ಕೊರೋನಾ ಸೋಂಕಿತರ ಹೋಂ ಕ್ವಾರಂಟೈನ್ ಸೇವೆ: ಹಿಮ್ಸ್ ಗೆ ಮೊದಲ ಸ್ಥಾನ

ಕೋವಿಡ್‌ ಚಿಕಿತ್ಸಾ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ  (ಹಿಮ್ಸ್‌) ಹೋಂ ಕ್ವಾರಂಟೈನ್ ಸೇವೆಯಲ್ಲಿಯೂ ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ಕೋವಿಡ್‌ ಚಿಕಿತ್ಸಾ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ  (ಹಿಮ್ಸ್‌) ಹೋಂ ಕ್ವಾರಂಟೈನ್ ಸೇವೆಯಲ್ಲಿಯೂ ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡಿದೆ. 

ಹಿಮ್ಸ್‌ನ ಅಂತಿಮ ವರ್ಷದ ಎಲ್ಲ 70 ವಿದ್ಯಾರ್ಥಿಗಳು ಸೋಂಕಿತರ ಸೇವೆ ಹಾಗೂ ಆನ್‌ಲೈನ್‌ಮೂಲಕ ಹೋಂ ಕ್ವಾರಂಟೈನ್‌ನಲ್ಲಿ ಇರುವವರ ಆರೋಗ್ಯ ವಿಚಾರಣೆ, ಕೌನ್ಸೆಲಿಂಗ್‌ ಕಾರ್ಯದಲ್ಲಿ ತೊಡಗಿ ಮೆಚ್ಚುಗೆ ಗಳಿಸಿದ್ದಾರೆ. ರಾಜ್ಯ ಸರ್ಕಾರ ರಾಜೀವ್‌ ಗಾಂಧಿ ವಿಶ್ವ ವಿದ್ಯಾನಿಲಯದ ಮೂಲಕ ರಾಜ್ಯದ ಎಲ್ಲ 45 ವೈದ್ಯಕೀಯ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವಾ ವಿವರಗಳ ದತ್ತಾಂಶ ಪಡೆದುಕೊಂಡಿದ್ದು, ಶೇ100 ರ ಸಾಧನೆಯೊಂದಿಗೆ ಹಿಮ್ಸ್‌ ಮೊದಲ ಸ್ಥಾನದಲ್ಲಿದೆ.

 ಆನ್‌ಲೈನ್‌ನಲ್ಲಿ ದಿನಕ್ಕಿಷ್ಟು ಹೋಂ ಕ್ವಾರೆಂಟೈನಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸುವುದು, ಕೌನ್ಸೆ ಲಿಂಗ್‌ ಹಾಗೂ ಮಾರ್ಗದರ್ಶನ ಮಾಡುವ ಕರ್ತವ್ಯ ನಿರ್ವಹಣೆಯ ಹೊಣೆಯನ್ನು ಎಲ್ಲ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಪ್ರತೀ ವಾರಕ್ಕೊಮ್ಮೆ ರಾಜ್ಯ ಮಟ್ಟದಲ್ಲೇ ನೋಡಲ್‌ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಕಾರ್ಯವೈಖರಿಯ ಮೌಲ್ಯಮಾಪನ ಮಾಡಿ ಕಾಲೇಜುವಾರು ಮೌಲ್ಯಾಂಕ ಪ್ರಕಟಿಸಲಾಗುತ್ತದೆ.

ಈ ಸಂಬಂಧರಾಜ್ಯದ ಎಲ್ಲ 45 ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ ಹಿಮ್ಸ್‌ ವಿದ್ಯಾರ್ಥಿಗಳ ಸಾಧನೆ ಮಂಚೂಣಿಯಲ್ಲಿದೆ. 

ಎಸ್‌.ಎಸ್‌. ಇನ್ಸ್‌ಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ ಅಂಡ್‌ ರೀಸರ್ಚ್‌ ಸೆಂಟರ್‌ ಹಾಗೂ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳು ನಂತರದ ಸ್ಥಾನದಲ್ಲಿದೆ. 

ಕೇವಲ ಹೊಂ ಕ್ವಾರಂಟೈನ್‌ ನಲ್ಲಿದ್ದವರ ಸೇವೆ ಮಾತ್ರವಲ್ಲದೆ ಹಿಮ್ಸ್‌ನ ವಿದ್ಯಾರ್ಥಿಗಳು ಆಸ್ಪತ್ರೆಗಳಲ್ಲಿಯೂ ಸೋಂಕಿತರ ಚಿಕಿತ್ಸೆಯಲ್ಲಿಯೂ ಅಂತಿಮ ವರ್ಷದ ವಿದ್ಯಾರ್ಥಿಗಳು ತೊಡಗಿ ಜಿಲ್ಲೆಯ ಚಿಕಿತ್ಸಾ ವ್ಯವಸ್ಥೆಗೆ ಬಲ ತುಂಬಿದ್ದಾರೆ.

ಕೊರೋನಾ ಆಸ್ಪತ್ರೆಯ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ಸಮರ್ಪಣಾ ಭಾವದ ಸೇವೆ ಮತ್ತು ಸಾಧನೆಗೆ ಹಿಮ್ಸ್‌ ನಿರ್ದೇಶಕರಾದ ಡಾ.ಬಿ.ಸಿ.ರವಿಕುಮಾರ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ. 

70 ಅಂತಿಮ ವರ್ಷದ ವಿದ್ಯಾರ್ಥಿಗಳು ಸಾಂಕ್ರಾಮಿಕ ಸಮಯದಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿದ್ದು, ಕೇವಲ ಹೊಂ ಕ್ವಾರಂಟೈನ್‌ ನಲ್ಲಿದ್ದವರ ಸೇವೆ ಮಾತ್ರವಲ್ಲದೆ ಕೋವಿಡ್ ಆಸ್ಪತ್ರೆಗಳಿಗೂ ಭೇಟಿ ನೀಡಿ ಸೇವೆ ಸಲ್ಲಿಸಿದ್ದಾರೆ. ಮಾನವೀಯತೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನೋಡಲ್ ಅಧಿಕಾರಿಗಳು ಗಮನಿಸಿದ್ದಾರೆಂದು ರವಿಕುಮಾರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com