ಕೋವಿಡ್-19: ರಾಜ್ಯದಲ್ಲಿ 2 ತಿಂಗಳ ಬಳಿಕ ದೈನಂದಿನ ಸೋಂಕು ಪ್ರಮಾಣ ಅತಿಕಡಿಮೆ!

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಘೋಷಣೆ ಹೊರಬಿದ್ದ ಬೆನ್ನಲ್ಲೇ ಅಚ್ಚರಿ ರೀತಿಯಲ್ಲಿ ರಾಜ್ಯ ಸಹಜ ಸ್ಥಿತಿಗೆ ಬರಲಾರಂಭಿಸಿದೆ. ರಾಜ್ಯದಲ್ಲಿ ಶುಕ್ರವಾರ 8249 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 2 ತಿಂಗಳ ಬಳಿಕ ದೈನಂದಿನ ಸೋಂಕು ಕನಿಷ್ಟಕ್ಕೆ ಕುಸಿದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಘೋಷಣೆ ಹೊರಬಿದ್ದ ಬೆನ್ನಲ್ಲೇ ಅಚ್ಚರಿ ರೀತಿಯಲ್ಲಿ ರಾಜ್ಯ ಸಹಜ ಸ್ಥಿತಿಗೆ ಬರಲಾರಂಭಿಸಿದೆ. ರಾಜ್ಯದಲ್ಲಿ ಶುಕ್ರವಾರ 8249 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 2 ತಿಂಗಳ ಬಳಿಕ ದೈನಂದಿನ ಸೋಂಕು ಕನಿಷ್ಟಕ್ಕೆ ಕುಸಿದಿದೆ. 

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಕೊರೋನಾ ಅಬ್ಬರ ಕಡಿಮೆಯಾಗಿದ್ದು, ನಿನ್ನೆ 1,154 ಹೊಸ ಪ್ರಕರಣಗಳು ಪತ್ತೆಯಾಗಿದೆ. 

ರಾಜ್ಯದಲ್ಲಿ ಏಪ್ರಿಲ್ 13 ರಂದು 8,778 ಪ್ರಕರಣಗಳು ಪತ್ತೆಯಾಗಿತ್ತು. ಮಾರ್ಚ್ ತಿಂಗಳಿನಲ್ಲಿ 1,200-5,000 ಪತ್ತೆಯಾಗುತ್ತಿದ್ದ ದೈನಂದಿನ ಪ್ರಕರಣಗಳ ಸಂಖ್ಯೆ ಏಪ್ರಿಲ್ 13 ರ ಬಳಿಕ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಏಪ್ರಿಲ್ 30ರಂದು ರಾಜ್ಯದಲ್ಲಿ ಒಂದೇ ದಿನ 48,296 ಹೊಸ ಪ್ರಕರಣಗಳು ಪತ್ತೆಯಾಗಿತ್ತು. ಮೇ ತಿಂಗಳಿನಲ್ಲಿಯೂ ಇದೇ ಬೆಳವಣಿಗೆ ಮುಂದುವರೆದಿತ್ತು. ಮೇ..5 ರಂದು ರಾಜ್ಯದಲ್ಲಿ ಸಾರ್ವಕಾಲಿಕ ದಾಖಲೆಯ 50,112 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಬೆಳವಣಿಗೆ ರಾಜ್ಯದ ಜನರ ಆತಂಕವನ್ನು ಹೆಚ್ಚು ಮಾಡಿತ್ತು. 

ಕೊರೋನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾದ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ ಬಳಿಕ ದಿನಕಳೆದಂತೆ ಸೋಂಕು ಇಳಿಕೆಯಾಗಲು ಆರಂಭವಾಗಿತ್ತು. ಜೂನ್. 8 ರಂದು ರಾಜ್ಯದಲ್ಲಿ 9,808 ಪ್ರಕರಣಗಳು ಪತ್ತೆಯಾಗಿ, 2 ತಿಂಗಳ ಬಳಿಕ ಇದೀಗ ರಾಜ್ಯದಲ್ಲಿ 8249 ಹೊಸ ಪ್ರಕರಣಗಳು ಪತ್ತೆಯಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com