ಚಾಮರಾಜನಗರ: ಬುಡಕಟ್ಟು ಜನರ ಮನವೊಲಿಸಿದ ಅಧಿಕಾರಿಗಳು, ಕೋವಿಡ್ ಕೇರ್ ಕೇಂದ್ರಕ್ಕೆ ಹೋಗಲು ಒಪ್ಪಿಗೆ

ಮೂಡನಂಬಿಕೆಗಳಿಗೆ ಜೋತು ಬಿದ್ದು ಕೊರೋನಾ ಲಸಿಕೆ, ಕೊರೋನಾ ತಪಾಸಣೆಗೊಳಗಾಗದೆ, ಸೋಂಕಿತರು ಕೋವಿಡ್ ಕೇರ್ ಕೇಂದ್ರಕ್ಕೆ ತೆರಳದೆ ಪಟ್ಟುಹಿಡಿದು ಕುಳಿತಿದ್ದ ಬುಡಕಟ್ಟು ಜನರ ಮನವೊಲಿಸಿರುವ ಅಧಿಕಾರಿಗಳು, ಕೊನೆಗೂ ಸೋಂಕಿತರು ಕೋವಿಡ್ ಕೇರ್ ಕೇಂದ್ರಕ್ಕೆ ತೆರಳುವಂತೆ ಮಾಡಿದ್ದಾರೆ. 
ಜೀರಿಗೆ ಗದ್ದೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಕೇಂದ್ರ
ಜೀರಿಗೆ ಗದ್ದೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಕೇಂದ್ರ

ಮೈಸೂರು: ಮೂಡನಂಬಿಕೆಗಳಿಗೆ ಜೋತು ಬಿದ್ದು ಕೊರೋನಾ ಲಸಿಕೆ, ಕೊರೋನಾ ತಪಾಸಣೆಗೊಳಗಾಗದೆ, ಸೋಂಕಿತರು ಕೋವಿಡ್ ಕೇರ್ ಕೇಂದ್ರಕ್ಕೆ ತೆರಳದೆ ಪಟ್ಟುಹಿಡಿದು ಕುಳಿತಿದ್ದ ಬುಡಕಟ್ಟು ಜನರ ಮನವೊಲಿಸಿರುವ ಅಧಿಕಾರಿಗಳು, ಕೊನೆಗೂ ಸೋಂಕಿತರು ಕೋವಿಡ್ ಕೇರ್ ಕೇಂದ್ರಕ್ಕೆ ತೆರಳುವಂತೆ ಮಾಡಿದ್ದಾರೆ. 

ಪಂಚಾಯತ್ ನಿಯಂತ್ರಣದಲ್ಲಿ ಬರುವ ಅವೆನೆಮೋಲ್, ಉದತಿ, ಮಾವತೂರ್, ಹಟ್ಟಿಕಾನೆ, ಹೂನಮೆಟೆ ಮತ್ತು ಇತರ ಕುಗ್ರಾಮಗಳಲ್ಲಿ ನೆಲೆಸಿರುವ ನೂರಾರು ಮಂದಿ ಬುಡಕಟ್ಟು ಜನರು ಬಹಿರಂಗವಾಗಿಯೇ ಕೊರೋನಾ ಲಸಿಕೆ ಪಡೆಯುವುದಿಲ್ಲ, ತಪಾಸಣೆಗೊಳಗಾಗುವುದಿಲ್ಲ ಎಂದು ಹೇಳುತ್ತಿದ್ದರು. 

ಅಧಿಕಾರಿಗಳೇ ಪರೀಕ್ಷೆ ಹಾಗೂ ಲಸಿಕೆ ಪಡೆಯಿರಿ ಎಂದು ಸ್ಥಳಕ್ಕೆ ತೆರಳಿದರೂ ಬುಡಕಟ್ಟು ಜನರು ದೂರ ಸರಿದಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆದರೆ, ಗುರುವಾರ ಗಿರಿಜನರು ಜಿಲ್ಲಾಪಂಚಾಯತ್ ಸಿಇಔ ಹಾಗೂ ಸಂಬಂಧಪಟ್ಟ ಗಿರಿಜನ ಮುಖಂಡರು, ಗ್ರಾಮಪಂಚಾಯಿತಿ ಜನಪ್ರನಿಧಿಗಳು ಹಲವು ಗಿರಿಜನ ಮುಖಂಡರ ಮನವೊಲಿಸಿದರು. ಬಳಿಕ ಗಿರಿಜನರು ಲಸಿಕೆ ಹಾಕಿಸಿಕೊಳ್ಳುವ ಜೊತೆಗೆ ಕೋವಿಡ್ ತಪಾಸಣೆಗೂ ಮುಂದಾದರು.

ಗುರುವಾರ ಸಂಜೆ ಜೀರಿಗೆ ಗದ್ದೆಯಲ್ಲಿ ನಡೆದ ಸಭೆಯಲ್ಲಿ ಸಿಇಒ ಹರ್ಷಲ್ ಬಿ ನಾರಾಯಣ್ ರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ, ಕೋವಿಡ್ ಕ್ಯಾಪ್ಟನ್ ಪಡೆ, ಗಿರಿಜನ ಸಂಘಟನೆಗಳ ಮುಖಂಡರಾದ ಮುತ್ತಯ್ಯ, ಮುತ್ತೇಗೌಡ, ಮಾದೇವಯ್ಯ, ಮಾದೇಶ ಮತ್ತು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಮ್ಮುಖದಲ್ಲಿ ಒಲ್ಲದ ಗಿರಿಜನರನ್ನು ಪ್ರಾರಂಭದಲ್ಲಿ ಕೋವಿಡ್ ಪರೀಕ್ಷೆಗಾಗಿ ಸುಧೀರ್ಘ ಸಭೆಯ ಬಳಿಕ ಮನವೊಲಿಸಲಾಯಿತು. ಇದಕ್ಕೂ ಮುನ್ನ ಹಲವು ಮನೆಗಳಿಗೆ ಸಿಇಒ ಭೇಟಿ ನೀಡಿ ಮನಿ ಮಾಡಿದ್ದರು. 

ಬಳಿಕ ಮೊದಲ ಹಂತದಲ್ಲಿ ಗುರುವಾರವೇ 66 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಯಿತು. ಜೀರಿಗೆಗಟ್ಟೆಯ 7 ಮಂದಿಗೆ ಪಾಸಿಟಿವ್ ಪ್ರಕರಣ ಪರೀಕ್ಷೆಯಿಂದ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಹನೂರು ಇಲ್ಲವೇ ಕೊಳ್ಳೇಗಾಲ ಕೋವಿಡ್ ಕೇರ್ ಸೆಂಟರ್'ಗೆ ದಾಖಲಿಸಲು ಸಿಇಒ ಸೂಚಿಸಿದ್ದರು. ಆದರೆ, ಪಾಸಿಟಿವ್ ಬಂದ 7 ಮಂದಿ ಕೋವಿಡ್ ಕೇರ್ ಸೆಂಟರ್'ಗೆ ಹೋಗುವುದಿಲ್ಲ. ಬೇಕಿದ್ದರೆ ನಾವು ಸತ್ತು ಹೋಗುತ್ತೇವೆಂದು ಹೇಳಿದ್ದರು. ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ತೆರಳಲಿಲ್ಲ. ಬಳಿಕ ಮತ್ತೊಂದು ನಿರ್ಣಯಕೈಗೊಂಡ ಜಿಲ್ಲಾ ಪಂಚಾಯತ್ ಸಿಇಓ, ಜೀರಿಗೆ ಗದ್ದೆಯಲ್ಲಿರುವ ಆಶ್ರಮ ಶಾಲೆಯಲ್ಲಿಯೇ 7 ಮಂದಿಯನ್ನು ದಾಖಲಿಸಿ, ಕೋವಿಡ್ ಕೇರ್ ಪ್ರಾರಂಭಿಸುವ ನಿರ್ಧಾರಕ್ಕೆ ಬಂದರು. ಈ ಹಿನ್ನೆಲೆಯಲ್ಲಿ 7 ಮಂದಿ ರಾತ್ರಿಯೇ ದಾಖಲಾದರು. 

20 ಹಾಸಿಗೆಯ ಕೋವಿಡ್ ಕೇರ್ ಕೇಂದ್ರವನ್ನು ಆರಂಭಿಸಲಾಗಿದೆ. ಅಗತ್ಯಬಿದ್ದರೆ ಮತ್ತಷ್ಟು ಹಾಸಿಗೆಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಆಹಾರ, ಔಷಧಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. 24*7 ವೈದ್ಯಕೀಯ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸ್ಥಳದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನೂ ಹೆಚಿಚಸಾಲಗುತ್ತದೆ. ಕೊರೋನಾ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಲಾಗುತ್ತದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಅವರು ಹೇಳಿದ್ದಾರೆ. 

ನಾನು ಮತ್ತು ಪಂಚಾಯತ್ ಅಧಿಕಾರಿಗಳು ಮನೆ ಮನೆಗೆ ತೆರಳಿ ಲಸಿಕೆ ಪಡೆಯುವಂತೆ, ಪರೀಕ್ಷೆಗೊಳಗಾಗುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದೆವು. ನಿಧಾನವಾಗಿ ಒಪ್ಪಿಕೊಳ್ಳಲು ಮುಂದಾದರು. ಇದೀಗ ಕೋವಿಡ್ ಕೇಂದ್ರಕ್ಕೆ ದಾಖಲಾಗಲೂ ಒಪ್ಪಿದ್ದಾರೆಂದು ಜಿಲ್ಲಾ ಪಂಚಾಯತ್ ಸಿಇಒ ಬಿ.ಹೆಚ್ ನಾರಾಯಣ ರಾವ್ ಅವರು ಹೇಳಿದ್ದಾರೆ. 

ಸೋಮನಹಳ್ಳಿಗೆ ಭೇಟಿ ನೀಡಿ ಪಂಚಾಯತ್ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಕೋವಿಡ್ ಕೇರ್ ಕೇಂದ್ರವನ್ನು ಸಾರ್ವಜನಿಕರಿಗಾಗಿ ಆರಂಭ ಮಾಡುವುದಕ್ಕೂ ಮುನ್ನ ವಿದ್ಯುತ್, ಶೌಚಾಲಯದ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸಲಹೆಗಳನ್ನು ನೀಡಿದ್ದೇನೆಂದು ತಿಳಿಸಿದ್ದಾರೆ. 

ಗುಂಡ್ಲುಪೇಟೆ ತಾಲೂಕಿನ ಸೋಮನಹಳ್ಳಿ ಪಂಚಾಯತ್ ಸದಸ್ಯರು ಶಾಲೆಯನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಮಾರ್ಪಾಡು ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಇದರೆ, ಕೇಂದ್ರಕ್ಕೆ, ಹಾಸಿಗೆಗಳು, ಹೊದಿಕೆಗಳು, ಅಗತ್ಯ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಪುರುಷ ಹಾಗೂ ಮಹಿಳೆಯರಿಗೆ ಹಾಸಿಗೆಯನ್ನು ಮೀಸಲಿಡಲಾಗಿದ್ದು, ಮನೆಗಳಲ್ಲಿ ಐಸೋಲೇಷನ್ ನಲ್ಲಿ ಇರಲು ಸಾಧ್ಯವಾಗದವರು ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೆಲದಿನಗಳಿಂದ ಸುರಿದ ಮಳೆಯಿಂದಾಗಿ ಗ್ರಾಮದಲ್ಲಿನ ಜನರಲ್ಲಿ ಸೋಂಕು ಹೆಚ್ಚಾಗುವಂತೆ ಮಾಡಿದೆ. ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗುವಂತೆ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳು ಜನರ ಮನವೊಲಿಸಲುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕೋವಿಡ್ ಕೇರ್ ಕೇಂದ್ರ ಗ್ರಾಮಸ್ಥರಿಗೆ ಸಹಾಯ ಮಾಡಲಿದೆ ಎಂದು ಪಂಚಾಯತ್ ಸದಸ್ಯ ಗುರುಪ್ರಸಾದ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com