ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲು ಬಂದ ಆಶಾ ಕಾರ್ಯಕರ್ತೆಗೆ ಮಚ್ಚು ತೋರಿಸಿ ಹೆದರಿಸಿದ ವ್ಯಕ್ತಿ!
ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲು ಹೋದ ಆಶಾ ಕಾರ್ಯಕರ್ತೆಗೆ ವ್ಯಕ್ತಿಯೋರ್ವ ಮಚ್ಚಿನಿಂದ ಹೊಡೆಯಲು ಬಂದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬರ್ಗಿ ಕಾಲೊನಿಯಲ್ಲಿ ನಡೆದಿದೆ.
Published: 09th June 2021 09:30 AM | Last Updated: 09th June 2021 01:01 PM | A+A A-

ವ್ಯಕ್ತಿಯಿಂದ ಮಚ್ಚು ಕಿತ್ತುಕೊಂಡು ಬಿಸಾಕಿದ ಅಜ್ಜಿ
ಚಾಮರಾಜನಗರ: ಕೊರೋನಾ ಲಸಿಕೆ ಬಗ್ಗೆ ಇರುವ ಹಲವು ತಪ್ಪು ಕಲ್ಪನೆಗಳು, ವದಂತಿಗಳನ್ನು ನಂಬುವ ಕೆಲವು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಕೇಳಿದ್ದೇವೆ. ಅಂತವರ ಮನವೊಲಿಸಲು ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು ಅವರ ಮನೆಗೆ ಹೋಗಿ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.
ಹೀಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲು ಹೋದ ಆಶಾ ಕಾರ್ಯಕರ್ತೆಗೆ ವ್ಯಕ್ತಿಯೋರ್ವ ಮಚ್ಚಿನಿಂದ ಹೊಡೆಯಲು ಬಂದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬರ್ಗಿ ಕಾಲೊನಿಯಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಅಜ್ಜಿಯೊಬ್ಬರು ವ್ಯಕ್ತಿಯಿಂದ ಮಚ್ಚನ್ನು ಕಿತ್ತು ಬಿಸಾಕಿ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ.
Vaccination can wait: A man came with a machete to scare ASHA workers who appealed him to get COVID-19 vaccination at Bargi colony in Gundlupet in Chamarajanagar. Grand mother rushed to pacify the man in inebriated state.@XpressBengaluru @santwana99 @NewIndianXpress pic.twitter.com/9yxj2kyspA
— K Shiva Kumar Shivu (@ShivascribeTNIE) June 8, 2021