ಕೆಎಸ್ ಆರ್ ಟಿಸಿ ಬಳಸುವಂತಿಲ್ಲ ಎಂಬ ಯಾವುದೇ ಆದೇಶ ಹೊರಬಿದ್ದಿಲ್ಲ: ಸಾರಿಗೆ ನಿಗಮ ಸ್ಪಷ್ಟನೆ

ರಾಜ್ಯ ರಸ್ತೆ ಸಾರಿಗೆ ನಿಗಮ ಇನ್ನು ಮುಂದೆ ಕೆಎಸ್ ಆರ್ ಟಿಸಿ ಎಂದು ಬಳಸುವಂತಿಲ್ಲ ಎಂದು ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿ ಆದೇಶ ಹೊರಡಿಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ ಎಂದು ನಿಗಮ ಸ್ಪಷ್ಪಪಡಿಸಿದೆ.
ಕೆಎಸ್ ಆರ್ ಟಿಸಿ ಬಸ್ ಗಳು
ಕೆಎಸ್ ಆರ್ ಟಿಸಿ ಬಸ್ ಗಳು

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮ ಇನ್ನು ಮುಂದೆ ಕೆಎಸ್ ಆರ್ ಟಿಸಿ ಎಂದು ಬಳಸುವಂತಿಲ್ಲ ಎಂದು ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿ ಆದೇಶ ಹೊರಡಿಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ ಎಂದು ನಿಗಮ ಸ್ಪಷ್ಪಪಡಿಸಿದೆ.

ಕೆಎಸ್ ಆರ್ ಟಿಸಿ ಎಂದು ಬಳಕೆ ಮಾಡುವಂತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಅಚ್ಚರಿ ತಂದಿದೆ. ವಾಸ್ತವದಲ್ಲಿ ಸಂಸ್ಥೆ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಅಂತಹ ಯಾವುದೇ ಸೂಚನೆ, ಆದೇಶ ಸ್ವೀಕರಿಸಿಲ್ಲ ಎಂದು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಸದ್ಯ ಕೆಎಸ್ಆರ್ ಟಿಸಿ ಟ್ರೇಡ್ ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಆದೇಶ ಅಥವಾ ನಿಷೇಧ ಇಲ್ಲ ಎಂದಿದ್ದಾರೆ.

ದಶಕಗಳಿಂದ ಕೆಎಸ್​ಆರ್​ಟಿಸಿ ಎಂಬ ಹೆಸರನ್ನು ಹೊಂದಿದ್ದ ಕರ್ನಾಟಕದ ಸಾರಿಗೆ ನಿಗಮ ಇದೀಗ ಈ ಹೆಸರನ್ನ ಕಳೆದುಕೊಂಡಿದ್ದು ಈ ಹೆಸರು ಕೇರಳಕ್ಕೆ ಸೇರಿದ್ದು ಎಂದು ಟ್ರೇಡ್​ ಮಾರ್ಕ್​ ರಿಜಿಸ್ಟ್ರಿ ಬುಧವಾರ ತೀರ್ಪು ಹೊರಡಿಸಿರುವುದಾಗಿ ಸುದ್ದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com