2021 ನೇ ಆರ್ಥಿಕ ವರ್ಷದಲ್ಲಿ ಮುಖೇಶ್ ಅಂಬಾನಿ ಪಡೆದ ಸಂಬಳ ಎಷ್ಟು ಗೊತ್ತೇ?

ಏಷ್ಯಾದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈ ವರ್ಷ ಪಡೆದ ಸಂಬಳ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. 
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ

ಮುಂಬೈ: ಏಷ್ಯಾದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈ ವರ್ಷ ಪಡೆದ ಸಂಬಳ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. 

ಕೋವಿಡ್-19 ಸಾಂಕ್ರಾಮಿಕ ದೇಶದ ಎಲ್ಲಾ ವರ್ಗಗಳ ಜನರನ್ನೂ ಕಾಡಿದ್ದು, ಸಂಬಳವನ್ನೇ ಆಧಾರವಾಗಿರಿಸಿಕೊಂಡಿರುವ ಅದೆಷ್ಟೋ ಕುಟುಂಬಗಳಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿಯಲ್ಲಿ ಅಂಬಾನಿ ತಮ್ಮ ವಾರ್ಷಿಕ ವೇತನವನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದಾರೆ. ಅಂದರೆ ಮಾ.31 ಕ್ಕೆ ಮುಕ್ತಾಯಗೊಂಡ 2020-21 ನೇ ಆರ್ಥಿಕ ವರ್ಷದಲ್ಲಿ ಮುಖೇಶ್ ಅಂಬಾನಿ ಶೂನ್ಯ ಸಂಬಳ ಪಡೆದಿದ್ದಾರೆ. 

ರಿಲಾಯನ್ಸ್ ಸಂಸ್ಥೆ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಅಂಬಾನಿ ಅವರ ವೇತನ 2020-21 ರಲ್ಲಿ ಶೂನ್ಯ ಎಂದು ನಮೂದಿಸಿದೆ. ಅಂಬಾನಿ ಕಳೆದ ವರ್ಷ ಈ ಹಿಂದಿನ 11 ವರ್ಷಗಳಂತೆಯೇ 15 ಕೋಟಿ ರೂಪಾಯಿಗಳನ್ನು ಸಂಸ್ಥೆಯಿಂದ ಸಂಬಳ ಪಡೆದಿದ್ದರು. 

2009-09 ರಿಂದಲೂ ಅಂಬಾನಿ ವೇತನ, ಭತ್ಯೆಗಳು, ಕಮಿಷನ್ ಸೇರಿದಂತೆ 15 ಕೋಟಿ ವೇತನ ಪಡೆಯುತ್ತಿದ್ದರು. ಸಂಬಳದಿಂದ ಅಂಬಾನಿ ಅವರ ವಾರ್ಷಿಕ ಆದಾಯದ ಮೊತ್ತ 24 ಕೋಟಿಯಷ್ಟಿದೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ವ್ಯಾಪಿಸಿದ್ದು, ಆರ್ಥಿಕ, ಸಾಮಾಜಿಕ, ಕೈಗಾರಿಕ ಚಟುವಟಿಕೆಗಳು ಕುಸಿತ ಕಂಡಿದ್ದು ರಿಲಾಯನ್ಸ್ ನ ಅಧ್ಯಕ್ಷ ಹಾಗೂ ಎಂಡಿ ಅಂಬಾನಿ ಸ್ವಯಂ ಪ್ರೇರಿತರಾಗಿ ತಮ್ಮ ವೇತನ ಬಿಟ್ಟುಕೊಡುವುದಕ್ಕೆ ನಿರ್ಧರಿಸಿದ್ದಾರೆ ಎಂದು ಸಂಸ್ಥೆ ಕಳೆದ ವರ್ಷ ಜೂನ್ ನಲ್ಲಿ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com