ವಿಶ್ವದ ಟಾಪ್ ಸಂಶೋಧನಾ ವಿವಿಗಳಲ್ಲಿ ಬೆಂಗಳೂರಿನ ಐಐಎಸ್ಸಿ ನಂ.1: ಸಿಎಂ ಯಡಿಯೂರಪ್ಪ ಅಭಿನಂದನೆ

2020ನೇ ಸಾಲಿನ ಜಾಗತಿಕ 200 ಅತ್ಯುತ್ತಮ ಸಂಶೋಧನಾ ವಿಶ್ವವಿದ್ಯಾಲಯ ಪಟ್ಟಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಪ್ರಥಮ ಸ್ಥಾನ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುರುವಾರ ಅಭಿನಂದನೆಗಳನ್ನು ತಿಳಿಸಿದ್ದಾರೆ. 

Published: 10th June 2021 01:20 PM  |   Last Updated: 10th June 2021 01:33 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: 2020ನೇ ಸಾಲಿನ ಜಾಗತಿಕ 200 ಅತ್ಯುತ್ತಮ ಸಂಶೋಧನಾ ವಿಶ್ವವಿದ್ಯಾಲಯ ಪಟ್ಟಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಪ್ರಥಮ ಸ್ಥಾನ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುರುವಾರ ಅಭಿನಂದನೆಗಳನ್ನು ತಿಳಿಸಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್'ನ ಅತ್ಯುತ್ತಮ ಸಂಶೋಧನಾ ವಿಶ್ವವಿದ್ಯಾಲಯ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಬೆಂಗಳೂರು ಐಐಎಸ್ಸಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ವಿಶ್ವ ದರ್ಜೆಯ ಶಿಕ್ಷಣವನ್ನು ನೀಡುವುದು ಮತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಅತ್ಯಾಧುನಿಕ ಸಂಶೋಧನೆಗೆ ಅನುಕೂಲವಾಗುವಂತೆ ಐಐಎಸ್‌ಸಿ ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಪಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. 

2022ನೇ ಸಾಲಿನ ಕ್ಯೂಎಸ್ (ಕ್ವಾಕರೇಲಿ ಸೈಮಂಡ್ಸ್) ಜಾಗತಿ 200 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಅದರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸಸ್ (ಐಐಎಸ್ಸಿ) ಐತಿಹಾಸಿಕ ಸಾಧನೆ ಮಾಡಿದೆ. 

ಕ್ಯುಎಸ್ ಬಿಡುಗಡೆ ಮಾಡಿರುವ ಸೂಚ್ಯಂಕದಲ್ಲಿ ಸೈಟೇಷನ್ಸ್ ಪರ್ ಫೆಕಲ್ಟಿ (ಸಿಪಿಎಫ್-ಪ್ರತಿ ಬೋಧಕರ ಪ್ರಬಂಧ ಪ್ರಮಾಣ)ವಿಭಾಗದಲ್ಲಿ ಶೇ.100ಕ್ಕೆ 100 ಅಂಕ ಪಡೆಯುವ ಮೂಲಕ ಐಐಎಸ್ಸಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. 

ಭಾರತದ ವಿವಿಯೊಂದಿ ಇಂತಹ ಸಾಧನೆ ಮಾಡಿದ್ದು ಇದೇ ಮೊದಲು. ಈ ಹಾದಿಯಲ್ಲಿ ವಿಶ್ವದ ಖ್ಯಾತನಾಮ ಸಂಶೋಧನಾ ವಿವಿಗಳಾದ ಪ್ರಿನ್ಸ್ ಟನ್, ಹಾರ್ವಡ್ ವಿವಿಗಳನ್ನೂ ಹಿಂದಿಕ್ಕಿದೆ. ಒಟ್ಟಾರೆ ರ್ಯಾಂಕಿಂಗ್ ನಲ್ಲಿ ಐಐಎಸ್ಸಿ ಭಾರತದಲ್ಲಿ 3ನೇ ಸ್ಥಾನ ಪಡೆದಿದೆ. ಮೊದಲ 2 ಸ್ಥಾನ ಕ್ರಮವಾಗಿ ಬಾಂಬೆ ಮತ್ತು ದೆಹಲಿ ಐಐಟಿ ಪಾಲಾಗಿದೆ. ಮೆಸಾಚ್ಯೂಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯೂನಿವರ್ಸಿಟಿ ಆಫ್ ಆಕ್ಸ್ ಫರ್ಡ್, ಸ್ಟ್ಯಾನ್ ಫೋರ್ಡ್ ಕ್ರಮವಾಗಿ ಟಾಪ್ 3 ವಿವಿ ಎನಿಸಿಕೊಂಡಿವೆ. 


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp