ರಾಜ್ಯದ ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧ ಸಡಿಲಾಗುತ್ತಿದ್ದಂತೆಯೇ ಜನಸಂಚಾರ ಶುರು!

ಕೋವಿಡ್ -19 ಪ್ರಕರಣಗಳು ಕ್ಷೀಣಿಸುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿರುವ ಹಿನ್ನೆಲೆ ಕರ್ನಾಟಕದ 19 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಮೊದಲ ದಿನ ಮಳೆ ಅನೇಕ ಸ್ಥಳಗಳಲ್ಲಿ ಜನರನ್ನುಮನೆಯಲ್ಲೇ ಇರುವಂತೆ ಮಾಡಿದೆ.ಕೆಲವು ಜಿಲ್ಲೆಗಳಲ್ಲಿ, ಸ್ಥಳೀಯಾಡಳಿತವು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿತು

Published: 15th June 2021 08:04 AM  |   Last Updated: 15th June 2021 12:59 PM   |  A+A-


ಹುಬ್ಬಳ್ಳಿಯ ರಸ್ತೆಯಲ್ಲಿ ವಾಹನದಟ್ಟಣೆ

Posted By : Raghavendra Adiga
Source : The New Indian Express

ಬೆಂಗಳೂರು: ಕೋವಿಡ್ -19 ಪ್ರಕರಣಗಳು ಕ್ಷೀಣಿಸುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿರುವ ಹಿನ್ನೆಲೆ ಕರ್ನಾಟಕದ 19 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಮೊದಲ ದಿನ ಮಳೆ ಅನೇಕ ಸ್ಥಳಗಳಲ್ಲಿ ಜನರನ್ನು ಮನೆಯಲ್ಲೇ ಇರುವಂತೆ ಮಾಡಿದೆ. ಕೆಲವು ಜಿಲ್ಲೆಗಳಲ್ಲಿ, ಸ್ಥಳೀಯಾಡಳಿತವು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿತು. ಉದಾಹರಣೆಗೆ, ಉಡುಪಿಯಲ್ಲಿ, ಅನ್ ಲಾಕ್ ಮಾಡಿದ ಮೊದಲ ದಿನದ ಧಾರಾಕಾರ ಮಳೆಯಿಂದಾಗಿ, ಬೀದಿಗಳು ಬಹುತೇಕ ಖಾಲಿಯಾಗಿವೆ. ಕಾರವಾರ ಪಟ್ಟಣದ ಪರಿಸ್ಥಿತಿಯೂ ಇದೇ ಆಗಿತ್ತು.

ಉತ್ತರದ ಕಲಬುರಗಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ನಿರಂತರ ಮಳೆ ಬಂದಿದೆ. ಇದರಿಂದಾಗಿ ವಾಹನಗಳು ಮತ್ತು ಜನರ ಅತ್ಯಂತ ಕಡಿಮೆ ಸಂಚಾರ ಕಂಡುಬಂದಿದೆ. ಬಳ್ಳಾರಿಯಲ್ಲಿ ಅನ್ ಲಾಕ್ ಮಾಡಿದ ಮೊದಲ ದಿನ ಅನೇಕ ಜನರು ಮನೆಯೊಳಗೆ ಉಳಿಯಲು ತೀರ್ಮಾನಿಸಿದ್ದರು. ಕುತೂಹಲಕಾರಿಯಾಗಿ, ಗದiದ ರಸ್ತೆಗಳೂ ಸಹ ಬೆಳಿಗ್ಗೆ 10.30 ರವರೆಗೆ ನಿರ್ಜನ ನೋಟವನ್ನು ಬೀರುತ್ತಿದ್ದವು. ಕಿರಾಣಿ ಅಂಗಡಿಗಳು ಮತ್ತು ತರಕಾರಿ ಮಾರುಕಟ್ಟೆಗಳು ಮಧ್ಯಾಹ್ನ 2 ಗಂಟೆಗೆ ಮುಚ್ಚಬೇಕಾಗಿದ್ದರಿಂದ ಜನರು ನಂತರ ರಸ್ತೆಗಳಿಗೆ ಆಗಮಿಸಿದ್ದರು. 

ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವವರಿಗೆ ಮಾತ್ರ ಕಿರಾಣಿ ದೊರಕುತ್ತದೆ ಎನ್ನುವುದನ್ನು ಅಂಗಡಿಯವರು ಖಚಿತಪಡಿಸಿಕೊಂಡರು. ಆದರೆ, ಹುಬ್ಬಳ್ಳಿ-ಧಾರವಾಡದ ಅವಳಿ ನಗರಗಳಲ್ಲಿ, ಜನರು ತಮ್ಮ ಕೆಲಸದ ಸ್ಥಳವನ್ನು ತಲುಪಲು ಅಥವಾ ಅಗತ್ಯ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸುವಾಗ ರಸ್ತೆಗಳಲ್ಲಿ ಭಾರಿ ದಟ್ಟಣೆ ಇತ್ತು. ಖಾಸಗಿ ವಾಹನಗಳು ಮತ್ತು ಆಟೋರಿಕ್ಷಾಗಳು ಗರಿಷ್ಠ ಪ್ರಮಾಣದಲ್ಲಿ ರಸ್ತೆಯಲ್ಲಿದ್ದವು.

ಕುತೂಹಲಕಾರಿ ಸಂಗತಿಯೆಂದರೆ, ಬಾಗಲಕೋಟೆ ಜಿಲ್ಲೆಯಲ್ಲಿ, ರಾಜ್ಯ ಸರ್ಕಾರವು ಮಧ್ಯಾಹ್ನ 2 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದರೂ, ಜಿಲ್ಲಾಡಳಿತವು ಮಧ್ಯಾಹ್ನ 12 ಗಂಟೆಗೆಲ್ಲಾ ಅಂಗಡಿ ಮುಂಗಟ್ಟನ್ನು ಮುಚ್ಚಲು ಆದೇಶಿಸಿದೆ. “ತಜ್ಞರ ಸಲಹೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಅವರು ಮುಂದಿನ ಒಂದು ವಾರ ಅಥವಾ ಹತ್ತು ದಿನಗಳು ಕೊರೋನಾವನ್ನು ತಗ್ಗಿಸಲು ನಿರ್ಣಾಯಕವೆಂದು ಹೇಳಿದ್ದಾರೆ. ಆದ್ದರಿಂದ, ಜೂನ್ 21 ರವರೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ನಿರ್ಬಂಧಿಸಲಾಗಿದೆ”.

ಏತನ್ಮಧ್ಯೆ, ತುಮಕೂರಿನಲ್ಲಿ, ಹೈಕೋರ್ಟ್ ಆದೇಶದ ನಂತರ ಸಾವಿರಾರು ವಾಹನ ಮಾಲೀಕರು ತಮ್ಮ ವಾಹನಗಳನ್ನು ಹಿಂಪಡೆಯಲು ಪೊಲೀಸ್ ಠಾಣೆಗಳಿಗೆ ಆಗಮಿಸಿದರು. ಜಿಲ್ಲೆಯ ತರಕಾರಿ ಮಾರುಕಟ್ಟೆಗಳಲ್ಲಿ ಅಥವಾ ಕಿರಾಣಿ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಇರಲಿಲ್ಲ. ಕೋಲಾರದಲ್ಲಿ, ಜನರು ದ್ವಿಚಕ್ರ ವಾಹನಗಳಲ್ಲಿ ರಸ್ತೆಗಳಲ್ಲಿ ಕಿಕ್ಕಿರಿದಾಗ ಪರಿಸ್ಥಿತಿ ನಿಯಂತ್ರಣ ಸಾಧ್ಯವಾಗಿಲ್ಲ. ಹಲವರು ಮೋಟರ್ ಸೈಕಲ್‌ಗಳಲ್ಲಿ ತ್ರಿಬಲ್ ರೈಡಿಂಗ್ ಕಂಡಿದೆ. ಮತ್ತು ಕೆಲವರು ಮಾಸ್ಕ್ ಗಳನ್ನು ಸಹ ಹೊಂದಿರಲಿಲ್ಲ. ಸಾಮಾಜಿಕ ಅಂತರ ಮಾನದಂಡಗಳು ಮರೆಯಾಗಿದ್ದವು.

ಏಪ್ರಿಲ್ 27 ರಂದು, ಕೋವಿಡ್ -19 ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿತ್ತು. ಸೋಮವಾರ ಕೆಲವು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದ್ದರೂ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮೀಣ, ಮಂಡ್ಯ, ಬೆಳಗಾವಿ, ಕೊಡಗು ಜಿಲ್ಲೆಗಳಲ್ಲಿ ಲಾಕ್ ಮುಂದುವರಿಯಲಿದೆ


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp