ಕರ್ನಾಟಕ ಅರಣ್ಯ ಇಲಾಖೆ ಕಾಡಾನೆಗಳಿಗೆ ವಿಶಿಷ್ಟವಾದ ಹೆಸರು ಇಡುತ್ತದೆ ಏಕೆ? ಚರ್ಚೆಗೆ ಗ್ರಾಸ!
ಅಭಿಮನ್ಯು, ಭೀಮಾ ಅಥವಾ ಅರ್ಜುನ ಇವು ನಮ್ಮ ಕಾಡಾನೆ ಶಿಬಿರಗಳಲ್ಲಿರುವ ಆನೆಗಳ ಹೆಸರು. ಇದೇ ಆನೆಗಳು ದಸರಾ ಆಚರಣೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಹೆಸರುಗಳ ಖ್ಯಾತಿ ಹೆಚ್ಚಿಸಿಕೊಂಡಿವೆ. ಆದರೆ ಇತ್ತೀಚಿಗೆ ಸೆರೆ ಹಿಡಿಯಲಾಗುತ್ತಿರುವ ಆನೆಗಳಿಗೆ ಇಡಲಾಗುತ್ತಿರುವ ಹೆಸರಗಳು ಪ್ರಾಣಿಪ್ರಿಯರ ಹುಬ್ಬೇರಿಸಿದೆ.
Published: 14th June 2021 12:09 PM | Last Updated: 14th June 2021 02:55 PM | A+A A-

ಆನೆ ಕಾರ್ಯಾಚರಣೆ
ಬೆಂಗಳೂರು: ಅಭಿಮನ್ಯು, ಭೀಮಾ ಅಥವಾ ಅರ್ಜುನ ಇವು ನಮ್ಮ ಕಾಡಾನೆ ಶಿಬಿರಗಳಲ್ಲಿರುವ ಆನೆಗಳ ಹೆಸರು. ಇದೇ ಆನೆಗಳು ದಸರಾ ಆಚರಣೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಹೆಸರುಗಳ ಖ್ಯಾತಿ ಹೆಚ್ಚಿಸಿಕೊಂಡಿವೆ. ಆದರೆ ಇತ್ತೀಚಿಗೆ ಸೆರೆ ಹಿಡಿಯಲಾಗುತ್ತಿರುವ ಆನೆಗಳಿಗೆ ಇಡಲಾಗುತ್ತಿರುವ ಹೆಸರಗಳು ಪ್ರಾಣಿಪ್ರಿಯರ ಹುಬ್ಬೇರಿಸಿದೆ.
ಹೌದು.. ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ಆನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಆನೆಗಳನ್ನು ಉಲ್ಲೇಖಿಸಿ ಅಧಿಕಾರಿಗಳು ಹೇಳಿದ್ದ ಎರಡು ಹೆಸರುಗಳು, ಛಾಯಾಗ್ರಾಹಕರು, ಅರಣ್ಯವಾಸಿಗಳು ಮತ್ತು ಸಂರಕ್ಷಣಾವಾದಿಗಳ ಗಮನ ಸೆಳೆದಿದ್ದು, ಈ ಹೆಸರುಗಳಿಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಸಾಮಾನ್ಯವಾಗಿ ಆನೆಗಳನ್ನು ಸೆರೆ ಹಿಡಿದಾಗ ಅವುಗಳನ್ನು ನಿಯಂತ್ರಿಸಲು ಅಥವಾ ಅವುಗಳೊಂದಿಗೆ ಸಂವಹನ ಸಂಪರ್ಕ ನಿರ್ಮಿಸಿಕೊಳ್ಳಲು ಅವುಗಳ ಮಾವುತರು ಮತ್ತು ನಿಯಂತ್ರಕರು ಆನೆಗಳಿಗೆ ನಿರ್ಧಿಷ್ಟ ಹೆಸರನ್ನು ನೀಡಿ ಕರೆಯುತ್ತಾರೆ. ಪಳಗಿದಂತೆ ಆನೆಗಳೂ ಕೂಡ ಆ ಹೆಸರಿಗೆ ಒಗ್ಗಿಕೊಳ್ಳುತ್ತವೆ. ಆದರೆ ಪ್ರಸ್ತುತ ಇದೇ ಹೆಸರುಗಳು ಭಾರಿ ಚರ್ಚೆಗೆ ಕಾರಣವಾಗಿದೆ.
ಸಕಲೇಶ ಪುರದಲ್ಲಿ ಸೆರೆ ಹಿಡಿಯಲಾದ ಆನೆಗಳಿಗೆ ಗಸ್ತು ತಂಡವು "ಮೌಂಟೇನ್ ಮತ್ತು ಗುಂಡಾ ಹೆಸರನ್ನಿಟ್ಟಿವೆ. ಆದರೆ ಈ ಹೆಸರುಗಳಿಗೆ ಕೆಲವು ಪ್ರಾಣಿ ಸಂರಕ್ಷಣಾವಾದಿಗಳು ವಿರೋಧ ವ್ಯಕ್ತಪಡಿದ್ದರೆ, ಇತರರು ಕಾರ್ಯಾಚರಣೆ ಸಂದರ್ಭದಲ್ಲಿ ಸಿಬ್ಬಂದಿಗಳು ಆನೆಗಳನ್ನು ಸೆರೆಹಿಡಿಯಲು ಅಥವಾ ಪತ್ತೆಹಚ್ಚಲು ಸುಲಭವಾಗಿ ಗುರುತಿಸುವ ಮಾರ್ಗವಾಗಿ ಹೆಸರನ್ನು ಇಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಗಸ್ತು ತಂಡಗಳು ಸಹ ಆನೆಗಳ ಹಿಂಡಿನ ಚಲನೆಯನ್ನು ತಿಳಿಸಲು ಇಂತಹ ಹೆಸರುಗಳನ್ನು ಸಹವರ್ತಿಗಳಿಗೆ ಮತ್ತು ಸ್ಥಳೀಯರಿಗೆ ಎಸ್‌ಎಂಎಸ್ ಎಚ್ಚರಿಕೆಗಳನ್ನು ರವಾನಿಸಲು ಬಳಕೆ ಮಾಡಿದ್ದಾರೆ.
"ಇಪ್ಪತ್ತು ವರ್ಷದ ಮೌಂಟೇನ್ ಆನೆಯು ಈ ಹೆಸರನ್ನು ಪಡೆದದ್ದು ಅವನ ಗಾತ್ರದ ಕಾರಣದಿಂದಲ್ಲ, ಆದರೆ ಅದು ಮೊದಲು ಪರ್ವತದ ಬಳಿ ಕಾಣಿಸಿಕೊಂಡಿದ್ದರಿಂದ ಅದನ್ನು ಮೌಂಟೇನ್ ಎಂದು ಕರೆಯಲಾಗುತ್ತಿದೆ. 30 ವರ್ಷದ ಗುಂಡಾ ಎಂದರೆ ಕೇವಲ ಸುತ್ತಿನ ಅರ್ಥ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
ಅಷ್ಟೇ ಅಲ್ಲ ಸಿಬ್ಬಂದಿಗಳು ಮೂರು ಆನೆಗಳಿಗೆ ರೇಡಿಯೊ-ಕಾಲರ್ ಅಳವಡಿಸಿದ್ದು, ಅದರ ಮೂಲಕ ಆನೆಗಳ ಹಿಂಡನ್ನು ಗುರುತಿಸುತ್ತಾರೆ. ರೇಡಿಯೊ-ಕಾಲರ್ ಮಾಡಿದ ಮೊದಲ ಆನೆಯನ್ನು ‘ಓಲ್ಡ್ ಬೆಲ್ಟ್’ ಎಂದು, ಎರಡನೆಯದನ್ನು ‘ಬೀತಮ್ಮ’ ಮತ್ತು ಮೂರನೆಯದನ್ನು ‘ಭುವನೇಶ್ವರಿ’ ಎಂದು ಕರೆಯಲಾಗುತ್ತದೆ. ಇದೇ ಹೆಸರುಗಳ ಮೂಲಕವೇ ಆನೆಗಳ ಹಿಂಡನ್ನು ಪತ್ತೆ ಮಾಡುತ್ತಾರೆ.