ಎಂಟು ವಾರಗಳಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಮರಣ ಪ್ರಮಾಣ ಶೇ.0.50 ರಿಂದ 4.82ಕ್ಕೆ ಏರಿಕೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರೂ, ದಾಖಲಾಗುತ್ತಿರುವ ಸಾವಿನ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 250 ಸಾವಿನ ಪ್ರಕರಣಗಳು ದಾಖಲಾಗುತ್ತಿದ್ದರೆ, ರಾಜ್ಯದಲ್ಲಿ ಏಳು ದಿನಗಳು ಕೂಡಾ ದಿನವೊಂದಕ್ಕೆ 400 ಸಾವಿನ ಪ್ರಕರಣಗಳು ದಾಖಲಾಗುತ್ತಿವೆ.
ಸ್ಮಶಾನ
ಸ್ಮಶಾನ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರೂ, ದಾಖಲಾಗುತ್ತಿರುವ ಸಾವಿನ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 250 ಸಾವಿನ ಪ್ರಕರಣಗಳು ದಾಖಲಾಗುತ್ತಿದ್ದರೆ, ರಾಜ್ಯದಲ್ಲಿ ಏಳು ದಿನಗಳು ಕೂಡಾ ದಿನವೊಂದಕ್ಕೆ 400 ಸಾವಿನ ಪ್ರಕರಣಗಳು ದಾಖಲಾಗುತ್ತಿವೆ.

ಕಳೆದ ಆರು ದಿನಗಳಲ್ಲಿ ನಗರದ ಸಾವಿನ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ವಾರ್ ರೂಮ್ ಮಾಹಿತಿ ಪ್ರಕಾರ, ಏಪ್ರಿಲ್ 5-11 ರ ನಡುವಣ ಶೇ.0.50 ರಷ್ಟಿದ್ದ ನಗರದಲ್ಲಿನ ಕೋವಿಡ್ ಮರಣ ಪ್ರಮಾಣ ಮೇ 3-9 ರ ನಡುವಣ ಶೇ.1.16ಕ್ಕೆ, ಇದೀಗ ಮೇ 24-30ರ ನಡುವಣ ಶೇ.4.82ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ 1833 ಮಂದಿ ಸಾವನ್ನಪ್ಪಿದ್ದಾರೆ. 

ಮೇ 17-23ರ ನಡುವಣ 1793, ಮೇ 10-16 ರ ನಡುವಣ 1292 ಮರಣ ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ ಆರಂಭದಲ್ಲಿ ಏಪ್ರಿಲ್ 5-11 ರ ನಡುವಣ ಕೇವಲ 188 ಮಂದಿ ಸಾವನ್ನಪ್ಪಿದ್ದರು. ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಅವಧಿಯಲ್ಲಿ ಸಾವಿನ ಪ್ರಕರಣಗಳು ಕೂಡಾ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಪ್ರಿಲ್ ಎರಡನೇ ವಾರದಿಂದಲೂ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮೇ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗೊಂಡ ನಂತರ ಪಾಸಿಟಿವ್ ಕೇಸ್ ಗಳ ಸಂಖ್ಯೆಯೂ ಹೆಚ್ಚಾಗಿದ್ದು, ತೀವ್ರ ಕೋವಿಡ್ ನಿಂದ ಅನೇಕ ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ದುರಾದೃಷ್ಟವಶಾತ್ ಅವರು ಚೇತರಿಕೆಯಾಗಲಿಲ್ಲ. ಇದರಿಂದಾಗಿ ಮರಣ ಪ್ರಮಾಣ ಕೂಡಾ ಹೆಚ್ಚಾಗುತ್ತಲೇ ಸಾಗಿದೆ.

ಆದಾಗ್ಯೂ, ಮುಂದಿನ 2-4 ವಾರಗಳಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಗಳ ಸಂಖ್ಯೆಯ ಕಡಿಮೆಯಾಗಲಿದ್ದು, ಮರಣ ಪ್ರಮಾಣ ಕೂಡಾ ಕಡಿಮೆಯಾಗಲಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಅನೂಫ್ ಅಮರನಾಥ್ ಹೇಳಿದ್ದಾರೆ.

ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಆಕ್ಸಿಜನ್ ಮತ್ತು ಐಸಿಯು ಬೆಡ್ ನಲ್ಲಿದ್ದ ಕೆಲವರು ಡಿಸ್ಚಾರ್ಜ್ ಆಗುತ್ತಿರುವುದು ಒಳ್ಳೆಯ ಸಂದೇಶವಾಗಿದೆ. ಈ ಸುಧಾರಣೆಯೊಂದಿಗೆ ಮುಂದಿನ 10-14 ದಿನಗಳಲ್ಲಿ ಪರಿಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆಯಿದ್ದು, ಮರಣ ಪ್ರಮಾಣ ಕೂಡಾ ತಗ್ಗಲಿದೆ ಎಂದು ಕೋವಿಡ್ -19 ರಾಜ್ಯ ಮಟ್ಟದ ಸಮಿತಿ ಸದಸ್ಯ ಹಾಗೂ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ನಿರ್ದೇಶಕ ಡಾ. ಸಿ. ನಾಗರಾಜ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ತೀವ್ರಗತಿಯಲ್ಲಿ ಕೋವಿಡ್-19 ಸಾವಿನ ಪ್ರಕರಣಗಳು ಇಂತಿದೆ.
April 5-11 - 0.50% 
April 12-18 - 0.54%
April 19-25 -  0.60% 
April 26- May 2 - 0.54% 
May 3-9 - 1.16%
May 10-16 -  1.34%
May 17-23 -  2.95% 
May 24-30 - 4.82%

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com