ತಿಂಗಳುಗಳ ನಂತರ ಬೆಂಗಳೂರಿನ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತ ಕಡಿಮೆ!

ತಿಂಗಳ ನಂತರ ಇದೇ  ಮೊದಲ ಬಾರಿಗೆ ಬೆಂಗಳೂರಿ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತಲೂ ಕಡಿಮೆಯಾಗಿದೆ. ಇದು ನಗರದಲ್ಲಿ ಹಂತ ಹಂತವಾಗಿ ಆನ್ ಲಾಕ್ ಗೆ ಪ್ರೇರೆಪಿಸುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಿಂಗಳ ನಂತರ ಇದೇ  ಮೊದಲ ಬಾರಿಗೆ ಬೆಂಗಳೂರಿ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತಲೂ ಕಡಿಮೆಯಾಗಿದೆ. ಇದು ನಗರದಲ್ಲಿ ಹಂತ ಹಂತವಾಗಿ ಆನ್ ಲಾಕ್ ಗೆ ಪ್ರೇರೆಪಿಸುವ ಸಾಧ್ಯತೆಯಿದೆ.

ಬಿಬಿಎಂಪಿ ವಾರ್ ರೂಮ್  ಸೋಮವಾರ ನೀಡಿರುವ ಮಾಹಿತಿ ಪ್ರಕಾರ, ನಗರದ ಏಳು ದಿನಗಳ ಸರಾಸರಿ ಪಾಸಿಟಿವಿಟಿ ಪ್ರಮಾಣ ಶೇ.4.91 ರಷ್ಟಿದೆ. ಇದು ಜಿಲ್ಲೆಯಲ್ಲಿ ಆನ್ ಲಾಕ್ ಮಾಡಲು ಅಗತ್ಯವಿರುವ ಕೇಂದ್ರ ಸರ್ಕಾರದ ಮಾನದಂಡ ಶೇ. 5ಕ್ಕಿಂತಲೂ ಕಡಿಮೆಯಿದೆ.

ಈ ಮೈಲುಗಲ್ಲು ಪಾಲಿಕೆಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ಏಕೆಂದರೆ ಜನರು ಲಾಕ್ ಡೌನ್ ನಿರ್ಬಂಧಗಳ ಸಡಿಲತೆಯನ್ನುನಿರ್ಲಕ್ಷಿಸುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಆದಾಗ್ಯೂ, ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾದ ಮಾತ್ರಕ್ಕೆ ನಾಳೆಯೇ ಆನ್ ಲಾಕ್ ಆಗುತ್ತದೆ ಎಂಬ ಅರ್ಥವಿಲ್ಲ, ಆನ್ ಲಾಕ್ ಆಗುವ ಮುನ್ನ ಇನ್ನಿತರ ಹಲವು ಷರತ್ತುಗಳ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಿದ್ದು, ನಿರ್ದೇಶನಗಳನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ನಗರದಲ್ಲಿ ಪ್ರತಿದಿನ ಸರಾಸರಿ 56 ಸಾವಿರ ಪರೀಕ್ಷೆ ನಡೆಸಲಾಗುತ್ತಿದ್ದು, ಅದು ಮುಂದುವರೆಯಲಿದೆ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com