ಮ್ಯಾಗ್ನೆಟಿಕ್ ಎಫೆಕ್ಟ್: ಲಸಿಕೆ ಪಡೆದ ಬೆಂಗಳೂರು ಮಹಿಳೆ ತೋಳಿಗೆ ಅಂಟಿಕೊಂಡ ಕೀಲಿ, ಫೋರ್ಕ್!

ಮಹಾರಾಷ್ಟ್ರ, ಗುಜರಾತ್ ಮತ್ತು ಉಡುಪಿಯ ನಂತರ ಕೋವಿಡ್ ಲಸಿಕೆ ಪಡೆದ ಬೆಂಗಳೂರಿನ ಮಹಿಳೆಯಲ್ಲಿ ಅಯಸ್ಕಾಂತೀಯ ಗುಣಗಳು ಪತ್ತೆಯಾಗಿವೆ.
ಲಸಿಕೆ ಪಡೆದ ಮಹಿಳೆ
ಲಸಿಕೆ ಪಡೆದ ಮಹಿಳೆ

ಬೆಂಗಳೂರು: ಮಹಾರಾಷ್ಟ್ರ, ಗುಜರಾತ್ ಮತ್ತು ಉಡುಪಿಯ ನಂತರ ಕೋವಿಡ್ ಲಸಿಕೆ ಪಡೆದ ಬೆಂಗಳೂರಿನ ಮಹಿಳೆಯಲ್ಲಿ ಅಯಸ್ಕಾಂತೀಯ ಗುಣಗಳು ಪತ್ತೆಯಾಗಿವೆ.

ಬೆಳ್ಳಂದೂರು ನಿವಾಸಿ ಜ್ಯೋತಿ ಗೌಡ ಏಪ್ರಿಲ್ 26 ರಂದು ಮೊದಲ ಹಾಗೂ ಮೇ 29 ರಂದು ಕೊವ್ಯಾಕ್ಸಿನ್ ನ ಎರಡನೇ ಲಸಿಕೆ ಪಡೆದಿದ್ದರು.

ಉತ್ತರ ಭಾರತದಲ್ಲಿ ನಡೆದ ಘಟನೆಯ ಬಗ್ಗೆ ಓದಿದ ನಂತರ ನಾನು ಅಡುಗೆ ಮನೆಯಲ್ಲಿ ಫೋರ್ಕ್ ತೆಗೆದುಕೊಂಡು ನನ್ನ ತೋಳಿಗೆ ಹಿಡಿದಾಗ ಅದು ಅಂಟಿಕೊಂಡಿತು, ಅದೇ ರೀತಿ ಮನೆಯ ಕೀಲಿ ಕೂಡ ತೋಳಿಗೆ ಅಂಟಿಕೊಂಡಿತ್ತು.

ಆದರೆ ನನ್ನ ಜೊತೆ ಲಸಿಕೆ ತೆಗೆದುಕೊಂಡಿದ್ದ ನನ್ನ ಪತಿಯ ಮೇಲೆ ಇದು ಪರಿಣಾಮ ಬೀರಲಿಲ್ಲ, ಸುಮಾರು ಐದಾರು ಬಾರಿ ನನ್ನ ಬಲ ತೋಳಿನ ಮೇಲೆ ನಾನು ಈ ಪ್ರಯೋಗ ಮಾಡಿದೆ. ಆದರೆ ಎಡ ತೋಳಿನ ಮೇಲೆ ಅಂಟಿಕೊಳ್ಳಲಿಲ್ಲ, ಜೊತೆಗೆ ಕಾಲಿನಲ್ಲೂ ಯಾವುದೇ ಪರಿಣಾಮ ಆಗಲಿಲ್ಲ ಎಂದು ಜ್ಯೋತಿ ಗೌಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಗುಜರಾತ್‌ ಒಬ್ಬ ವ್ಯಕ್ತಿಯು ತನ್ನ ದೇಹಕ್ಕೆ ನಾಣ್ಯಗಳು ಮತ್ತು ಪಾತ್ರೆಗಳು ಅಂಟಿಕೊಂಡಿವೆ ಎಂದು ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನ ವ್ಯಕ್ತಿಯೊಬ್ಬರು ಎರಡು ಪ್ರಮಾಣದ ಕೋವಿಶೀಲ್ಡ್ ಲಸಿಕೆ ಪಡೆದ ನಂತರ ಕಾಂತೀಯ ಶಕ್ತಿಯನ್ನು ಪಡೆದಿದ್ದಾರೆ. ಅದೇ ರೀತಿ ಸೂರತ್ ನಲ್ಲೂ ಇದೇ ರೀತಿ ಘಟನೆ ವರದಿಯಾಗಿತ್ತು.

ಮತ್ತೊಂದು ಪ್ರಕರಣದಲ್ಲಿ, ಲಸಿಕೆ ಪಡೆದ ನಂತರ ಚಮಚಗಳು ಮತ್ತು ನಾಣ್ಯಗಳು ದೇಹಕ್ಕೆ ಅಂಟಿಕೊಂಡಿವೆ ಎಂದು ಉಡುಪಿಯ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಮತ್ತೊಂದು ಸಂದರ್ಭದಲ್ಲಿ, ಲಸಿಕೆ ತೆಗೆದುಕೊಳ್ಳದ ಸೂರತ್‌ನ ಇಬ್ಬರು ಜನರು ಸಹ ಈ ಕಾಂತೀಯ ಪರಿಣಾಮವನ್ನು ಪಡೆದಿದ್ದಾರೆ.

ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಈ ಹೇಳಿಕೆಗಳನ್ನು ಆಧಾರರಹಿತ ಎಂದಿದೆ. ಲಸಿಕೆಗಳು ಮಾನವ ದೇಹದಲ್ಲಿ ಕಾಂತೀಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ ಎಂದು ಪಿಐಬಿ ವೀಡಿಯೊವೊಂದರಲ್ಲಿ ತಿಳಿಸಿದೆ. ಕೋವಿಡ್ -19 ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಯಾವುದೇ ಲೋಹ ಆಧಾರಿತ ಪದಾರ್ಥಗಳನ್ನು ಹೊಂದಿರುವುದಿಲ್ಲ. ಲಘು ತಲೆನೋವು, ಇಂಜೆಕ್ಷನ್  ಪಡದೆ ಜಾಗದಲ್ಲಿ ನೋವು ಅಥವಾ ಊತ ಮತ್ತು ಸೌಮ್ಯ ಜ್ವರ ಮುಂತಾದವು ಬರುವುದು ಸಾಮಾನ್ಯವಾಗಿದೆ,ಎಂದು ಪಿಐಬಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com