ಪ್ರತಿಭಟನಾ ನಿರತ ರೈತನ ಪರ ಕರ್ನಾಟಕ ಕೋರ್ಟ್ ನಲ್ಲಿ ಕಾಂಗ್ರೆಸ್ ಮುಖಂಡ ಸುರ್ಜೆವಾಲಾ ವಕಾಲತ್ತು!
ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ವಕೀಲರ ಸ್ಥಾನದಲ್ಲಿದ್ದಾಗ ಕರ್ನಾಟಕದ ಕಾಂಗ್ರೆಸ್ ನಾಯಕರಲ್ಲಿ ಕೆಲ ಕಾಲ ಅಚ್ಚರಿಗೆ ಕಾರಣವಾಯಿತು.
Published: 12th June 2021 03:19 PM | Last Updated: 12th June 2021 04:34 PM | A+A A-

ರಣದೀಪ್ ಸಿಂಗ್ ಸುರ್ಜೇವಾಲಾ
ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ವಕೀಲರ ಸ್ಥಾನದಲ್ಲಿದ್ದಾಗ ಕರ್ನಾಟಕದ ಕಾಂಗ್ರೆಸ್ ನಾಯಕರಲ್ಲಿ ಕೆಲ ಕಾಲ ಅಚ್ಚರಿಗೆ ಕಾರಣವಾಯಿತು.
ಕೃಷಿ ಕಾನೂನುಗಳನ್ನು ವಿರೋಧಿಸಿ ಜಿಂದ್ (ಹರಿಯಾಣ) ದಲ್ಲಿ ಪ್ರತಿಭಟನೆಯ ವೇಳೆ ಕಪಾಳಮೋಕ್ಷ ಮಾಡಿದ ರೈತನಿಗೆ ಜಾಮೀನು ಕೋರಿ ಸೆಷನ್ಸ್ ನ್ಯಾಯಾಧೀಶರ ಮುಂದೆ ಸುರ್ಜೆವಾಲಾ ಹಾಜರಾದರು.
ಪ್ರ್ಯಾಕ್ಟೀಸ್ ಮಾಡುತ್ತಿರುವ ವಕೀಲರಾದ ಸುರ್ಜೆವಾಲಾ ಅವರು ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥರಾಗಿ ಮತ್ತು ನಂತರ ರಾಷ್ಟ್ರೀಯ ಮಾಧ್ಯಮ ಕೋಶದ ಮುಖ್ಯಸ್ಥರಾಗಿ ಪೂರ್ಣ ಸಮಯದ ರಾಜಕೀಯಕ್ಕೆ ಕೈಜೋಡಿಸಿದಾಗಿನಿಂದ ನ್ಯಾಯಾಲಯಕ್ಕೆ ಹಾಜರಾಗುವುದನ್ನು ಕಡಿಮೆ ಮಾಡಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, "ನಮ್ಮ ಪಕ್ಷಕ್ಕೆ ಒಂದು ಸಂಪ್ರದಾಯವಿದೆ - ಅಗತ್ಯವಿದ್ದಾಗಲೆಲ್ಲಾ, ನಮ್ಮ ನಾಯಕರು ಮೂಲಭೂತ ಹಕ್ಕುಗಳಿಗಾಗಿ ಹೋರಾಡಲು ಕಾನೂನಿನ ಪೋಶಾಕು ಧರಿಸುತ್ತಾರೆ. ಪಂಡಿತ್ ನೆಹರೂ, ಸುಭಾಷ್ ಚಂದ್ರ ಬೋಸ್ ಕೂಡ ಹಾಗೆ ಮಾಡಿದ್ದಾರೆ ಎಂದು ನಮ್ಮ ಇತಿಹಾಸ ಪುಸ್ತಕಗಳು ನಿಮಗೆ ತಿಳಿಸುತ್ತವೆ ಎಂದು ಹೇಳಿದರು.
"ಕಾಂಗ್ರೆಸ್ ನಾಯಕರು ಜನರ ಹಕ್ಕುಗಳಿಗಾಗಿ ಹೋರಾಡಲು ಹಿಂಜರಿಯದ ಅಸಂಖ್ಯಾತ ನಿದರ್ಶನಗಳಿವೆ. ಇಲ್ಲಿ, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯಕ್ಕೆ ಹಾಜರಾಗಿ ರೈತನ ಹಕ್ಕುಗಳಿಗಾಗಿ ಹೋರಾಡಿದ್ದಾರೆ" ಎಂದರು.
ಸುರ್ಜೆವಾಲಾ ಅವರನ್ನು ಸಂಪರ್ಕಿಸಿದಾಗ, "ಹಾಗೆ ಹೋರಾಟ ನಡೆಸುವುದು ನನ್ನ ಕರ್ತವ್ಯ" ಎಂದು ಪತ್ರಿಕೆಗೆ ಹೇಳಿದರು.