ಅಧಿಕ ಕೆಲಸದ ಒತ್ತಡ: ಹುದ್ದೆ ತೊರೆಯಲು ಪಾಲಿಕೆ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ನಿರ್ಧಾರ!

ಕೊರೋನಾ ಸಾಂಕ್ರಾಮಿಕ ಕೇವಲ ಜನರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ, ಜೊತೆಗೆ ಮುಂಚೂಣಿಯಲ್ಲಿರುವ ಅಧಿಕಾರಿಗಳ ವಯಕ್ತಿಕ ಹಾಗೂ ವೃತ್ತಿ ಜೀವನದ ಮೇಲೂ ಅಡ್ಡ ಪರಿಣಾಮ ಬೀರಿದೆ.
ರಾಜೇಂದ್ರ ಚೋಳನ್
ರಾಜೇಂದ್ರ ಚೋಳನ್

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಕೇವಲ ಜನರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ, ಜೊತೆಗೆ ಮುಂಚೂಣಿಯಲ್ಲಿರುವ ಅಧಿಕಾರಿಗಳ ವಯಕ್ತಿಕ ಹಾಗೂ ವೃತ್ತಿ ಜೀವನದ ಮೇಲೂ ಅಡ್ಡ ಪರಿಣಾಮ ಬೀರಿದೆ.

ದೀರ್ಘಾವದಿ ಕೆಲಸ, ತಡರಾತ್ರಿ ಸಭೆಗಳಿಂದಾಗಿ ಅಧಿಕಾರಿಗಳು ತಮ್ಮ ಕುಟುಂಬಕ್ಕೆ ಸರಿಯಾದ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ, ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಅವರು, ತಮ್ಮನ್ನು ಹುದ್ದೆಯಿಂದ ಮುಕ್ತಗೊಳಿಸುವಂತೆ ಸರ್ಕಾರದ ಮುಂದೆ ಮನವಿ ಸಲ್ಲಿಸಿದ್ದಾರೆ. 

ಚೋಳನ್ ಅವರ ಅರ್ಜಿಯಿಂದ ಡಿಪಿಎಆರ್ ಮತ್ತು ಮುಖ್ಯಮಂತ್ರಿಗಳಿಗೆ ಸದ್ಯ ಆತಂಕ ತಂದಿದೆ ಎಂದು ಮೂಲಗಳು ತಿಳಿಸಿವೆ. ಸರಿಯಾದ ಅಭ್ಯರ್ಥಿ ಕಂಡುಕೊಳ್ಳಲು ಅವರಿಗೆ ಸಾಧ್ಯವಾಗದಿದ್ದರೂ ಸಹ, ಯಾವುದೇ ಅಧಿಕಾರಿಗಳು ಈ ಹುದ್ದೆಯನ್ನು ಸ್ವೀಕರಿಸಲು ಉತ್ಸುಕರಾಗಿಲ್ಲ.

ಚೋಳನ್ ಅವರು ಹಲವು ಇಲಾಖೆ ಕೆಲಸ ನಿರ್ವಹಿಸುತ್ತಿರುವುದರಿಂದ ಆರೋಗ್ಯ ಕಾರಣ ನೀಡಿ ಹುದ್ದೆಯಿಂದ ಮುಕ್ತವಾಗಲು ಬಯಸಿದ್ದಾರೆ. ಸದ್ಯ ಅವರ ಸ್ಥಾನಕ್ಕೆ ಮತ್ತೊಬ್ಬ ಅಧಿಕಾರಿ ತರುವುದು ಕಷ್ಟದ ಕೆಲಸವಾಗಿದೆ. ಕೊರೋನಾ ಸಾಂಕ್ರಾಮಿಕದ ಬಗ್ಗೆ ಅಪಾರ ಜ್ಞಾನ ಮತ್ತು ಮಾಹಿತಿ ಉಳ್ಳವರು ಬೇಕಾಗುತ್ತದೆ, ಕಠಿಣ ಪರಿಸ್ಥಿತಿಯ ಸಮಯದಲ್ಲಿ ಸೂಕ್ತ ವ್ಯಕ್ತಿ ತಂದು ಕೂರಿಸುವುದು ಕಷ್ಟದ ಕೆಲಸವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಇದೇ ರೀತಿಯ ಪರಿಸ್ಥಿತಿಯಿಂದಾಗಿ ಬಿಬಿಎಂಪಿ ಆಯುಕ್ತರಾಗಿದ್ದ  ಎನ್ ಮಂಜುನಾಥ್ ಪ್ರಸಾದ್ ಅವರು ವರ್ಗಾವಣೆ ಕೋರಿದ್ದರು. ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಡಿ ರಣ್ ದೀಪ್ ಅವರ ಹೆಸರು ಕೇಳಿ ಬರುತ್ತಿದೆ. ಆದರೆ ಅವರು ಕೂಡ ಹಲವು ಟಾಸ್ಕ್ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕೋವಿಡ್  ಬಿಕ್ಕಟ್ಟಿನ ವಾರ್ ರೂಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಅಧಿಕಾರಿಗಳಲ್ಲಿ ಯಾರಾದರೂ ಒಬ್ಬರನ್ನು ನೇಮಿಸಲು ಸರ್ಕಾರ ಹುಡುಕಾಟ ನಡೆಸುತ್ತಿದೆ. ಆದರೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ರಾಜೇಂದ್ರ ಚೋಳನ್ ಅವರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿದ್ದಾರೆ, ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಬೊಮ್ಮನಹಳ್ಳಿ ವಲಯದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ರಣದೀಪ್ ಮಹಾದೇವಪುರದ ವಲಯ ಆಯುಕ್ತರಾಗಿದ್ದು, ಶವಸಂಸ್ಕಾರ ಮತ್ತು ವಾರ್ ರೂಂ ಪೋರ್ಟಲ್ ಸಮಿತಿಯ ಭಾಗವಾಗಿದ್ದಾರೆ. ಈ ಜವಾಬ್ದಾರಿ ದೊಡ್ಡದಾಗಿದೆ, ಯಾವುದೇ ಅಧಿಕಾರಿಯು ಅದನ್ನು ತೆಗೆದುಕೊಳ್ಳಲು ಉತ್ಸುಕರಾಗಿಲ್ಲ. ಏಕೆಂದರೆ ಅಧಿಕಾರಿಗಳು ಹೆಚ್ಚಿನ ಸಭೆಗಳಿಗೆ ಹಾಜರಾಗಬೇಕಾಗುತ್ತದೆ ಮತ್ತು ನಾಗರಿಕರ ಪ್ರಶ್ನೆಗಳಿಗೆ ಸ್ಪಂದಿಸಬೇಕಾಗುತ್ತದೆ.

ಅವರಿಗೂ ಕುಟುಂಬವಿದ್ದು ಜವಾಬ್ದಾರಿಗಳಿರುತ್ತವೆ, ಬಿಕ್ಕಟ್ಟಿನ ಸಂದರ್ಭದಲ್ಲಿ ಸಿಬ್ಬಂದಿ ಕೊರತೆಯಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಇಂಥಹ ಹುದ್ದೆ ನಿರ್ವಹಿಸಲು ತರಬೇತಿ ಪಡೆದ ಅಧಿಕಾರಿಗಳು ಬೇಕೆಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com