ಮಂಗಳೂರು: ಹಿರಿಯ ಪತ್ರಕರ್ತ, ರಂಗ ಕಲಾವಿದ ನವೀನ್ ಚಂದ್ರಪಾಲ್ ನಿಧನ

ಹಿರಿಯ ಪತ್ರಕರ್ತ ಮತ್ತು ರಂಗಭೂಮಿ ಕಲಾವಿದ ನವೀನ್ ಚಂದ್ರಪಾಲ್ (93) ನಿಧನರಾದರು. ಮೃತರು ಮಗ ಮತ್ತು ಮಗಳನ್ನು ಅಗಲಿದ್ದಾರೆ.
ನವೀನ್ ಚಂದ್ರಪಾಲ್
ನವೀನ್ ಚಂದ್ರಪಾಲ್

ಮಂಗಳೂರು: ಹಿರಿಯ ಪತ್ರಕರ್ತ ಮತ್ತು ರಂಗಭೂಮಿ ಕಲಾವಿದ ನವೀನ್ ಚಂದ್ರಪಾಲ್ (93) ನಿಧನರಾದರು. ಮೃತರು ಮಗ ಮತ್ತು ಮಗಳನ್ನು ಅಗಲಿದ್ದಾರೆ.

ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮಾಡಿದ್ದ ದಿನದಲ್ಲಿ ಅವರು ಚಿನ್ನದ ಪದಕ ಪಡೆದರು. ಅವರು ಸಮಾಜವಾದಿ ಚಿಂತನೆಯ ಪ್ರತಿಪಾದಕರಾಗಿದ್ದ ಚಂದ್ರಪಾಲ್  1948 ರಲ್ಲಿ "ಸಂಗಾತಿ" ಎಂಬ ಪಾಕ್ಷಿಕ ಪತ್ರಿಕೆ ಪ್ರಾರಂಭಿಸಿದ್ದರು. ನಂತರ ಇದು 1950 ರಲ್ಲಿ ವಾರಪತ್ರಿಕೆಯಾಗಿ ಬದಲಾಗಿತ್ತು. . ಅವರು "ಅರುಣೋದಯ "ಪತ್ರಿಕೆಯ ಸಂಪಾದಕರಾಗಿದ್ದರು.

ಇಂಡಿಯನ್ ಎಕ್ಸ್‌ಪ್ರೆಸ್‌ನ ಮುಂಬೈ ಶಾಖೆಯಲ್ಲಿ ಪಿಆರ್ ಒ ಮತ್ತು ಸೀನಿಯರ್ ಎಕ್ಸಿ ಕ್ಯೂಟಿವ್ ಆಗಿ ಎನ್ ಲೈಟ್ ವೀಕ್ಲಿಯ ನಲ್ಲಿ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದರು. ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು ಮತ್ತು ಜನತಾ ಸಮಾಜವಾದಿ ಪಕ್ಷದಿಂದ ಕೌಪ್ ಕ್ಷೇತ್ರದಿಂದ 1957 ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜವಾದಿ ಅಮ್ಮೆಂಬಳ ಬಾಳಪ್ಪ ಅವರ ಆಪ್ತರಾಗಿದ್ದರು ಮತ್ತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಕ್ರಿಯರಾಗಿದ್ದರು. ಅವರ ಸಾಧನೆಗಳನ್ನು ಹಲವಾರು ಸಂಸ್ಥೆಗಳು ಗೌರವಿಸಿವೆ.

ಅವರು ಯುವ ವಾಹಿನಿ ಕೇಂದ್ರ ಸಮಿತಿಯಿಂದ ವಿಶು ಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶ ಮತ್ತು 2013 ರಲ್ಲಿ ಬಿಜೈನ  ಚಾರಿಟಬಲ್ ಟ್ರಸ್ಟ್ ಸಹ ಪಾಲ್ ಅವರನ್ನು ಗೌರವಿಸಿತು
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com