ಬ್ಲಾಕ್ ಫಂಗಸ್: ಕರ್ನಾಟಕಕ್ಕೆ ಮತ್ತೆ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಪೂರೈಕೆ- ಕೇಂದ್ರ ಸಚಿವ ಸದಾನಂದಗೌಡ
ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕರ್ನಾಟಕದಲ್ಲಿ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ಹೆಚ್ಚುವರಿಯಾಗಿ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.
Published: 04th June 2021 03:20 PM | Last Updated: 04th June 2021 04:52 PM | A+A A-

ಆಂಫೊಟೆರಿಸಿನ್-ಬಿ ಪೂರೈಕೆ
ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕರ್ನಾಟಕದಲ್ಲಿ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ಹೆಚ್ಚುವರಿಯಾಗಿ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.
ಈ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಅವರು ಮಾಹಿತಿ ನೀಡಿದ್ದು, ಕರ್ನಾಟಕಕ್ಕೆ ಮತ್ತೆ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಲಿಪೊಸೋಮಲ್ #AmphotericinB ಯ ಕನಿಷ್ಠ 30,000 ಬಾಟಲುಗಳನ್ನು ತಕ್ಷಣವೇ ರಾಜ್ಯಕ್ಕೆ ಒದಗಿಸುವಂತೆ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.@airnewsalerts
— DD Chandana News (@DDChandanaNews) June 4, 2021
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಕರ್ನಾಟಕಕ್ಕೆ ಹೆಚ್ಚುವರಿ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯನ್ನು ಹಂಚಿಕೆ ಮಾಡಲಾಗಿದ್ದು, ಆ ಮೂಲಕ ಈ ವರೆಗೂ ಕರ್ನಾಟಕಕ್ಕೆ 22460 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ ಇಲ್ಲಿಯವರೆಗೂ ದೇಶದ ವಿವಿಧ ರಾಜ್ಯಗಳಿಗೆ 121000 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Additional 121000 vials of #Amphotericin-B have been allocated to all the States/UTs and Central Institutions today.#IndiaFightsCorona#AmphotericinB #BlackFungus@PMOIndia @MoHFW_INDIA @PIB_India @Pharmadept
— Sadananda Gowda (@DVSadanandGowda) June 4, 2021
ಇನ್ನು ಅತ್ತ ತಮಿಳುನಾಡಿನಲ್ಲೂ ಬ್ಲಾಕ್ ಫಂಗಸ್ ಸೋಂಕು ಪ್ರಕರಣಗಳು ಹೆಚ್ಚಾಗಿದ್ದು, ಈ ಕೂಡಲೇ ತಮಿಳುನಾಡಿಗೆ ಕನಿಷ್ಠ 30,000 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯನ್ನು ಪೂರೈಕೆ ಮಾಡುವಂತೆ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
Additional 9750 vials of #Amphotericin-B have been allocated to Karnataka today.
— Sadananda Gowda (@DVSadanandGowda) June 4, 2021
Inclusive of today's allocation, total 22460 vials of the drug have been allocated to the state till now.@PIBBengaluru @DHFWKA @drashwathcn @BSYBJP @CMofKarnataka