ನಗರದಲ್ಲಿ ಕೊರೋನಾ ಪ್ರಕರಣಗಳ ಇಳಿಕೆ: ಖಾಸಗಿ ಆಸ್ಪತ್ರೆಗಳಿಗೆ ಶೇ.30 ರಷ್ಟು ಹಾಸಿಗೆ ವಾಪಸ್ ನೀಡಿದ ಸರ್ಕಾರ

ಸಿಲಿಕಾನ್ ಸಿಟಿಯಲ್ಲಿ ಸೋಂಕು ಹೆಚ್ಚಾದ ಸಂದರ್ಭದಲ್ಲಿ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಂದ ಪಡೆಯಲಾಗಿದ್ದ ಶೇ.50 ರಷ್ಟು ಹಾಸಿಗೆಗಳ ಪೈಕಿ ಶೇ.30 ರಷ್ಟು ಹಾಸಿಗೆಗಳನ್ನು ರಾಜ್ಯ ಸರ್ಕಾರ ವಾಪಸ್ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಂಕು ಹೆಚ್ಚಾದ ಸಂದರ್ಭದಲ್ಲಿ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಂದ ಪಡೆಯಲಾಗಿದ್ದ ಶೇ.50 ರಷ್ಟು ಹಾಸಿಗೆಗಳ ಪೈಕಿ ಶೇ.30 ರಷ್ಟು ಹಾಸಿಗೆಗಳನ್ನು ರಾಜ್ಯ ಸರ್ಕಾರ ವಾಪಸ್ ನೀಡಿದೆ. 

ನಗರದಲ್ಲಿ ಸೋಂಕು ಇಳಿದ ಹಿನ್ನೆಲೆಯಲ್ಲಿ ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಿರುವುದಾಗಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಗುರುವಾರ ಮಾಹಿತಿ ನೀಡಿದ್ದಾರೆ. 

ಖಾಸಗಿ ಆಸ್ಪತ್ರೆಯಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಪಡೆಯಲಾಗಿತ್ತು. ಆದರಲ್ಲಿ ಅವಶ್ಯಕತೆ ಇಲ್ಲದ ಕೆಲವು ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಬಿಟ್ಟುಕೊಡುವ ಬಗ್ಗೆ ಕಂದಾಯ ಸಚಿವ ಅಶೋಕ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರವೇ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ. 

ಸಾಮಾನ್ಯ ಹಾಸಿಗೆಯಲ್ಲಿ ಶೇ.20 ಹಾಸಿಕೆಗಳನ್ನು ಉಳಿಸಿಕೊಂಡು ಬಾಕಿ ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ವಾಪಸ್ ಕೊಡಲು ನಿರ್ಧರಿಸಲಾಗಿದೆ. ಹೆಚ್'ಡಿಯು ಮತ್ತು ಐಸಿಯು ಹಾಸಿಗೆಗಳಲ್ಲಿ ಹೆಚ್ಚಿನ ಹಾಸಿಗೆಗಳನ್ನು ಸದ್ಯಕ್ಕೆ ಹಿಂದಿರುಗಿಸುವುದಿಲ್ಲ. ಈ ಕುರಿತು ಗೃಹ ಸಚಿವ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ತಾವರೆಕೆರೆಯ ಗಿಡ್ಡೇನಹಳ್ಳಿಯ ತಾತ್ಕಾಲಿಕ ಚಿತಾಗಾರ ಮುಚ್ಚಲಾಗಿದೆ. ಪೀಣ್ಯದ ವಿದ್ಯುತ್ ಚಿತಾಗಾರ ನಿರ್ವಹಣಾ ಕಾರ್ಯದ ನಿಮಿತ್ತ ಬಂದ್ ಮಾಡಲಾಗಿದೆ. ತಾತ್ಕಾಲಿಕೆ ಚಿತಾಗಾರಗಳ್ನು ಬಂದ್ ಮಾಡಲಾಗಿದ್ದು, ಅವಶ್ಯಕತೆಗೆ ತಕ್ಕಂತೆ ಚಿತಾಗಾರಗಳು ಕಾರ್ಯನಿರ್ವಹಿಸಿವೆ ಎಂದಿದ್ದಾರೆ. 

ಲಾಕ್ಡೌನ್ ಸಡಿಲಿಕೆಯನ್ನು ಹಂತ ಹಂತವಾಗಿ ಮಾಡಬೇಕು ಎಂಬುದು ಎಲ್ಲರ ಅಭಿಪ್ರಾಯ. ಈ ಪ್ರಕಾರವೇ ಕೆಲವು ಚಟುವಟಿಕೆಗಳನ್ನು ಮೊದಲ ಹಂತದಲ್ಲಿ ಸಡಿಲಿಕೆ ಮಾಡುವ ಯೋಚನೆ ಇದೆ. 2ನೇ ಹಂತದ ಸಡಿಲಿಕೆಯನ್ನು ಎಂದಿನಿಂದ ಎಷ್ಟು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು. ಹೊರ ರಾಜ್ಯದಿಂದ ಬೆಂಗಳೂರಿಗೆ ವಲಸೆ ಬರುವೋವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣದ ದೃಷ್ಟಿಯಿಂದ ಕೋವಿಡ್ ಪರೀಕ್ಷೆ ವರದಿಯನ್ನು ಕಡ್ಡಾಯ ಮಾಡಲು ಚಿಂತನೆ ನಡೆದಿದೆ, ಈ ಕುರಿತು ಸರ್ಕಾರದೊಂದಿದೆ ಚರ್ಚಿಸಿ ಅನುಮತಿ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com