ಕೋವಿಡ್-19 ಮೂರನೇ ಅಲೆ ನಡುವೆ ಕಲ್ಯಾಣ ಕರ್ನಾಟಕದ ಮಕ್ಕಳಲ್ಲಿನ ಅಪೌಷ್ಟಿಕತೆ ಆತಂಕಕಾರಿ!

ಕೋವಿಡ್-19 ಮೂಲನೆ ಅಲೆ ಭೀತಿ ಕಾಡುತ್ತಿದ್ದು, ಪ್ರಮುಖವಾಗಿ ಮಕ್ಕಳ ಮೇಲೆ ಈ ಮೂರನೇ ಅಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. 
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಕಲಬುರಗಿ: ಕೋವಿಡ್-19 ಮೂಲನೆ ಅಲೆ ಭೀತಿ ಕಾಡುತ್ತಿದ್ದು, ಪ್ರಮುಖವಾಗಿ ಮಕ್ಕಳ ಮೇಲೆ ಈ ಮೂರನೇ ಅಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಮೂರನೇ ಅಲೆಯ ಭೀತಿಯ ನಡುವೆಯೇ ಕಲ್ಯಾಣ ಕರ್ನಾಟಕದ ಮಕ್ಕಳಲ್ಲಿನ ಅಪೌಷ್ಟಿಕತೆ ಆತಂಕಕಾರಿಯಾಗಿ ಪರಿಣಮಿಸಿದೆ. 

ಹಿಂದುಳಿದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ಪ್ರಮಾಣದಲ್ಲಿ ಕಡಿಮೆ ತೂಕ ಹೊಂದಿರುವ ಹಾಗೂ ತೀವ್ರವಾದ ಪ್ರಮಾಣದಲ್ಲಿ ಕಡಿಮೆ ತೂಕ ಹೊಂದಿರುವ ಮಕ್ಕಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ವರ್ಷ ನಡೆಸಿದ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಒಟ್ಟಾರೆ 4,36,516 ಮಂದಿ ಕಡಿಮೆ ತೂಕ ಹೊಂದಿರುವ ಮಕ್ಕಳಿದ್ದಾರೆ. ಈ ಪೈಕಿ ಮೇಲೆ ಹೇಳಿದ ನಾಲ್ಕು ಜಿಲ್ಲೆಗಳಲ್ಲಿ 1,20,048 ಮಂದಿ ಮಕ್ಕಳು ಅಪೌಷ್ಟಿಕತೆ ಹಾಗೂ ಕಡಿಮೆ ತೂಕದಿಂದ ಬಳಲುತ್ತಿದ್ದಾರೆ. 

ರಾಯಚೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಧ್ಯಮ ಪ್ರಮಾಣದ ಕಡಿಮೆ ತೂಕ ಇರುವ ಮಕ್ಕಳಿದ್ದು (41,416) ಈ ನಂತರದ ಸ್ಥಾನದಲ್ಲಿ ಬೀದರ್ (28,868) ಕಲಬುರಗಿ (28,154) ಹಾಗೂ ಯಾದಗಿರಿ (21,610) ಜಿಲ್ಲೆಗಳಿವೆ.

ಇನ್ನು ತೀವ್ರವಾದ ತೂಕ ಇಳಿಕೆ ಕಂಡಿರುವ (ತೀವ್ರವಾದ ಅಪೌಷ್ಟಿಕತೆ ಎದುರಿಸುತ್ತಿರುವ) 648  ಮಕ್ಕಳು ರಾಯಚೂರಿನಲ್ಲೆ ಇದ್ದು, ಈ ವಿಭಾಗದಲ್ಲೂ ರಾಯಚೂರು ಮುಂದಿದೆ. ನಂತರದ ಸ್ಥಾನದಲ್ಲಿ ಕಲಬುರಗಿ (632) ಯಾದಗಿರಿ (359) ಹಾಗೂ ಬೀದರ್ (53) ಇದೆ.

ನಾಲ್ಕು ಜಿಲ್ಲೆಗಳಿಂದ ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಿರುವ ಒಟ್ಟಾರೆ ಮಕ್ಕಳ ಸಂಖ್ಯೆ 7,20,705 ಆಗಿದ್ದು (ಕಲಬುರಗಿ-2,23,241, ರಾಯಚೂರು-2,21,553, ಬೀದರ್-1,43,166, ಯಾದಗಿರಿ- 1,32,745) ಸ್ವಾಭಾವಿಕವಾಗಿರುವ 5,93,580 ಮಂದಿ ಮಕ್ಕಳಿದ್ದಾರೆ (ಕಲಬುರಗಿ-1,94,455, ರಾಯಚೂರು-1,79,489, ಯಾದಗಿರಿ-1,10,776 ಹಾಗೂ ಬೀದರ್-1,08,866) ಮಕ್ಕಳಿದ್ದಾರೆ.

ರಾಯಚೂರಿನಲ್ಲಿ 6 ವರ್ಷಕ್ಕಿಂತ ಕಿರಿಯ ವಯಸ್ಸಿನ 2,653 ಮಕ್ಕಳು ಹಾಗೂ ಇದೇ ವಯಸ್ಸಿನ 1,005 ಮಂದಿ ಮಕ್ಕಳಿಗೆ ಕಲಬುರಗಿಯಲ್ಲಿ ಎರಡನೇ ಅಲೆಯಲ್ಲಿ ಕೋವಿಡ್-19 ಸೋಂಕು ತಗುಲಿತ್ತು. ಕಲಬುರಗಿಯಲ್ಲ್ಪಿ 7-18 ವಯಸ್ಸಿನ 3,623 ಮಕ್ಕಳಿಗೆ ಕೋವಿಡ್-19 ಸೋಂಕು ತಗುಲಿತ್ತು.

ಈ ಬಗ್ಗೆ ಕಲಬುರಗಿಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, ಡಿಸಿ ವಿವಿ ಜ್ಯೋತ್ಸ್ನಾ ಅವರ ನೇತೃತ್ವದಲ್ಲಿ ಮಕ್ಕಳ ಬಗ್ಗೆ ನಿಗಾ ವಹಿಸುವುದಕ್ಕೆ ಹಾಗೂ ಕೋವಿಡ್-19 ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಸಭೆ ನಡೆದಿದೆ. ವಿವಿಧ ಆಸ್ಪತ್ರೆಗಳ ವೈದ್ಯರು, ಮಕ್ಕಳ ತಜ್ಞರು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಮಕ್ಕಳಿಗಾಗಿ ಬೆಡ್ ಗಳ ವ್ಯವಸ್ಥೆಯನ್ನು ಹೆಚ್ಚುಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com