ಕಿಡ್ನಿ ಕಸಿ ಸಕ್ಸಸ್: ಮಹಿಳೆಗೆ ಹೊಸ ಜೀವನ ನೀಡಿದ ಸಂಚಾರಿ ವಿಜಯ್

ಸಮಾಜ ಸೇವೆ ಮೂಲಕ ಅತ್ಯಂತ ಅಲ್ಪಾವಧಿಯಲ್ಲಿಯೇ ಎಲ್ಲರ ಪ್ರೀತಿ ಹಾಗೂ ಮೆಚ್ಚುಗೆಗೆ ಪಾತ್ರರಾದ ನಟ ಸಂಚಾರಿ ವಿಜಯ್ ಅವರು ಸಾವಿನ ನಂತರವೂ ಹಲವರಿಗೆ ಹೊಸ ಜೀವನವನ್ನು ನೀಡಿದ್ದಾರೆ. 
ಸಂಚಾರಿ ವಿಜಯ್
ಸಂಚಾರಿ ವಿಜಯ್

ಬೆಂಗಳೂರು: ಸಮಾಜ ಸೇವೆ ಮೂಲಕ ಅತ್ಯಂತ ಅಲ್ಪಾವಧಿಯಲ್ಲಿಯೇ ಎಲ್ಲರ ಪ್ರೀತಿ ಹಾಗೂ ಮೆಚ್ಚುಗೆಗೆ ಪಾತ್ರರಾದ ನಟ ಸಂಚಾರಿ ವಿಜಯ್ ಅವರು ಸಾವಿನ ನಂತರವೂ ಹಲವರಿಗೆ ಹೊಸ ಜೀವನವನ್ನು ನೀಡಿದ್ದಾರೆ. 

ಮೆದುಳು ನಿಷ್ಕ್ರಿಯದಿಂದಾಗಿ ಮೃತಪಟ್ಟ ನಟ ಸಂಚಾರಿ ವಿಜಯ್ ಅವರ ಕಿಡ್ನಿಯನ್ನು ಮಹಿಳೆಯೊಬ್ಬರಿಗೆ ಜೋಡಣೆ ಮಾಡಲಾಗಿದೆ.

ನಗರದ ಲಗ್ಗೆರೆ ಮೂಲದ 34 ವರ್ಷ ವಯಸ್ಸಿನ ಮಹಿಳೆಗೆ ವಿಜಯ್ ಅವರ ರಕ್ತದ ಗುಂಪು, ಡಿಎನ್ ಎ, ಕಿಡ್ನಿ ಗಾತ್ರ ಎಲ್ಲವೂ ಹೊಂದಾಣಿಕೆಯಾಗಿತ್ತು. ಹೀಗಾಗಿ ಕಿಡ್ನಿಯನ್ನು ಯಶಸ್ವಿಯಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಟ್ರಾನ್ಸ್ ಪ್ಲಾಂಟೇಷನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಮಂಗಳವಾರ ರಾತ್ರಿ ಸರ್ಕಾರ ನಡೆಸುತ್ತಿರುವ ಜೀವ ಸಾರ್ಥಕತೆ ಸಂಸ್ಥೆಗೆ ಅಪೊಲೋ ಆಸ್ಪತ್ರೆಯ ಆಡಳಿತ ಮಂಡಳಿ ಮಾಹಿತಿ ನತೀಡಿದ್ದು, ಮಹಿಳೆಗೆ ದಿವಂಗತ ನಟನ ಕಿಡ್ನಿ ನೀಡುವುದಾಗಿ ತಿಳಿಸಿತ್ತು. 

ಇದರಂತೆ ಮೂರು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಗೆ ಯಶಸ್ವಿಯಾಗಿ ಕಿಡ್ನಿ ಜೋಡಣೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದ ನೆಫ್ರಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಇ.ಮಹೇಶ್ ಅವರು ಮಾತನಾಡಿ, ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ವಾರದೊಳಗಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com