ಸರ್ಕಾರದ ಕೋವಿಡ್ ಲಸಿಕೆ ಪೂರೈಕೆ ನೀತಿ: ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ

ಕೋವಿಡ್-19 ಅಲೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳನ್ನು ಕೊರೋನಾ ಲಸಿಕೆ ಅಭಿಯಾನದಿಂದ ಹೊರಗಿಡಲಾಗಿದೆ. ಪೂರೈಕೆದಾರರಿಂದ ಕೊರೋನಾ ಲಸಿಕೆ ಡೋಸ್ ಗಳನ್ನು ಸಂಗ್ರಹಿಸಲು ಸಾಧ್ಯವಾಗದಿರುವುದರಿಂದ 30ರಿಂದ 40 ಬೆಡ್ ಗಳನ್ನು ಹೊಂದಿರುವ ಆಸ್ಪತ್ರೆಗಳು ಲಸಿಕೆ ಅಭಿಯಾನವನ್ನು ನಡೆಸುವ ಕಾರ್ಯದಿಂದ ಹೊರಗುಳಿದಿವೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕೋವಿಡ್ ಲಸಿಕೆ ಪಡೆದ ಅಥ್ಲಿಟ್ ಅಶ್ವಿನಿ ಅಕ್ಕುಂಜಿ
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕೋವಿಡ್ ಲಸಿಕೆ ಪಡೆದ ಅಥ್ಲಿಟ್ ಅಶ್ವಿನಿ ಅಕ್ಕುಂಜಿ

ಬೆಂಗಳೂರು: ಕೋವಿಡ್-19 ಅಲೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳನ್ನು ಕೊರೋನಾ ಲಸಿಕೆ ಅಭಿಯಾನದಿಂದ ಹೊರಗಿಡಲಾಗಿದೆ. ಪೂರೈಕೆದಾರರಿಂದ ಕೊರೋನಾ ಲಸಿಕೆ ಡೋಸ್ ಗಳನ್ನು ಸಂಗ್ರಹಿಸಲು ಸಾಧ್ಯವಾಗದಿರುವುದರಿಂದ 30ರಿಂದ 40 ಬೆಡ್ ಗಳನ್ನು ಹೊಂದಿರುವ ಆಸ್ಪತ್ರೆಗಳು ಲಸಿಕೆ ಅಭಿಯಾನವನ್ನು ನಡೆಸುವ ಕಾರ್ಯದಿಂದ ಹೊರಗುಳಿದಿವೆ.

ದೊಡ್ಡ ಕಾರ್ಪೊರೇಟ್ ಆಸ್ಪತ್ರೆಗಳು ಮಾತ್ರ ಫಾರ್ಮಾ ಕಂಪನಿಗಳಿಂದ ಲಸಿಕೆಗಳನ್ನು ಸಂಗ್ರಹಿಸುತ್ತಿವೆ, ಏಕೆಂದರೆ ಅವುಗಳು ಒಂದೇ ಸಮಯದಲ್ಲಿ ಹಣವನ್ನು ಪಾವತಿಸಲು ಸಮರ್ಥವಾಗಿವೆ, ಮಧ್ಯಮ ಗಾತ್ರದ ಆಸ್ಪತ್ರೆಗಳು ಇದನ್ನು ಮಾಡಲು ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರಕ್ಕೆ ಹಲವಾರು ಮನವಿಗಳನ್ನು ಈ ಆಸ್ಪತ್ರೆಗಳು ಮಾಡಿಕೊಂಡರೂ ಕೂಡ ಪ್ರಯೋಜನವಾಗಿಲ್ಲ ಎಂದು ಆಸ್ಪತ್ರೆ ಮುಖ್ಯಸ್ಥರು ಹೇಳುತ್ತಾರೆ.

ಕಳೆದ ಮೇ 1ರಂದು 18ರಿಂದ 45 ವರ್ಷದೊಳಗಿನವರಿಗೆ, ಖಾಸಗಿ ಆಸ್ಪತ್ರೆಗಳು ತಮ್ಮದೇ ಆದ ಲಸಿಕೆಗಳನ್ನು ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು, ಇದು ಸಣ್ಣ ಆಸ್ಪತ್ರೆಗಳ ಮೇಲೆ ತೀವ್ರ ಹೊಡೆತ ಬಿದ್ದಿದೆ. ಈ ಹಿಂದೆ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಳನ್ನು ಪೂರೈಸುತ್ತಿತ್ತು.

ಮೇ ತಿಂಗಳಿನಿಂದ, ನಾವು ಭಾರತದಲ್ಲಿನ ಎರಡೂ ಲಸಿಕೆ ತಯಾರಕರನ್ನು ಸಂಪರ್ಕಿಸುತ್ತಿದ್ದು, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾವು 15,000 ಡೋಸ್ ಕೋವಿಶೀಲ್ಡ್ ಮತ್ತು ಸುಮಾರು 3,000 ಡೋಸ್ ಕೋವಾಕ್ಸಿನ್ ಪೂರೈಕೆಗೆ ಮನವಿ ಮಾಡಿಕೊಂಡಿದ್ದೇವೆ. ಏಪ್ರಿಲ್‌ನಿಂದ ಇಮೇಲ್‌ಗಳು ಮತ್ತು ಇತರ ಸಂವಹನಗಳನ್ನು ಕಳುಹಿಸುತ್ತಿದ್ದೇವೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ” ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಅಸೋಸಿಯೇಷನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಭಾರತದ ಆರೋಗ್ಯ ಪೂರೈಕೆದಾರರ ಸಂಘದ ಸದಸ್ಯರು ಸಹ ಸಣ್ಣ ಆಸ್ಪತ್ರೆಗಳಿಗೆ ಸಹಾಯ ಮಾಡುವಂತೆ ಸರ್ಕಾರವನ್ನು ಕೋರಿದ್ದು ಇದುವರೆಗೆ ಭರವಸೆಗಳು ಮಾತ್ರ ಬರುತ್ತಿವೆ, ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಎಸಿಇ ಸುಹಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಜಗದೀಶ್ ಹೀರೇಮಠ.

ತಮ್ಮ ಆಸ್ಪತ್ರೆ ಬೆಂಗಳೂರಿನ ಕೈಗಾರಿಕಾ ಪ್ರದೇಶ ಜಿಗಣಿಯಲ್ಲಿದ್ದು ಇಲ್ಲಿ ಹಲವರು ಲಸಿಕೆ ಕೇಳಿಕೊಂಡು ಬರುತ್ತಿದ್ದಾರೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಲಸಿಕೆ ಅವಶ್ಯಕತೆಯಿದ್ದು ಸಿಗುತ್ತಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ, ಅಲ್ಲಿ ಲಸಿಕೆ ಇಲ್ಲ ಎಂದು ವಾಪಸ್ ಕಳುಹಿಸುತ್ತಾರೆ. ನಮ್ಮಲ್ಲಿಗೆ ಬಂದರೆ ನಮ್ಮಲ್ಲಿ ಕೂಡ ಇಲ್ಲ ಎನ್ನುತ್ತಾರೆ ಡಾ ಹೀರೇಮಠ್.

ಖಾಸಗಿ ಆಸ್ಪತ್ರೆಗಳಿಗೆ ಕಂಪೆನಿಗಳಿಂದ ಶೇಕಡಾ 25 ರಷ್ಟು ಲಸಿಕೆಗಳನ್ನು ಖರೀದಿಸಲು ಸರ್ಕಾರವು ಮಾನದಂಡ ನಿಗದಿಪಡಿಸಿಲ್ಲ. ಇದು ಲಸಿಕೆ ತಯಾರಕರು, ಪೂರೈಕೆದಾರರು ಮತ್ತು ಖಾಸಗಿ ಆಸ್ಪತ್ರೆಗಳ ಮಧ್ಯೆ ನಡೆಯುತ್ತಿರುವ ವ್ಯವಹಾರವಾಗಿದೆ. ಸಾಕಷ್ಟು ಮೂಲಸೌಕರ್ಯ ಮತ್ತು ಜನಸಾಮಾನ್ಯರನ್ನು ತಲುಪುವ ಸಾಮರ್ಥ್ಯವಿಲ್ಲದೆ ಸರ್ಕಾರಿ ವಲಯವು ಶೇಕಡಾ 75 ರಷ್ಟು ಲಸಿಕೆಗಳ ಮೇಲೆ ಕುಳಿತಿದೆ. ಸರ್ಕಾರದ ಲಸಿಕೆ ಅಭಿಯಾನ ನೀತಿಯಿಂದ ಮಧ್ಯಮ ಮತ್ತು ಸಣ್ಣ ಗಾತ್ರದ ಖಾಸಗಿ ಆಸ್ಪತ್ರೆಗಳ ಮೇಲೆ ತೀವ್ರ ಹೊಡೆತ ಬಿದ್ದಿದೆ ಎನ್ನುತ್ತಾರೆ ಸುಗುಣ ಆಸ್ಪತ್ರೆಯ ನಿರ್ದೇಶಕ ಡಾ ರವೀಂದ್ರ ಆರ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com