ಕೊರೋನಾ ಸಮಯದಲ್ಲಿ ಗಾಯದ ಮೇಲೆ ಬರೆ: ತರಕಾರಿ ಬೆಲೆ ಏರಿಕೆಯಿಂದ ಸಾಮಾನ್ಯ ಜನಜೀವನಕ್ಕೆ ಹೊರೆ!

ತೈಲ ಬೆಲೆ, ವಿದ್ಯುತ್ ಬೆಲೆ ಏರಿಕೆ ಬಳಿಕ ರಾಜ್ಯದಲ್ಲಿ ಅಗತ್ಯ ವಸ್ತುವಾಗಿರುವ ತರಕಾರಿ ಬೆಲೆಯೂ ಗಗನಕ್ಕೇರಿದೆ. ಇದರ ಪರಿಣಾಮ ಈಗಾಗಲೇ ಕೊರೋನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತೈಲ ಬೆಲೆ, ವಿದ್ಯುತ್ ಬೆಲೆ ಏರಿಕೆ ಬಳಿಕ ರಾಜ್ಯದಲ್ಲಿ ಅಗತ್ಯ ವಸ್ತುವಾಗಿರುವ ತರಕಾರಿ ಬೆಲೆಯೂ ಗಗನಕ್ಕೇರಿದೆ. ಇದರ ಪರಿಣಾಮ ಈಗಾಗಲೇ ಕೊರೋನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಹಣ್ಣು–ತರಕಾರಿ ಬೆಳೆಗಾರರ ಸಹಕಾರಿ ಸಂಸ್ಥೆಯಾಗಿರುವ ಹಾಪ್ ಕಾಮ್ಸ್'ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿಯವರು ಮಾತನಾಡಿ, ತರಕಾರಿ ಬೆಲೆ ಏರಿಕೆಯಾಗಿದೆ. ಸಾಂಕ್ರಾಮಿಕ ರೋಗ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪರಿಣಾಮ ಬೆಲೆ ಏರಿಕೆಯಾಗಿದೆ. ಕೇವಲ ಇದೊಂದೇ ಅಲ್ಲ, ಗ್ರಾಮೀಣ ಭಾಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದಲೂ ಬೆಲೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. 

ಬೀನ್ಸ್ ಬೆಲೆ ಕೆಜಿಗೆ ರೂ. 60-90ಕ್ಕೆ ಏರಿಕೆಯಾಗಿದ್ದು, ಊಟಿ ಕ್ಯಾರೆಟ್ ಬೆಲೆ ರೂ.52-62ಕ್ಕೆ ಏರಿಕೆಯಾಗಿದೆ. ಇದರಂತೆ ಆಲೂಗಡ್ಡೆ ಹಾಗೂ ಟೊಮೆಟೋವನ್ನು ಸ್ಥಳೀಯವಾಗಿ ಬೆಳೆಯುತ್ತಿರುವುದರಿಂದ ಇದರ ಬೆಲೆ ಮಾತ್ರ ಏರಿಕೆಯಾಗಿಲ್ಲ. ಆದರೆ, ಈರುಳ್ಳಿ ಬೆಲೆ ಏರಿಕೆಯಾಗಿದೆ. ನಾಸಿಕ್ ನಿಂದ ಈರುಳ್ಳಿಯನ್ನು ಖರೀದಿ ಮಾಡಲಾಗುತ್ತಿದ್ದು, ಇಲ್ಲಿ ಪ್ರಯಾಣ ನಿರ್ಬಂಧಗಳಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. 

ಮಾರುಕಟ್ಟೆಯನ್ನು ನಿಗದಿತ ಸಮಯದಲ್ಲಿ ತೆರೆಯಲಾಗುತ್ತಿರುವುದರಿಂದ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಬೆಳಿಗ್ಗೆ 6-9 ಗಂಟೆ ಮಾತ್ರ ಮಾರುಕಟ್ಟೆ ತೆರೆಯಲಾಗುತ್ತಿದೆ. ಹೀಗಾಗಿ ಲಾರಿಗಳು ಸಂಚಾರಕ್ಕೆ ಇಳಿಯುತ್ತಿಲ್ಲ ಎಂದು ವ್ಯಾಪಾರಸ್ಥರೊಬ್ಬರು ಹೇಳಿದ್ದಾರೆ. 

ಮಳೆಗಾಲ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡುವುದು ಸಾಮಾನ್ಯ. ಆದರೆ, ಕೊರೋನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಬೇಕೆಂದು ಬೆಂಗಳೂರು ನಿವಾಸಿ ನೀತು ಕೆ. ಎಂಬುವವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com