿಯಲ್ಲಿ ಗೌರವ ಸಲ್ಲಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. 

ಅಸ್ಥಿ ವಿಸರ್ಜನೆ ಧಾರ್ಮಿಕ ಪ್ರಕ್ರಿಯೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಅಶೋಕ್ ಅವರು, ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಸ್ಥಿಯನ್ನು ಬಹಳ ದಿನಗಳು ಕಳೆದರೂ ಕುಟುಂಬದ ಸದಸ್ಯರು ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಸರ್ಕಾರವೇ ಜವಾಬ್ದಾರಿ ತೆಗೆದುಕೊಂಡು ಸಂಪ್ರದಾಯದ ಪ್ರಕಾರ ಅಸ್ಥಿ ವಿಸರ್ಜನೆ ಮಾಡುತ್ತಿದೆ. ಇದು ಕಷ್ಟದ ಸಂದರ್ಭ. ನಿನ್ನೆ ನಮ್ಮ ಜತೆಯಲ್ಲಿದ್ದವರು ಇಂದು ಇಲ್ಲ. ಸಂಬಂಧಿಕರು, ಬಂಧುಗಳು, ಸ್ನೇಹಿತರು, ಪರಿಚಯಸ್ಥರೂ ಇಲ್ಲ. ಲಕ್ಷಾಂತರ ಮಂದಿಗೆ ಸೋಂಕು ತಗುಲಿ ಸಾವಿರಾರು ಮಂದಿಗೆ ಸಾವು ತಂದಿದೆ. ಇಂತಹ ಸಂದರ್ಭದಲ್ಲಿ ನಾವುಗಳು ಮಾನವೀಯತೆ ತೋರಬೇಕು. ಯಾವುದೇ ಜಾತಿ, ಧರ್ಮ ಇರಲಿ ಕಷ್ಟದಲ್ಲಿ ಅವರ ಜೊತೆ ಸಹಾಯಕ್ಕೆ ನಿಲ್ಲಬೇಕು. ಅದು ನಮ್ಮ ಕರ್ತವ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು. ಸಾವು ಸಂಭವಿಸಿದ ವೇಳೆ ಜವಾಬ್ದಾರಿ ಮೆರೆಯಬೇಕು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com