ರಾಜಕಾಲುವೆ ಮೇಲೆ 'ಸಾರಾ ಕಲ್ಯಾಣ ಮಂಟಪ' ನಿರ್ಮಾಣ: ರೋಹಿಣಿ ಸಿಂಧೂರಿ ಆರೋಪ

ಮೈಸೂರು ನಗರ ಹಾಗೂ ಲಿಂಗಾಂಬುದಿ ಕೆರೆಯ ಸುತ್ತಮುತ್ತ ನಡೆದ ಭೂ ಹಗರಣದ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದೇ ನನ್ನ ವರ್ಗಾವಣೆಗೆ ಕಾರಣವಾಗಿದೆ.
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ

ಮೈಸೂರು: ಮೈಸೂರು ನಗರ ಹಾಗೂ ಲಿಂಗಾಂಬುದಿ ಕೆರೆಯ ಸುತ್ತಮುತ್ತ ನಡೆದ ಭೂ ಹಗರಣದ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದೇ ನನ್ನ ವರ್ಗಾವಣೆಗೆ ಕಾರಣವಾಗಿದೆ ಎಂದು ಹೇಳಿರುವ ರೋಹಿಣಿ ಸಿಂಧೂರಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಮೈಸೂರಿನಲ್ಲಿರುವ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ. ಈ ಕುರಿತು ಸರ್ವೆ ಕೂಡ ನಡೆದಿದೆ. ಇದೇ ರೀತಿಯ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೆ. ಈ ಹಿನ್ನೆಲೆಯಲ್ಲಿ ನನ್ನ ವರ್ಗಾವಣೆಗೆ ಪಿತೂರಿ ನಡೆಯಿತು ಎಂದು ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. 

ನಾನು ಭೂ ಹಗರಣದ ಕುರಿತು ತನಿಖೆ ನಡೆಸದಂತೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಕೊನೆಗೆ ನನ್ನ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಬೆದರಿಕೆಗೆ ಮಣಿಯುವುದಿಲ್ಲ. ಮುಂದೊಂದು ದಿನ ನನ್ನ ಪ್ರಯತ್ನಕ್ಕೆ ಫಲ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ವರ್ಗಾವಣೆಗೆ ಎರಡು ದಿನ ಮುನ್ನ ರೋಹಿಣಿ ಸಿಂಧೂರಿ ಭೂ ಹಗರಣ ಆರೋಪದ ಕುರಿತು ಕೆಲವೊಂದು ಆದೇಶಗಳನ್ನು ಹೊರಡಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಇದರಲ್ಲಿ ಪ್ರಮುಖವಾದುದು ಲಿಂಗಾಂಬುದಿ ಗ್ರಾಮದ ಸ.ನಂ 124/2 ರಲ್ಲಿ1.39 ಎಕರೆ ಜಮೀನನ್ನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿರುವ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ.

ಭೂ ಪರಿವರ್ತನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅವರು ಮುಡಾ ಆಯುಕ್ತರಿಗೆ ಜೂ.4ರಂದು ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com