ರಾಜ್ಯ ಸರ್ಕಾರ ಕೋವಿಡ್-19 ಮೃತರ ಸಂಖ್ಯೆಯನ್ನು ತಿರುಚುತ್ತಿದೆ; ಎನ್ ಡಿಎಂ ಕಾಯ್ದೆ ಪ್ರಕಾರ ಪರಿಹಾರ ನೀಡಲಿ: ಕಾಂಗ್ರೆಸ್

ರಾಜ್ಯ ಸರ್ಕಾರ ಕೋವಿಡ್-19 ಮೃತರ ಸಂಖ್ಯೆಯನ್ನು ತಿರುಚುತ್ತಿದೆ ಎಂದು ಆರೋಪ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಸಂತ್ರಸ್ತರ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯ ಪ್ರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ. 
ಕೋವಿಡ್-19 ಸಾವು (ಸಂಗ್ರಹ ಚಿತ್ರ)
ಕೋವಿಡ್-19 ಸಾವು (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್-19 ಮೃತರ ಸಂಖ್ಯೆಯನ್ನು ತಿರುಚುತ್ತಿದೆ ಎಂದು ಆರೋಪ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಸಂತ್ರಸ್ತರ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯ ಪ್ರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ. 

ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯ ಪ್ರಕಾರ ಮೃತರ ಕುಟುಂಬ ಸದಸ್ಯರಿಗೆ ಸರ್ಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಆದರೆ ಸರ್ಕಾರ ಒಂದು ಲಕ್ಷ ಮಾತ್ರ ಪರಿಹಾರ ಘೋಷಣೆ ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ. 

ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಉಸ್ತುವಾರಿ, ಮಾಜಿ ಸಚಿವ ಹೆಚ್. ಕೆ ಪಾಟೀಲ್ ಜೂ.16 ರಂದು ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಜೂನ್ 14 ರಂದು ರಾಜ್ಯದಲ್ಲಿ 33,033 ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತಿವೆ.

ಆದರೆ ಜನವರಿ 1, 2021 ರಿಂದ ಜೂನ್ 13 ರ ಅವಧಿಯಲ್ಲಿ ರಾಜ್ಯದಲ್ಲಿ 3,27,985 ಮಂದಿ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ. ಆದರೆ 3.28 ಲಕ್ಷ ಹಾಗೂ 33,033 ರ ನಡುವೆ ಇರುವ ಅಂತರ ಪ್ರಶ್ನೆ ಮೂಡಿಸುತ್ತಿದೆ. ಈ ಆಧಾರದಲ್ಲಿ ಸ್ವಾಭಾವಿಕವಾಗಿ ಮೃತಪಟ್ಟಿರುವವರ ಸಂಖ್ಯೆ ಎಷ್ಟು? ಎಂದು ಪಾಟೀಲ್ ಪ್ರಶ್ನಿಸಿದ್ದಾರೆ. 

2020 ರಲ್ಲಿ ಮೃತಪಟ್ಟವರ ವರದಿಗಳನ್ನು ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. 2018-19 ರ ಅಂಕಿ-ಅಂಶಗಳ ಪ್ರಕಾರ ಜನವರಿಯಿಂದ ಜೂನ್ ವರೆಗೂ 88,000 ಸಾವುಗಳು ಸಂಭವಿಸಿವೆ ಎಂದು ಹೆಚ್ ಕೆ ಪಾಟೀಲ್ 

ಅಂದಾಜಿನ ಪ್ರಕಾರ ತೆಗೆದುಕೊಂಡರೂ 2021 ರಲ್ಲಿ 1.10 ಲಕ್ಷ ಸಾವು ಸಂಭವಿಸಬೇಕಿತ್ತು ಆದರೆ 3.28 ಲಕ್ಷ ಸಾವು ಊಹೆಗೂ ಮೀರಿದ್ದು ಎಂದು ಪಾಟೀಲ್ ಆರೋಪಿಸಿದ್ದಾರೆ.

ಈ ಪೈಕಿ 1.10 ಲಕ್ಷ ಸಾವುಗಳನ್ನು ಹೊರತುಪಡಿಸಿದರೂ ಒಟ್ಟಾರೆ ಸಾವಿನ ಸಂಖ್ಯೆ 2.18 ಲಕ್ಷವಾಗಿರುತ್ತದೆ. ಇದು ಅತ್ಯಂತ ಹೆಚ್ಚಿನ ಅಂಕಿ-ಸಂಖ್ಯೆಯಾಗಿದೆ. 2.25 ಲಕ್ಷ ಸಾವುಗಳ ಸಂಖ್ಯೆಯನ್ನು ತಿರುಚಲಾಗಿದೆ, ಇದು ಅಮಾನವೀಯ ಎಂದು ಪಾಟೀಲ್ ಹೇಳಿದ್ದಾರೆ.

ಸರ್ಕಾರ ಮಾಸಿಕವಾಗಿ ಪ್ರಕಟಿಸುತ್ತಿದ್ದ ಮೃತರ ವರದಿಯನ್ನು ನಿಲ್ಲಿಸಿದೆ. ಹಾಗೂ 2019-20 ಹಾಗೂ 2020-21 ರ ಅವಧಿಯಲ್ಲಿ ವೈದ್ಯಕೀಯವಾಗಿ ಪ್ರಮಾಣೀಕರಿಸಲಾದ ಸಾವುಗಳ ಕಾರಣದ ವರದಿಯನ್ನು ನಿಲ್ಲಿಸಿದೆ ಎಂದು ಪಾಟೀಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com