ಕರ್ನಾಟಕದಲ್ಲಿ ಶತಕ ಬಾರಿಸಿದ ಲೀಟರ್ ಪೆಟ್ರೋಲ್ ಬೆಲೆ: ರಾಜಸ್ಥಾನದಲ್ಲಿ ಶತಕದ ಗಡಿ ದಾಟಿದ ಡೀಸೆಲ್ ಬೆಲೆ

ತೈಲ ದರಲ್ಲಿ ಮತ್ತೆ ಏರಿಕೆ ನಂತರ ರಾಜಸ್ಥಾನದಲ್ಲಿ ಶನಿವಾರ ಲೀಟರ್ ಡೀಸೆಲ್ ಬೆಲೆ ಶತಕದ ಗಡಿ ದಾಟಿದ್ದರೆ, ಕರ್ನಾಟಕದಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.100 ಆಗಿದೆ. ಈ ಮೂಲಕ ಪೆಟ್ರೋಲ್ ಬೆಲೆ 100 ರೂ. ಇರುವ ರಾಜ್ಯಗಳಲ್ಲಿ ಕರ್ನಾಟಕ ಏಳನೇ ರಾಜ್ಯವಾಗಿ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತೈಲ ದರಲ್ಲಿ ಮತ್ತೆ ಏರಿಕೆ ನಂತರ ರಾಜಸ್ಥಾನದಲ್ಲಿ ಶನಿವಾರ ಲೀಟರ್ ಡೀಸೆಲ್ ಬೆಲೆ ಶತಕದ ಗಡಿ ದಾಟಿದ್ದರೆ, ಕರ್ನಾಟಕದಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.100 ಆಗಿದೆ. ಈ ಮೂಲಕ ಪೆಟ್ರೋಲ್ ಬೆಲೆ 100 ರೂ. ಇರುವ ರಾಜ್ಯಗಳಲ್ಲಿ ಕರ್ನಾಟಕ ಏಳನೇ ರಾಜ್ಯವಾಗಿ ದಾಖಲಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆ ಪ್ರಕಾರ, ಲೀಟರ್ ಪೆಟ್ರೋಲ್ ಬೆಲೆ 27 ಪೈಸೆಯಷ್ಟು, ಡೀಸೆಲ್ ಬೆಲೆ 23 ಪೈಸೆಯಷ್ಟುಹೆಚ್ಚಳವಾಗಿದೆ. ಮೇ 4 ರಿಂದಲೂ 23 ನೇ ಬಾರಿಗೆ ಏರಿಕೆಯೊಂದಿಗೆ ದೇಶಾದ್ಯಂತ ತೈಲ ಬೆಲೆ ಐತಿಹಾಸಿಕ ರೀತಿಯಲ್ಲಿ ಹೆಚ್ಚಳವಾಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಸಾರ್ವಕಾಲಿಕ ಎಂಬಂತೆ ರೂ.96.12 ಪೈಸೆಯಷ್ಟು ಹೆಚ್ಚಳವಾಗಿದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ಇದೀಗ ರೂ. 86.98 ಆಗಿದೆ.

ತೈಲ ಬೆಲೆಗಳು ವ್ಯಾಟ್, ಸರಕು ತೆರಿಗೆ ಮತ್ತಿತರ ಸ್ಥಳೀಯ ತೆರಿಗೆ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಲಡಾಖ್ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ಆಗಿದೆ. 

ಕರ್ನಾಟಕದ ಬಳ್ಳಾರಿ, ಬೀದರ್, ಕೊಪ್ಪಳ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ರೂ. 99.39 ಇದ್ದರೆ ಲೀಟರ್ ಡೀಸೆಲ್ ಬೆಲೆ ರೂ.92. 27 ಪೈಸೆಯಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com