ಲಾಕ್ ಡೌನ್ ನಿರ್ಬಂಧ ಸಡಿಲಿಕೆ: ಅತ್ತಿಬೆಲೆ ಗಡಿಯಲ್ಲಿ ರ್ಯಾಂಡಮ್ ಕೋವಿಡ್ ಟೆಸ್ಟ್ ಗೆ ವ್ಯವಸ್ಥೆ!

ಜೂನ್ 14 ರ ನಂತರ ಲಾಕ್ ಡೌನ್ ನಿರ್ಬಂಧ ಸಡಿಲಿಕೆಯ ನಂತರ ತಮಿಳುನಾಡಿನ ಅತ್ತಿಬೆಲೆಯ ಗಡಿಯಲ್ಲಿ ರ್ಯಾಂಡಮ್ ಕೋವಿಡ್ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ.
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ

ಬೆಂಗಳೂರು: ಜೂನ್ 14 ರ ನಂತರ ಲಾಕ್ ಡೌನ್ ನಿರ್ಬಂಧ ಸಡಿಲಿಕೆಯ ನಂತರ ತಮಿಳುನಾಡಿನ ಅತ್ತಿಬೆಲೆಯ ಗಡಿಯಲ್ಲಿ ರ್ಯಾಂಡಮ್ ಕೋವಿಡ್ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ.

ಲಾಕ್ ಡೌನ್ ಸಡಿಲಿಕೆ ನಂತರ ತಮಿಳುನಾಡಿನಿಂದ ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಬೊಮ್ಮಸಂದ್ರ ಹಾಗೂ ಪೀಣ್ಯ ಮತ್ತು ಬೆಂಗಳೂರು ನಗರ ಜಿಲ್ಲೆಯ ಕೈಗಾರಿಕಾ ಪ್ರದೇಶಗಳು ಮತ್ತು ಕಂಪನಿಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಬರಲು ಆರಂಭಿಸುತ್ತಾರೆ. 

ತಮಿಳುನಾಡಿನಿಂದ ಆಗಮಿಸುವವರಿಗೆ ಸಾಮೂಹಿಕ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಲಾಗುವುದು ಎಂದು ಜೆ ಮಂಜುನಾಥ್ ತಿಳಿಸಿದ್ದಾರೆ.

ಕೇರಳ ಮತ್ತು ಮಹಾರಾಷ್ಟ್ರದಿಂದ ಪ್ರವೇಶಿಸುವ ಜನರ ಮೇಲೆ ನಾವು ಕಣ್ಗಾವಲು ನಡೆಸಿದ್ದು, ಪರೀಕ್ಷೆಗಾಗಿ ಮೊದಲಿನಿಂದಲೂ ನಾವು ಪೂರ್ಣ ಪ್ರಮಾಣದ ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಕೈಗಾರಿಕಾ ಪ್ರದೇಶಗಳು ಮತ್ತು ಕಂಪನಿಗಳಲ್ಲೂ ಸಾಮೂಹಿಕ ಪರೀಕ್ಷೆ ನಡೆಸಲಾಗುವುದು. ಕಾರ್ಮಿಕರು ವಾಸಿಸುವ ಸ್ಥಳಗಳಲ್ಲೂ ಸಹ ಆರ್ ಎ ಟಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com