ಭೂಗತ ಪಾತಕಿ ರವಿ ಪೂಜಾರಿ ಮತ್ತೆ ಕೊಚ್ಚಿಯಿಂದ ಬೆಂಗಳೂರಿಗೆ: ವಶಕ್ಕೆ ಪಡೆದ ಭ್ರಷ್ಟಾಚಾರ ನಿಗ್ರಹ ದಳ 

ಕೊಚ್ಚಿ ಸಲೂನ್ ಗುಂಡಿನ ದಾಳಿ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ(ಎಟಿಎಸ್) ಕಸ್ಟಡಿಯಲ್ಲಿ 8 ದಿನಗಳನ್ನು ಕಳೆದ ಭೂಗತ ಪಾತಕಿ ರವಿ ಪೂಜಾರಿಯನ್ನು ಕಳೆದ ರಾತ್ರಿ ವಿಮಾನದಲ್ಲಿ ಬೆಂಗಳೂರಿಗೆ ಕರೆತರಲಾಗಿದೆ.
ಗ್ಯಾಂಗ್ ಸ್ಟರ್ ರವಿ ಪೂಜಾರಿ
ಗ್ಯಾಂಗ್ ಸ್ಟರ್ ರವಿ ಪೂಜಾರಿ

ಕೊಚ್ಚಿ: ಕೊಚ್ಚಿ ಸಲೂನ್ ಗುಂಡಿನ ದಾಳಿ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ(ಎಟಿಎಸ್) ಕಸ್ಟಡಿಯಲ್ಲಿ 8 ದಿನಗಳನ್ನು ಕಳೆದ ಭೂಗತ ಪಾತಕಿ ರವಿ ಪೂಜಾರಿಯನ್ನು ಕಳೆದ ರಾತ್ರಿ ವಿಮಾನದಲ್ಲಿ ಬೆಂಗಳೂರಿಗೆ ಕರೆತರಲಾಗಿದೆ.

ಇದಕ್ಕೂ ಮುನ್ನ ಎರ್ನಾಕುಲಂ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ರವಿ ಪೂಜಾರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ, ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವು ಭಾರತೀಯರು ಮತ್ತು ವಿದೇಶಿಗರ ಹೆಸರುಗಳನ್ನು ಎಟಿಎಸ್ ನ್ಯಾಯಾಲಯಕ್ಕೆ ನೀಡಿದೆ.

ಈ ಮಧ್ಯೆ ಕಾಸರಗೋಡಿನಲ್ಲಿ ರವಿ ಪೂಜಾರಿಗೆ ಸಂಬಂಧಪಟ್ಟ ಮತ್ತೊಂದು ಕೇಸಿನಲ್ಲಿ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳದ ಉತ್ತರ ಕೇರಳ ತಂಡ, ನ್ಯಾಯಾಲಯವನ್ನು ಸಂಪರ್ಕಿಸಿದ ನಂತರ ಕಸ್ಟಡಿಗೆ ತೆಗೆದುಕೊಳ್ಳಲು ನಿರ್ಧರಿಸಿತು. ಕೇರಳದ ಕಾಸರಗೋಡಿನಲ್ಲಿ ಸಲ್ಲಿಸಿರುವ ವರದಿಯಲ್ಲಿ ನಿಗ್ರಹ ದಳ 2010ರಲ್ಲಿ ಕಾಸರಗೋಡಿನ ಬವಿಂಚದಲ್ಲಿ ಚಿನ್ನದ ಉದ್ಯಮಿ ಮನೆಯಲ್ಲಿ ನಡೆದ ದಾಳಿಗೆ ಸಂಬಂಧಪಟ್ಟಂತೆ ತಮ್ಮ ಪಾತ್ರವೇನು ಎಂದು ತಂಡ ರವಿ ಪೂಜಾರಿಯನ್ನು ಪ್ರಶ್ನೆ ಮಾಡಿದೆ.

ನ್ಯಾಯಾಲಯದ ಅನುಮತಿಯೊಂದಿಗೆ ಎಟಿಎಸ್ ಉತ್ತರ ಕೇರಳ ಘಟಕವು ರವಿ ಪೂಜಾರಿಯನ್ನು ಬೆಂಗಳೂರಿನಿಂದ ವಶಕ್ಕೆ ತೆಗೆದುಕೊಳ್ಳಲಿದೆ. ವಿವಿಧ ರಾಜ್ಯಗಳ ಪೊಲೀಸ್ ಏಜೆನ್ಸಿಗಳು ಆತನ ಕಸ್ಟಡಿ ಅಗತ್ಯವಿರುವುದರಿಂದ ನಾವು ಅವರನ್ನು ಬೆಂಗಳೂರಿಗೆ ಕಳುಹಿಸಲು ನಿರ್ಧರಿಸಿದ್ದೇವೆ. ಸಲೂನ್ ಶೂಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾರಿಯನ್ನು ಹಸ್ತಾಂತರಿಸುವ ದಾಖಲೆಗಳನ್ನು 2019 ರಲ್ಲಿ ದಾಖಲಿಸಲಾಗಿದ್ದರಿಂದ ನಾವು ಮೊದಲು ಆತನನ್ನು ಬಂಧಿಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com