ಸಾಂಕ್ರಾಮಿಕ ಹರಡುವ ಮೊದಲೇ ಚೀನಾ ದೇಶ ಲಸಿಕೆ ಅಭಿವೃದ್ಧಿಪಡಿಸಿತ್ತೇ? ಉನ್ನತ ವೈರಾಣು ತಜ್ಞ ಏನು ಹೇಳುತ್ತಾರೆ?
ಕಳೆದ ಒಂದು ವರ್ಷದಿಂದ ಇಡೀ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಸೋಂಕು ಚೀನಾದ ವುಹಾನ್ ನ ಪ್ರಯೋಗಾಲಯದಿಂದ ಸೋರಿಕೆಯಾಯಿತು, ಚೀನಾ ಸರ್ಕಾರದ ಆದೇಶದಂತೆ ಅಲ್ಲಿನ ವಿಜ್ಞಾನಿಗಳು ವೈರಸ್ ನ್ನು ಜಗತ್ತಿಗೆ ಬಿಟ್ಟರು ಎಂಬ ಆರೋಪ ಕೇಳಿಬರುತ್ತಲೇ ಇದೆ.
Published: 09th June 2021 09:02 AM | Last Updated: 09th June 2021 12:59 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ಒಂದು ವರ್ಷದಿಂದ ಇಡೀ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಸೋಂಕು ಚೀನಾದ ವುಹಾನ್ ನ ಪ್ರಯೋಗಾಲಯದಿಂದ ಸೋರಿಕೆಯಾಯಿತು, ಚೀನಾ ಸರ್ಕಾರದ ಆದೇಶದಂತೆ ಅಲ್ಲಿನ ವಿಜ್ಞಾನಿಗಳು ವೈರಸ್ ನ್ನು ಜಗತ್ತಿಗೆ ಬಿಟ್ಟರು ಎಂಬ ಆರೋಪ ಕೇಳಿಬರುತ್ತಲೇ ಇದೆ. ಈ ಮಹಾಮಾರಿಗೆ ಇದುವರೆಗೆ 37 ಲಕ್ಷದ 54 ಸಾವಿರ ಮಂದಿ ಬಲಿಯಾಗಿದ್ದು ಜಗತ್ತಿನಾದ್ಯಂತ 17.44 ಕೋಟಿ ಜನರಿಗೆ ಸೋಂಕು ತಗುಲಿದೆ.
ಸೋಂಕಿಗೆ ಕಾರಣವಾಗುವ ವೈರಸ್ ನ್ನು ಹೊರಬಿಟ್ಟ ಚೀನಾ ಮೊದಲೇ ಅದಕ್ಕೆ ಲಸಿಕೆಯನ್ನು ಕೂಡ ಅಭಿವೃದ್ಧಿಪಡಿಸಿತ್ತು. ಅಂದರೆ ಚೀನಾದ ವುಹಾನ್ ಪ್ರಯೋಗಾಲಯದಿಂದ ಬಿಟ್ಟ ವೈರಸ್ ನ್ನು ಎದುರಿಸಲು ಅದಕ್ಕೆ ಲಸಿಕೆಯನ್ನು ಕೂಡ ಮೊದಲೇ ಅಭಿವೃದ್ಧಿಪಡಿಸಿಕೊಂಡಿತ್ತು, ಹೀಗಾಗಿಯೇ ಸೋಂಕಿನ ಆರಂಭದ ದಿನದಲ್ಲಿಯೇ ಚೀನಾಕ್ಕೆ ಸಮರ್ಥವಾಗಿ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗಿರಬಹುದು ಎಂದು ವೆಲ್ಲೂರಿನ ಕ್ರಿಸ್ತಿಯನ್ ವೈದ್ಯಕೀಯ ಕಾಲೇಜಿನ ಪ್ರಾಯೋಗಿಕ ವೈರಾಣುಶಾಸ್ತ್ರಜ್ಞ, ಮಾಜಿ ಪ್ರೊಫೆಸರ್ ಡಾ ಟಿ ಜಾಕೊಬ್ ಜಾನ್.
ವಿಶ್ವದಲ್ಲಿಯೇ ಅತಿ ಹೆಚ್ಚು 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಇದುವರೆಗೆ ಪತ್ತೆಯಾಗಿದ್ದು 91 ಸಾವಿರ 300 ಕೊರೋನಾ ಕೇಸುಗಳು ಮಾತ್ರ. 2019ರ ಡಿಸೆಂಬರ್ ನಂತರ ಅಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 4 ಸಾವಿರದ 636, ಕೊರೋನಾ ಸಕ್ರಿಯ ಕೇಸುಗಳಲ್ಲಿ ವಿಶ್ವದಲ್ಲಿ ಈಗ ಚೀನಾ 98ನೇ ಸ್ಥಾನದಲ್ಲಿದೆ.
ಹೀಗಿರುವಾಗ ಚೀನಾದ ವುಹಾನ್ ಪ್ರಯೋಗಾಲಯದಿಂದ ವೈರಸ್ ಸೋರಿಕೆ ಬಗ್ಗೆ ರಹಸ್ಯವಿದೆ ಎಂದು ನನಗನಿಸುತ್ತದೆ, ಚೀನಾದ ಕೋವಿಡ್-19 ಸೋಂಕಿನ ರೀತಿ ಬೇರೆ ದೇಶಗಳಂತಲ್ಲ. ಚೀನಾ ಸರ್ಕಾರ ಏನೋ ರಹಸ್ಯವಾಗಿ ಮುಚ್ಚಿಡುತ್ತಿದೆ ಎಂದು ಅನಿಸುತ್ತಿದೆ, ಇಲ್ಲವೇ ಅಲ್ಲಿನ ಪರಿಸ್ಥಿತಿ ಭಿನ್ನವಾಗಿದೆ, ಅಥವಾ ಚೀನಾ ಮೊದಲೇ ಈ ವೈರಸ್ ಎದುರಿಸಲು ಸಿದ್ದತೆ ಮಾಡಿಕೊಂಡಿತ್ತು ಎಂದು ಅನಿಸುತ್ತಿದೆ, ನಾವು ಕಣ್ಣಿಗೆ ಕಂಡದ್ದೇ ಅಂತಿಮವಲ್ಲ ಎಂದರು.
ಸಾಂಕ್ರಾಮಿಕ ರೋಗವು ಸಂಭವಿಸಿದ ಎರಡು ತಿಂಗಳ ನಂತರ ಅಂದರೆ ಫೆಬ್ರವರಿ 24, 2020 ರ ಹೊತ್ತಿಗೆ ಚೀನಾದ ಯುವ ವಿಜ್ಞಾನಿ ಸಾರ್ಸ್ ಕೋವಿಡ್-2 ಲಸಿಕೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಉದಾಹರಣೆಯನ್ನು ಅವರು ಉಲ್ಲೇಖಿಸಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಲಸಿಕೆ ಹಾಕಲು ಕೆಲಸ ಮಾಡುವುದು ತುಂಬಾ ಮುಂಚಿನದು. ಅವರು ಕನಿಷ್ಠ ಒಂದು ವರ್ಷದ ಹಿಂದೆಯೇ ಪ್ರಾರಂಭಿಸಿರಬೇಕು ಎಂದು ಡಾ ಜಾನ್ ತಮ್ಮ ವಾದ ಮಂಡಿಸುತ್ತಾರೆ. ಈ ಯುವ ವಿಜ್ಞಾನಿ ಈಗ ಮೃತಪಟ್ಟಿದ್ದಾರೆ. ಈ ವಿಷಯದಲ್ಲಿ ಹಲವು ಲೋಪದೋಷಗಳಿವೆ. ಇಲ್ಲಿ ಚೀನಾ ಏನೋ ರಹಸ್ಯ ಮುಚ್ಚಿಡುತ್ತಿದೆ ಎನಿಸುತ್ತಿದೆ, ಹೇಗೆಂದರೆ ಏನಾದರೂ ಮಹಾಪರಾಧ ಮಾಡಿ ವಿಷಯವನ್ನು ಮುಚ್ಚಿಟ್ಟಂತೆ ಎಂದು ಡಾ ಜಾಕೊಬ್ ಜಾನ್ ಹೇಳುತ್ತಾರೆ.
ಕುತೂಹಲಕಾರಿಯಾಗಿ, ಮಾಧ್ಯಮಗಳ ಒಂದು ವಿಭಾಗವು ವರದಿ ಮಾಡಿದಂತೆ, ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸಸ್‌ನ ಭಾರತೀಯ ಜೀವಶಾಸ್ತ್ರಜ್ಞರು ದೆಹಲಿಯ ಸಾರ್ಸ್ -ಕೋವಿಡ್-2 ವೈರಸ್‌ನ ಸ್ಪೈಕ್ ಪ್ರೋಟೀನ್‌ನಲ್ಲಿ ನಾಲ್ಕು ಜೀನ್ ಅಳವಡಿಕೆಗಳನ್ನು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮಾನವ ಜೀವಕೋಶಗಳಿಗೆ ಲಗತ್ತಿಸಲು ಮತ್ತು ದೇಹಕ್ಕೆ ಪ್ರವೇಶ ಪಡೆಯಲು ಯೋಜನೆ ಮಾಡಿದ್ದಿರಬಹುದು. ಇದು ಜನವರಿ 2020 ರ ಆರಂಭದ ದಿನಗಳು. ಆದಾಗ್ಯೂ, ಅಧ್ಯಯನವನ್ನು ಕಳೆದ ವರ್ಷ ಫೆಬ್ರವರಿ 2 ರಂದು ಹಿಂಪಡೆಯಲಾಯಿತು ಎನ್ನುತ್ತಾರೆ ಅವರು.