ಬೆಂಗಳೂರು: ಮಣಿಪಾಲ್ ಆಸ್ಪತ್ರೆಗಳಲ್ಲಿ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಲಭ್ಯ

ಮಣಿಪಾಲ್ ಹಾಸ್ಪಿಟಲ್ಸ್‌ ಸಮೂಹವು ತನ್ನ ಕೋವಿಡ್‌ ಲಸಿಕೆ ಕಾರ್ಯಕ್ರಮದಲ್ಲಿ ‘ಸ್ಪುಟ್ನಿಕ್‌-ವಿ’ ಯನ್ನು ಸೇರ್ಪಡೆ ಮಾಡಿದ್ದು, ಈ ಸಂಬಂಧ ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌ (ಡಿಆರ್‌ಎಲ್‌) ಜೊತೆ ಕೈಜೋಡಿಸಿದೆ.
ಸ್ಪುಟ್ನಿಕ್ ವಿ ಲಸಿಕೆ
ಸ್ಪುಟ್ನಿಕ್ ವಿ ಲಸಿಕೆ

ಬೆಂಗಳೂರು: ಮಣಿಪಾಲ್ ಹಾಸ್ಪಿಟಲ್ಸ್‌ ಸಮೂಹವು ತನ್ನ ಕೋವಿಡ್‌ ಲಸಿಕೆ ಕಾರ್ಯಕ್ರಮದಲ್ಲಿ ‘ಸ್ಪುಟ್ನಿಕ್‌-ವಿ’ ಯನ್ನು ಸೇರ್ಪಡೆ ಮಾಡಿದ್ದು, ಈ ಸಂಬಂಧ ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ (ಡಿಆರ್‌ಎಲ್‌) ಜೊತೆ ಕೈಜೋಡಿಸಿದೆ.

ಮಣಿಪಾಲ್ ಆಸ್ಪತ್ರೆಗಳಲ್ಲೂ ಸ್ಪುಟ್ನಿಕ್-ವಿ ಲಸಿಕೆಯು ಸಿಗಲಿದ್ದು, ಸ್ಪುಟ್ನಿಕ್-ವಿ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮಣಿಪಾಲ್ ಸಂಸ್ಥೆಯು ಡಾ.ರೆಡ್ಡೀಸ್ ಪ್ರಯೋಗಾಲಯದ ಸಹಭಾಗತ್ವವನ್ನು ಪಡೆದುಕೊಂಡಿದೆ. ದೇಶದ ಮಣಿಪಾಲ್ ಆಸ್ಪತ್ರೆಗಳಲ್ಲಿ ಕೊವಿಶೀಲ್ಡ್, ಕೊವ್ಯಾಕ್ಸಿನ್ ಜೊತೆಗೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಕೂಡ ಲಭ್ಯವಾಗಲಿದೆ.

ಆಸ್ಪತ್ರೆಯು ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಜೊತೆ ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ನಡೆಸಿದೆ. ನಾವು ಸ್ಪುಟ್ನಿಕ್ ವಿ ಪ್ರಯತ್ನವನ್ನು ಮುಂದುವರಿಸುತ್ತೇವೆ ಎಂದು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ರಾಜಗೋಪಾಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಸ್ಪುಟ್ನಿಕ್‌–ವಿ ಲಸಿಕೆಯನ್ನು ಸೀಮಿತ ಸಂಖ್ಯೆಯ ಜನರಿಗೆ ನೀಡುವ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿತ್ತು. ಡಿಆರ್‌ಎಲ್‌ ಜೊತೆಗೂಡಿ ಈ ಲಸಿಕೆ ನೀಡುವ ಸಂಬಂಧ ಸುಸಜ್ಜಿತ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಮೂಹವು ಕ್ರಮ ಕೈಗೊಂಡಿದೆ’ ಎಂದು ಕಾರ್ತಿಕ್ ರಾಜಗೋಪಾಲ್ ತಿಳಿಸಿದ್ದಾರೆ.

ಸ್ಪುಟ್ನಿಕ್‌–ವಿ  ಲಸಿಕೆಯನ್ನು ನೀಡುವ ಮೂಲಕ ಒಟ್ಟಾರೆ ಲಸಿಕೆ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು, ಬರುವ ದಿನಗಳಲ್ಲಿ ಸಾಧ್ಯವಿರುವಷ್ಟು ಜನರಿಗೆ ಸ್ಪುಟ್ನಿಕ್‌–ವಿ ಲಸಿಕೆಯನ್ನು ನೀಡುವ ಆಶಾಭಾವ ಹೊಂದಿದ್ದೇವೆ’ ಎಂದು ಡಾ.ರೆಡ್ಡೀಸ್‌ ಬ್ರ್ಯಾಂಡೆಡ್‌ ಮಾರ್ಕೆಟ್‌ನ ಸಿಇಒ ಎಂ.ವಿ.ರಮಣ ಹೇಳಿದ್ದಾರೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಶಾಖೆಯೊಂದಿಗಿನ ಸಹಭಾಗಿತ್ವಕ್ಕೆ ತುಂಬಾ ಸಂತೋಷವಾಗುತ್ತಿದೆ. ಮುಂದಿನ ತಿಂಗಳ ವೇಳೆಯಲ್ಲಿ ದೇಶದ ಇತರೆ ಮಣಿಪಾಲ್ ಆಸ್ಪತ್ರೆ ಕೇಂದ್ರಗಳಲ್ಲಿ ಸ್ಪುಟ್ನಿಕ್-ವಿ ಲಸಿಕೆ ವಿತರಣೆಯನ್ನು ಆರಂಭಿಸಲಾಗುತ್ತದೆ. ಮುಂದಿನ ತಿಂಗಳ ವೇಳೆಗೆ ಅತಿಹೆಚ್ಚು ಜನರಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ರಮಣ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com