ಚೀನಾದ ಹವಾಲಾ ದಂಧೆಕೋರರ ಜೊತೆ ಸಂಪರ್ಕ ಶಂಕೆ: 290 ಕೋಟಿ ರೂ. ಹಗರಣ ಬಯಲಿಗೆಳೆದ ರಾಜ್ಯ ಪೊಲೀಸರು
ಹೂಡಿಕೆ ಮೇಲೆ ಆಕರ್ಷಿತ ಬಡ್ಡಿದರ ನೀಡುವುದಾಗಿ ಮೊಬೈಲ್ ಆಪ್ ಮೂಲಕ ಭರವಸೆ ನೀಡಿ ಜನರಿಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಹಣ ಎಗರಿಸಿದ್ದ ತಂಡವೊಂದನ್ನು ಬಂಧಿಸಿರುವ ರಾಜ್ಯ ಪೊಲೀಸರು ಸುಮಾರು 290 ಕೋಟಿ ರೂಪಾಯಿ ಹಗರಣವನ್ನು ಬಯಲಿಗೆಳೆದಿದ್ದಾರೆ.
Published: 13th June 2021 07:49 AM | Last Updated: 14th June 2021 03:10 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹೂಡಿಕೆ ಮೇಲೆ ಆಕರ್ಷಿತ ಬಡ್ಡಿದರ ನೀಡುವುದಾಗಿ ಮೊಬೈಲ್ ಆಪ್ ಮೂಲಕ ಭರವಸೆ ನೀಡಿ ಜನರಿಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಹಣ ಎಗರಿಸಿದ್ದ ತಂಡವೊಂದನ್ನು ಬಂಧಿಸಿರುವ ರಾಜ್ಯ ಪೊಲೀಸರು ಸುಮಾರು 290 ಕೋಟಿ ರೂಪಾಯಿ ಹಗರಣವನ್ನು ಬಯಲಿಗೆಳೆದಿದ್ದಾರೆ.
ಶೆಲ್ ಕಂಪೆನಿಗಳ ಸಹಾಯದಿಂದ ಈ ಹಗರಣ ನಡೆಯುತ್ತಿದ್ದು, ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಿದ್ದು ಇದಾಗಿದ್ದು ಕೇರಳ ಮೂಲದ ಉದ್ಯಮಿ ಶಂಕಿತ ಕಿಂಗ್ ಪಿನ್ ಆಗಿದ್ದು ಚೀನಾದ ಹವಾಲಾ ಆಪರೇಟರ್ ಮೂಲಕ ಜನರಿಗೆ ಪಂಗನಾಮ ಹಾಕುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸಿಐಡಿಯ ಸೈಬರ್ ಕ್ರೈಮ್ ವಿಭಾಗ ಆರೋಪಿಗಳನ್ನು ಬಂಧಿಸಿದ್ದು ಅವರಲ್ಲಿ ಇಬ್ಬರು ಚೀನೀ ಪ್ರಜೆಗಳು, ಇಬ್ಬರು ಟಿಬೆಟಿಯನ್ನರು ಮತ್ತು ಇತರ ಐವರು ಈ ಹಗರಣದಲ್ಲಿ ಭಾಗಿಯಾದ ಕಂಪೆನಿಗಳ ನಿರ್ದೇಶದ ಪ್ರಕಾರ ಕೆಲಸ ಮಾಡುತ್ತಿದ್ದರು. ಇತರರಿಗೆ ಹುಡುಕಾಟ ನಡೆಯುತ್ತಿದೆ.