ಶೀಘ್ರದಲ್ಲೆ ರಾಜ್ಯದಲ್ಲಿ ಹೋಟೆಲ್ ಬುಕಿಂಗ್ ರೀತಿ ಕೋವಿಡ್ ರೋಗಿಗಳಿಗೆ ಆಸ್ಪತ್ರೆ ಬೆಡ್ ಹಂಚಿಕೆ ವ್ಯವಸ್ಥೆ!

ಕೊರೋನಾ ಎರಡನೆಯ ಅಲೆಯ ತೀವ್ರತೆಯಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೆ ಹಾಸಿಗೆ ಹಂಚಿಕೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬುದ್ದಿ ಕಲಿತ ರಾಜ್ಯ ಮತ್ತು ಬಿಬಿಎಂಪಿ ಯುದ್ಧ ವಾರ್ ರೂಂನಲ್ಲಿ ಕೆಲಸ ಮಾಡುವ ತಜ್ಞರು ಮತ್ತು ಅಧಿಕಾರಿಗಳು ಹೊಸ ವ್ಯವಸ್ಥೆಯನ್ನು ತಂದಿದ್ದಾರೆ.

Published: 08th June 2021 06:54 PM  |   Last Updated: 08th June 2021 08:59 PM   |  A+A-


Sudhakar

ಸಚಿವ ಸುಧಾಕರ್

Posted By : Vishwanath S
Source : The New Indian Express

ಬೆಂಗಳೂರು: ಕೊರೋನಾ ಎರಡನೆಯ ಅಲೆಯ ತೀವ್ರತೆಯಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೆ ಹಾಸಿಗೆ ಹಂಚಿಕೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬುದ್ದಿ ಕಲಿತ ರಾಜ್ಯ ಮತ್ತು ಬಿಬಿಎಂಪಿ ಯುದ್ಧ ವಾರ್ ರೂಂನಲ್ಲಿ ಕೆಲಸ ಮಾಡುವ ತಜ್ಞರು ಮತ್ತು ಅಧಿಕಾರಿಗಳು ಹೊಸ ವ್ಯವಸ್ಥೆಯನ್ನು ತಂದಿದ್ದಾರೆ.

ಹೋಟೆಲ್ ಕೊಠಡಿಗಳನ್ನು ಬುಕ್ ಮಾಡುವ ಸಾಫ್ಟ್ ವೇರ್ ಬಳಸಿ ಬೆಡ್ ಗಳನ್ನು ಕಾಯ್ದಿರಿಸಲಾಗುತ್ತದೆ. ಸಂಭಾವ್ಯ ಮೂರನೇ ಅಲೆಗೆ ಮುಂಚಿತವಾಗಿ 2-3 ತಿಂಗಳಲ್ಲಿ ಹೊಸ ವ್ಯವಸ್ಥೆಯನ್ನು ತರಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಹೋಟೆಲ್ ರೂಮ್ ಬುಕಿಂಗ್‌ ಸಾಫ್ಟ್ ವೇರ್ ಒಂದೇ ರೀತಿ ಇರಲಿದ್ದು, ಆದರೆ ವಿಭಿನ್ನವಾಗಿರುತ್ತದೆ. ಚಾನಲ್ ವ್ಯವಸ್ಥಾಪಕರ ಮೂಲಕ, ಜಾಗತಿಕವಾಗಿ ಗ್ರಾಹಕರು ಮತ್ತು ಟ್ರಾವೆಲ್ ಏಜೆಂಟರು ಕೋಣೆಯ ಲಭ್ಯತೆಯನ್ನು ಚೆಕ್-ಇನ್ ಎಂದು ಕರೆಯುತ್ತಾರೆ. ಪ್ರತಿ ಹೋಟೆಲ್‌ನ ಚೆಕ್-ಇಟ್ ಇದಕ್ಕೆ ಲಿಂಕ್ ಆಗಿದೆ. ಹಾಸಿಗೆ ಬ್ಲಾಕಿಂಗ್ ತಡೆಯಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಈಗ ಇದನ್ನೇ ಯೋಜಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಹೋಟೆಲ್‌ಗಳಲ್ಲಿರುವಂತೆ ಯಾವ ರೀತಿಯ ಬೆಡ್ ಗಳು, ದರ ಮತ್ತು ಸೇವೆಗಳನ್ನು ಪಟ್ಟಿ ಮಾಡಲಾಗುವುದು. ಈ ಮೂಲಕ, ನಾಗರಿಕರು ಲಭ್ಯತೆಯನ್ನು ಪರಿಶೀಲಿಸಲು, ಹೋಲಿಕೆ ಮಾಡಲು ಮತ್ತು ಚಿಕಿತ್ಸೆಗಾಗಿ ಉತ್ತಮ ಮತ್ತು ಹತ್ತಿರದ ಆಸ್ಪತ್ರೆಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಇದು ಆರೋಗ್ಯಕರ ಸ್ಪರ್ಧೆ ಮತ್ತು ಪಾರದರ್ಶಕತೆಯನ್ನು ತರುತ್ತದೆ ಎಂದು ಅಧಿಕಾರಿ ಹೇಳಿದರು.

ಸರ್ಕಾರದ ಆದೇಶದ ಹೊರತಾಗಿಯೂ ಅನೇಕ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಶೇಕಡಾ 50 ಹಾಸಿಗೆಗಳನ್ನು ಕಾಯ್ದಿರಿಸದ ಕಾರಣ ಇದರ ಅವಶ್ಯಕತೆ ಉಂಟಾಯಿತು. ಚಿಕಿತ್ಸೆಗಾಗಿ ರೋಗಿಗಳಿಗೆ ಅತಿಯಾದ ಶುಲ್ಕ ವಿಧಿಸಿದ ಅನೇಕ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಹೊಸ ವ್ಯವಸ್ಥೆಗೆ ಸರ್ಕಾರ ತಾತ್ವಿಕವಾಗಿ ಅನುಮೋದನೆ ನೀಡಿದೆ. ಆದಾಗ್ಯೂ, ಅನೇಕ ಆಸ್ಪತ್ರೆಗಳಿಗೆ ಇದು ಮನವರಿಕೆಯಾತ್ತಿಲ್ಲ. ಪರಿಸ್ಥಿತಿಯ ತೀವ್ರತೆಯನ್ನು ವಿವರಿಸುವ ಮೂಲಕ ಅವುಗಳನ್ನು ಒಂದೇ ಸೂರಿನಡಿ ತರಲು ಸಭೆ ನಡೆಸಲಾಗುತ್ತಿದೆ ಎಂದರು. 

ಹೊಸ ವ್ಯವಸ್ಥೆಯು ಸಹಾಯಕವಾಗಲಿದೆ ಆದರೆ ಸರ್ಕಾರಿ ಅಧಿಕಾರಿಗಳಿಂದ ಕಿರುಕುಳದ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಆಸ್ಪತ್ರೆಯ ನಿರ್ವಹಣೆಗಳು ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ಫಾನಾ ಅಧ್ಯಕ್ಷ ಡಾ. ಪ್ರಸನ್ನ ಎಚ್‌ಎಂ ಹೇಳಿದರು.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp