ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದವರಿಗೆ ರೂ.2 ಸಾವಿರ ಬಹುಮಾನ: ಗ್ರಾ.ಪಂ ಅಧ್ಯಕ್ಷನಿಂದ ಬಂಪರ್ ಆಫರ್
ಕೊರೊನಾ ಟೆಸ್ಟ್ ಮಾಡಿಸಿಕೊಂಡವರಿಗೆ ತಲಾ ಐನೂರು ರೂಪಾಯಿ ಕೊಡುವುದಾಗಿ ಹೇರೂರು ಪಂಚಾಯತ್ ಅಧ್ಯಕ್ಷ ಘೋಷಣೆ ಮಾಡಿದ ಬೆನ್ನಲ್ಲೆ, ಇದೀಗ ಕನಕಗಿರಿ ತಾಲೂಕು ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಲಾ 2 ಸಾವಿರ ರೂಪಾಯಿ ಇನಾಮು ಪ್ರಕಟಿಸಿದ್ದಾರೆ.
Published: 06th June 2021 07:40 AM | Last Updated: 06th June 2021 07:40 AM | A+A A-

ಸಂಗ್ರಹ ಚಿತ್ರ
ಕೊಪ್ಪಳ: ಕೊರೊನಾ ಟೆಸ್ಟ್ ಮಾಡಿಸಿಕೊಂಡವರಿಗೆ ತಲಾ ಐನೂರು ರೂಪಾಯಿ ಕೊಡುವುದಾಗಿ ಹೇರೂರು ಪಂಚಾಯತ್ ಅಧ್ಯಕ್ಷ ಘೋಷಣೆ ಮಾಡಿದ ಬೆನ್ನಲ್ಲೆ, ಇದೀಗ ಕನಕಗಿರಿ ತಾಲೂಕು ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಲಾ 2 ಸಾವಿರ ರೂಪಾಯಿ ಇನಾಮು ಪ್ರಕಟಿಸಿದ್ದಾರೆ.
ಕೊಪ್ಪಳ: ಕೊರೊನ ಎರಡನೇ ಅಲೆ ಆರಂಭದಲ್ಲೆ ಸರ್ಕಾರ ಕ್ವಾರೆಂಟೇನ್ ಸೆಂಟರ್ ಆರಂಭಿಸಿಲ್ಲ. ಈ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಸೋಂಕಿ ಹೆಚ್ಚಾಗ್ತಿದೆ ಎಂದು ತಜ್ಞರು ಹೇಳಿದ ನಂತರ ಸರಕಾರ ಸಾಕಷ್ಟು ಕ್ವಾರೆಂಟೇನ್ ಸೆಂಟರ್ ಆರಂಭಿಸಿದ್ರೂ ಸೋಂಕಿತರು ಮಾತ್ರ ಮನೆ ಬಿಟ್ಟು ಬರ್ತಿಲ್ಲ. ಈ ಕಾರಣಕ್ಕೆ ಗ್ರಾ.ಪಂ. ಅಧ್ಯಕ್ಷರೊಬ್ಬರು ಕ್ವಾರೆಂಟೇನ್ ಕೇಂದ್ರಕ್ಕೆ ಬರುವವರಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದಾರೆ.
ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ವೈಯಕ್ತಿವಾಗಿ 2 ಸಾವಿರ ರೂಪಾಯಿ ನೀಡುವುದಾಗಿ ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ತಿಪ್ಪಣ್ಣ ಗಡ್ಡಿ ಘೋಷಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ, ಅದರಲ್ಲೂ ಕಾರಟಗಿ, ಕನಕಗಿರಿ ಒಳಗೊಂಡ ಅವಿಭಜಿತ ಗಂಗಾವತಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕು ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡರೆ, ಚುನಾಯಿತ ಪ್ರತಿನಿಧಿಗಳು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ರೋಗ ನಿಯಂತ್ರಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಸೋಂಕಿಗೊಳಗಾಗಿ ಹೋಂ ಐಸೋಲೇಷನ್ ನಲ್ಲಿರುವ ಜನರು ಕೋವಿಡ್ ಕೇರೇ ಕೇಂದ್ರಕ್ಕೆ ತೆರಳುವಂತೆ ಅಧಿಕಾರಿಗಳು ಸಾಕಷ್ಟು ಮನವಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ. ಹೋಂ ಐಸೋಲೇಷನ್ ನಲ್ಲಿರೋ ಗ್ರಾಮೀಣ ಪ್ರದೇಶದ ಯುವಕರು ಊರೆಲ್ಲ ಓಡಾಡಿಕೊಂಡು ಸೋಂಕು ಹರಿಡಿಸುತ್ತಿದ್ದಾರೆ. ಇನ್ನೊಂದಿಷ್ಟು ಜನರು ಕೃಷಿ ಕೆಲಸಕ್ಕೆ ಹೋಗಿಯೂ ಸೋಂಕು ಹರಡುತ್ತಿದ್ರು. ಈ ಕಾರಣಕ್ಕೆ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ಕರೆ ತರೋದು ಅನಿವಾರ್ಯವಾಗಿದೆ. ಹೀಗಾಗಿ ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಸೋಂಕಿತರಿಕೆ ಸಾಂಕ್ರಾಮಿಕ ರೋಗದ ತೀವ್ರತೆ ಅರ್ಥವಾಗುತ್ತಿಲ್ಲ. ಬಹುಮಾನ ಘೋಷಣೆಯಿಂದ ಸೋಂಕಿತರು ಕೋವಿಡ್ ಕೇರ್ ಕೇಂದ್ರಕ್ಕೆ ತೆರಳುತ್ತಾರೆಂದು ತಿಪ್ಪಣ್ಣ ಗಡ್ಡಿಯವರು ಹೇಳಿದ್ದಾರೆ.
ತಿಪ್ಪಣ್ಣ ಅವರು ಬಹುಮಾನ ಘೋಷಣೆ ಮಾಡಿರುವುದರಿಂದ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗದ ಕುರಿತು ಜಾಗೃತಿ ಮೂಡಿಸಲು ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.