ಲಾಕ್ ಡೌನ್ ನಿಂದ ಸಾರಿಗೆ ಇಲಾಖೆಯ ನಿಗಮಗಳಿಗೆ ಒಟ್ಟು 560 ಕೋಟಿ ರೂ. ನಷ್ಟ

ಕೊರೋನಾ ಎರಡನೇ ಅಲೆಯಿಂದ ಸಾರಿಗೆ ನಿಗಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಲಾಕ್ ಡೌನ್ ನಿಂದ ಇಲ್ಲಿಯವರೆಗೂ ಸಾರಿಗೆ ನಿಗಮಗಳಿಗೆ ಒಟ್ಟು 560 ಕೋಟಿ ರೂ. ನಷ್ಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಎಸ್ ಆರ್ ಟಿಸಿ ಬಸ್ ಗಳು
ಕೆಎಸ್ ಆರ್ ಟಿಸಿ ಬಸ್ ಗಳು

ಬೆಂಗಳೂರು:  ಕೊರೋನಾ ಎರಡನೇ ಅಲೆಯಿಂದ ಸಾರಿಗೆ ನಿಗಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಲಾಕ್ ಡೌನ್ ನಿಂದ ಇಲ್ಲಿಯವರೆಗೂ ಸಾರಿಗೆ ನಿಗಮಗಳಿಗೆ ಒಟ್ಟು 560 ಕೋಟಿ ರೂ. ನಷ್ಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾರಿಗೆ ಇಲಾಖೆಯಿಂದ ಈ ಬಗ್ಗೆ ಸೋಮವಾರ ಮಾಹಿತಿ ಲಭ್ಯವಾಗಿದ್ದು, ನೌಕರರಿಗೆ ಸಂಬಳ ಕೊಡಲು ಸಾರಿಗೆ ಸಂಸ್ಥೆಯ
ನಾಲ್ಕು ನಿಗಮಗಳು ಹೆಣಗಾಡುವಂತಾಗಿದೆ.

ಕೋರೋನಾ ಹಿನ್ನಲೆ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಬಸ್‌ಗಳು ರಸ್ತೆಗಿಳಿದಿಲ್ಲ. ಬಸ್‌ಗಳು ಕಾರ್ಯಚರಣೆ ಆಗದ ಹಿನ್ನಲೆ ನಾಲ್ಕು ನಿಗಮಗಳಿಗೆ 560 ಕೋಟಿ ರೂ. ನಷ್ಟವಾಗಿದೆ. ಅಲ್ಲದೇ ಈ ಹಿಂದೆ ನೌಕರರು ಮುಷ್ಕರ ನಡೆಸಿದ್ದರ ಪರಿಣಾಮ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಇದನ್ನು ಚೇತರಿಸಿಕೊಳ್ಳುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಿಂದ ಈಗ ಮತ್ತಷ್ಟು ಸಾರಿಗೆ ಸಂಸ್ಥೆಗೆ ನಷ್ಟವಾಗಿದೆ.

ಕೊರೋನಾ ಎರಡನೇ ಅಲೆಯಿಂದ ಯಾವ ಯಾವ ನಿಗಮಗಳಿಗೆ ಎಷ್ಟು ನಷ್ಟ? ಸಾರಿಗೆ ನೌಕರರು ಮುಷ್ಕರದಿಂದ ದಿನದ ನಷ್ಟವೆಷ್ಟು? ಒಂದು ದಿನ ಬಸ್ ನಿಂತರೆ ನಾಲ್ಕು ನಿಗಮಗಳಿಗೆ ನಷ್ಟ ಎಷ್ಟು? ಎನ್ನುವುದನ್ನು ನೋಡುವುದಾದರೆ ಒಂದು ದಿನ ಬಸ್ ಕಾರ್ಯಾಚರಣೆ ಸ್ಥಗಿತವಾದರೆ ನಾಲ್ಕು ನಿಗಮಗಳಿಗೆ ಸುಮಾರು 14 ಕೋಟಿ ರೂ. ನಷ್ಟವಾಗುತ್ತದೆ.

ಪ್ರಸ್ತುತ ಬಿಎಂಟಿಸಿಯ ದಿನದ ಆದಾಯ ಸುಮಾರು 2.5 ರಿಂದ 3 ಕೋಟಿ ಇದೆ. ಲಾಕ್ಡೌನ್ ಘೋಷಣೆಯಾಗಿ 40 ದಿನ ಕಳೆದಿದೆ. ಇದರಿಂದ ಇಲ್ಲಿವರೆಗೆ ಬಿಎಂಟಿಸಿಗೆ 120 ಕೋಟಿ ರೂ‌. ನಷ್ಟವಾಗಿದೆ. ಕೆಎಸ್ಆರ್‌ಟಿಸಿ ನಿತ್ಯದ ಆದಾಯ 7 ಕೋಟಿ ರೂ. ಇದ್ದು, 40 ದಿನಕ್ಕೆ ಕೆಎಸ್ಆರ್‌ಟಿಸಿ ಗೆ ಒಟ್ಟು 280 ಕೋಟಿ ರೂ. ನಷ್ಟವಾಗಿದೆ.

ವಾಯುವ್ಯ ಸಾರಿಗೆ ನಿಮಗದ ಪ್ರಸ್ತುತ ಆದಾಯ 2 ಕೋಟಿ ರೂ‌. ಆಗಿದ್ದು, 40 ದಿನಕ್ಕೆ ವಾಯುವ್ಯ ಸಾರಿಗೆಗೆ ಒಟ್ಟು 80 ಕೋಟಿ ರೂ‌. ನಷ್ಟವಾಗಿದೆ. ಈಶಾನ್ಯ ಸಾರಿಗೆ ನಿಗಮದ ಪ್ರಸ್ತುತ ನಿತ್ಯ ಆದಾಯ 2 ಕೋಟಿ ರೂ‌. ಆಗಿದ್ದು, 40 ದಿನಕ್ಕೆ ಈಶಾನ್ಯ ಸಾರಿಗೆಗೆ ಒಟ್ಟು 80 ಕೋಟಿ ರೂ‌. ನಷ್ಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com