ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕರಿಂದ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕಾರ
ಇತ್ತೀಚೆಗೆ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶರಣು ಸಲಗಾರ್ ಹಾಗೂ ಬಸವನಗೌಡ ತುರುವಿನಹಾಳ ಇವರು ನೂತನ ಶಾಸಕರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
Published: 08th June 2021 02:01 PM | Last Updated: 08th June 2021 02:01 PM | A+A A-

ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಸವಕಲ್ಯಾಣದ ಶಾಸಕ ಶರಣು ಸಲಗರ ಅವರು ಇಂದು ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಬೆಂಗಳೂರು: ಇತ್ತೀಚೆಗೆ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶರಣು ಸಲಗಾರ್ ಹಾಗೂ ಬಸವನಗೌಡ ತುರುವಿನಹಾಳ ಇವರು ನೂತನ ಶಾಸಕರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಸ ಸಮಾರಂಭದಲ್ಲಿ ನೂತನ ಶಾಸಕರಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಜ್ಞಾವಿಧಿ ಬೋಧಿಸಿದರು.
ಬಸವಕಲ್ಯಾಣ ನೂತನ ಶಾಸಕ ಶರಣು ಸಲಗಾರ್ ಕ್ರಾಂತಿಕಾರಿ ಬಸವಣ್ಣ, ಬಸವ ಕಲ್ಯಾಣದ ಪ್ರಜೆಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಮಸ್ಕಿ ನೂತನ ಶಾಸಕ - ಬಸವನಗೌಡ ತುರುವಿಹಾಳ್ ರೈತರ ಹಾಗೂ ಮಸ್ಕಿ ಪ್ರಜೆಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಇಂದು ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮುನ್ನ ನಾಡಿನ ದೂರೆ ಜನಪ್ರಿಯ ಮುಖ್ಯಮಂತ್ರಿಯಾದ ಸನ್ಮಾನ್ಯ ಶ್ರೀ @BSYBJP ಜೀ ಅವರನ್ನು ಸನ್ಮಾನಿಸಿ ಆಶಿರ್ವಾದ ಪಡೆಯಲಾಯಿತು.#sharanusalagar #Basavakalyan #basavakalyanmla pic.twitter.com/K8bikkWGZf
— Sharanu Salagar (@salagar_sharanu) June 8, 2021